Homeಸುದ್ದಿಗಳುಕನ್ನಡ ಸಾಮ್ರಾಜ್ಯೋತ್ಸವ ಮನೆಮನೆಯ ಉತ್ಸವವಾಗಬೇಕು ; ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕರೆ

ಕನ್ನಡ ಸಾಮ್ರಾಜ್ಯೋತ್ಸವ ಮನೆಮನೆಯ ಉತ್ಸವವಾಗಬೇಕು ; ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಕರೆ

Published on

ಕರ್ನಾಟಕದ ಇತಿಹಾಸ ವಿಶ್ವದ ಮಾನ್ಯತೆ ಪಡೆದು ಕನ್ನಡ ಭಾಷೆಗೆ ಶ್ರೀಮಂತಿಕೆಯನ್ನು ತಂದಿದೆ ಕನ್ನಡ ಸಾಮ್ರಾಜ್ಯದ ಉದಯಕ್ಕೆ ಮೂಲ ಕಾರಣವಾದ ಮಯೂರನ ಆಡಳಿತ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಆಚರಣೆಯಾಗಬೇಕು ಮಯೂರವರ್ಮನ ನಾಡಪ್ರೇಮ ಅಮರವಾಗಬೇಕು ವಿಶ್ವ ಮಟ್ಟದಲ್ಲಿ ಕನ್ನಡ ಸಾಮ್ರಾಜ್ಯೋತ್ಸವ ನಡೆಯುತ್ತಿರುವ ಈ ವೇಳೆ ಅತ್ಯಂತ ಮಹತ್ವದ ಸಂಗತಿ ಆಗಿದೆ ಎಂದು ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅಭಿಪ್ರಾಯ ಪಟ್ಟರು

ಕನ್ನಡ ಮೊದಲು ಬಳಗದ ವತಿಯಿಂದ ನಡೆದ ಮಯೂರ ವರ್ಮನ ನೆನಪಿನ ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮವನ್ನು ಕುರುಬಳ್ಳಿಯ ಚಾಲುಕ್ಯ ಡಾ ರಾಜಕುಮಾರ್ ಟ್ರಸ್ಟ್ ಸ್ಥಳದಲ್ಲಿನ ಮಯೂರವರ್ಮನ ಪ್ರತಿಮೆಗೆ ಕಿರೀಟಧಾರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕನ್ನಡ ಮೊದಲು ಬಳಗದ ಅಧ್ಯಕ್ಷರಾದ ಜ್ಞಾನೇಶ್ವರ ಮಧು ಅವರು ಮಾತನಾಡುತ್ತಾ ಕನ್ನಡ ಸಾಮ್ರಾಜ್ಯ ಉದಯವಾಗಿ 1681 ವರ್ಷಗಳ ಇತಿಹಾಸ ನಮ್ಮಲ್ಲಿ ಕಂಡು ಬಂದಿದೆ ಎಂದರು.

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಸ್ಪೈನ್ ಇಟಲಿ ದುಬೈ ಸೇರಿದಂತೆ ಇಂದು ರಾಜ್ಯದ ಅನೇಕ ಕನ್ನಡಪರ ಮನಸ್ಸುಗಳು ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು ಕನ್ನಡ ಭಾಷೆಯ ಬೆಳವಣಿಗೆಯ ಜೊತೆ ಜೊತೆಗೆ ಮಯೂರವರ್ಮನ ನೆನಪು ಉಳಿಯುವಂತಾಗಬೇಕು ಎಂದು ಕರೆ ನೀಡಿದರು

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ನೇ ಭ ರಾಮಲಿಂಗಶೆಟ್ಟಿ ಶೆಟ್ಟಿ ಮಾತನಾಡುತ್ತಾ ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡದ ಭಾಷೆ ಸದಾ ಕಾಲ ಜೀವಂತವಾಗಿರುತ್ತದೆ ಕನ್ನಡ ಚಳುವಳಿಗೆ ನಾಡಿನ ಚಳುವಳಿಗಾರರು ಸಾಹಿತಿಗಳು ಸದಾ ಕಾಲ ಜಾಗೃತರಾಗಿ ಕನ್ನಡ ಭಾಷೆಯನ್ನು ಉಳಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ರಾ ಲಕ್ಷ್ಮ ನಾರಾಯಣ್, ಕುರುಬರಹಳ್ಳಿ ರಮೇಶ, ಶಶಿಕುಮಾರ,ಯಲ್ಲಪ್ಪ. ವೈ. ಕುಂಬಾರ, ಶ್ರೀರಾಜ , ಶ್ರೀಮತಿ ಸಾರಿಕಾ ಶ್ರೀಮತಿ ವಾಣಿ , ಜಯರಾಮ, ಪ್ರಭು, ಹೀಗೆ ನೂರಾರು ಮಂದಿ ಗಣ್ಯರು ಭಾಗವಹಿಸಿದ್ದರು

Latest articles

More like this