ಬೈಲಹೊಂಗಲ-ಕಾರ್ಗಿಲ್ ವಿಜಯ ದಿವಸದ ನಿಮಿತ್ತ ಬೈಲಹೊಂಗಲ ನಗರದ ಬಸವ ನಗರ 2 ನೇ ಅಡ್ಡರಸ್ತೆ, ಹೊಸೂರ ರೋಡ ನಿವಾಸಿಯಾದ, ಮಡ್ದೆಪ್ಪ ಮಲ್ಲಪ್ಪ ಕುರಬೇಟ ಮಾಜಿ ಸೈನಿಕರು ಭಾರತೀಯ ಭೂಸೇನೆ ಇವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭೆ ನಗರ ಘಟಕದ ಅಧ್ಯಕ್ಷರಾದ ಮಹೇಶ ವೀರಭದ್ರಪ್ಪ ಕೋಟಗಿ (ಉಡಿಕೇರಿ ), ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ರುದ್ರಪ್ಪ ಕೊಪ್ಪದ, ಶ್ರೀರಾಮ ವಧು -ವರರ ಅನ್ವೇಷಣೆ ಕೇಂದ್ರದ ರಾಜ್ಯ ಸಂಚಾಲಕರಾದ ಬಸವರಾಜ ಗೋವಿಂದಪ್ಪ ಬಡಿಗೇರ ಅವರು ಸನ್ಮಾನಿಸಿ ಅಭಿನಂದಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ನೇಗಿನಹಾಳ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಿಕ್ಷಕಿಯರಾದ ಲಲಿತಾ ವೀರಭದ್ರಪ್ಪ ಕೋಟಗಿ,ಈಶ್ವರಿ ನಾಡಗೌಡ್ರ,ಕವಿತಾ ಬರಿಗಾಲ, ಅದೃಶಾನಂದ ಮಡ್ಡೆಪ್ಪ ಕುರುಬೆಟ್ಟ, ಪೂಜಾ ಅದೃಶಾನಂದ ಕುರುಬೆಟ್ಟ ಉಪಸ್ಥಿತರಿದ್ದರು.