ಬಾಗಲಕೋಟೆ ಜಿಲ್ಲೆ ಬಾದಾಮಿ ಬನಶಂಕರಿ ಶ್ರೀ ಗಾಯತ್ರಿ ಸಭಾ ಭವನದಲ್ಲಿ. ಕನ್ನಡ ನಾಡಿನ ಹೆಮ್ಮೆಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿ ಪ್ರಶಸ್ತಿ ಪ್ರಧಾನ ಸಮಾರಂಭ, ಚಾಲುಕ್ಯ ವರಸಿರಿ ಕೃತಿ ಲೋಕಾರ್ಪಣೆ ಹಾಗೂ ಇಮ್ಮಡಿ ಪುಲಿಕೇಶಿ ಭಾವಚಿತ್ರ ಸ್ಪರ್ಧೆ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ಆಗಸ್ಟ್ 8 ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ರಾಜ್ಯದ ೧೧ ಜಿಲ್ಲೆಗಳ ಪ್ರಶಸ್ತಿ ಪುರಸ್ಕೃತರು ೨೧ ಜಿಲ್ಲೆ ಕದಂಬ ಸೈನ್ಯ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಬಾದಾಮಿಯಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಕದಂಬ ಸೈನ್ಯ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ವಿನಾಯಕ ಸಂಡೂರ ವಿಜಯಪುರ, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಬಾಗಲಕೋಟೆ ಜಿಲ್ಲೆ ಅಧ್ಯಕ್ಷ ಶಿವು ನಿಂಗಪ್ಪ ಇಸರಡ್ಡಿ ಮುಧೋಳ, ವಿಜಯಪುರ ಜಿಲ್ಲೆ ಅಧ್ಯಕ್ಷ ಈರಯ್ಯ ಶಾಂತಯ್ಯ ಹಿರೇಮಠ, ಗದಗ ಜಿಲ್ಲೆ ಉಪಾಧ್ಯಕ್ಷ ಗವಿಸಿದ್ದಯ್ಯ ಹಳ್ಳಿ ಕೇರಿ ಮಠ, ರಾಜ್ಯ ಸಮಿತಿ ಸದಸ್ಯರು ಅಪ್ಪಣ್ಣ ಬಶೆಟ್ಟೆಪ್ಪ ನೂರಂದಪ್ಪ ಹುಂಡೇಕಾರ ಬನಶಂಕರಿ, ಬಸವನಗೌಡ ಪಾಟೀಲ್ ಮುಧೋಳ, ರೈತ ಸೇನಾ ಕನಾ೯ಟಕ ಬಾದಾಮಿ ತಾಲ್ಲೂಕು ಅಧ್ಯಕ್ಷ ಅಶೋಕ್ ಸಾತನ್ನವರ, ಆನಂದ ಸಂಗಪ್ಪ ಕಾಳಗಿ ವಿಜಯಪುರ ಉಪಸ್ಥಿತರಿದ್ದರು.