Homeಸುದ್ದಿಗಳುಸಾಧನೆಯ ಹಾದಿಯಲ್ಲಿ ದುಶ್ಚಟದಿಂದ ದೂರವಿರುವುದೇ ಪ್ರಥಮ  ಹೆಜ್ಜೆ : ಉದಯ್ ಗೌಡ

ಸಾಧನೆಯ ಹಾದಿಯಲ್ಲಿ ದುಶ್ಚಟದಿಂದ ದೂರವಿರುವುದೇ ಪ್ರಥಮ  ಹೆಜ್ಜೆ : ಉದಯ್ ಗೌಡ

Published on

  ಮೂಡಲಗಿ:- ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)  ವತಿಯಿಂದ ನಾಗನೂರು ಗ್ರಾಮದ ಆಚಾರ್ಯ ಪದವಿ ಪೂರ್ವ  ಮಹಾವಿದ್ಯಾಲಯದಲ್ಲಿ  “ವಿಶ್ವ ತಂಬಾಕು ವಿರೋಧಿ ದಿನಾಚರಣೆಯ” ಕಾರ್ಯಕ್ರಮವು ಜರುಗಿತು.
  ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ (ರಿ.) ಅಥಣಿ-ಚಿಕ್ಕೋಡಿ ವಿಭಾಗದ   ಉದಯ್ ಗೌಡ ಹಾಗೂ  ಮಹಾವೀರ ಮೂಡಲಗಿ ಇವರು  ಗಿಡಕ್ಕೆ ನೀರುಣಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
 ಉದ್ಘಾಟಕರಾಗಿ ಆಗಮಿಸಿದ  ಉದಯ್ ಗೌಡ ಮಾತನಾಡಿದರು. ವಿದ್ಯಾರ್ಥಿಗಳು/ಯುವ ಸಮೂಹ ತಂದೆ, ತಾಯಿಗಳಿಗೆ ಆಸರೆಯಾಗಿರಬೇಕು. ಸಮಾಜದಲ್ಲಿ ಗೌರವಯುತವಾಗಿ  ಬದುಕಬೇಕು,ಮೊದಲು ದುಶ್ಚಟಗಳಿಂದ ದೂರವಿರಿ. ಸಾಧನೆಯ ಮೆಟ್ಟಿಲುಗಳನ್ನು ಹತ್ತಬೇಕಾದರೆ  ದುಶ್ಚಟದಿಂದ ದೂರವಿದ್ದು ಮುನ್ನಡೆಯಬೇಕೆಂದು ವಿದ್ಯಾರ್ಥಿಗಳಿಗೆ ಒಳ್ಳೆಯ ನಡತೆಯ ಬಗ್ಗೆ  ಹೇಳಿದರು.
   ಸಂಪನ್ಮೂಲ ವ್ಯಕ್ತಿಗಳು  ಗೋಕಾಕ ತಾಲೂಕು ಆಸ್ಪತ್ರೆಯ, ಆರೋಗ್ಯ ಶಿಕ್ಷಣಾಧಿಕಾರಿಗಳಾದ  ಬಸನಗೌಡ ಈಶ್ವರಪ್ಪಗೋಳ ಇವರು ಮಾತನಾಡಿ ತಂಬಾಕು  ರೈತ ಬೆಳೆಯುವ ಬೆಳೆಯಾಗಿದರೂ, ಕೀಟನಾಶಕ ಹಾಗೂ  ಗೋಡೆಯ ಬಣ್ಣಗಳಿಗೆ ಬಳಕೆ ಮಾಡುವಂತಹದ್ದು. ಕೀಟನಾಶಕಗಳಿಗೆ ಉಪಯೋಗವಾಗುವ ವಿಷಯವನ್ನು  ಮನುಷ್ಯ ಸೇವಿಸುತ್ತಾನೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಂತ  ಗೊತ್ತಿದ್ದರೂ  ಅದನ್ನು ಸೇವಿಸಿ  ಸಾವನ್ನು ಬರ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪದಾರ್ಥಗಳ ಸೇವನೆಯಿಂದ ಮನುಷ್ಯನ ಉಗುರು ಹಾಗೂ  ಕೂದಲನ್ನು ಹೊರತುಪಡಿಸಿ  ನಮ್ಮ ದೇಹದ ಎಲ್ಲಾ ಭಾಗಗಳಿಗೂ ಕ್ಯಾನ್ಸರ್ ಬರಬಹುದು ಆದ್ದರಿಂದ  ತಂಬಾಕು ಸೇವನೆ ಬಿಡಬೇಕು. ಮನುಷ್ಯನ ಆರೋಗ್ಯವನ್ನು ಹಣದಿಂದ ಕೊಳ್ಳಲು ಸಾಧ್ಯವಿಲ್ಲ. ದುಶ್ಟಟಗಳಿಂದ ದೂರವಿದ್ದರೆ ಮಾತ್ರ  ಉತ್ತಮ ಆರೋಗ್ಯ ಪಡೆಯಬಹುದು ಎಂದು ಯುವ ಸಮುದಾಯವನ್ನು ಎಚ್ಚರಿಸಿದ್ದರು.
ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಂತೋಷ ಯೋಜನಾಧಿಕಾರಿಗಳು ಸ್ವಸಹಾಯ ಸಂಘಗಳ ನಿರ್ವಹಣಾ ವಿಭಾಗ  ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳದ  ಧರ್ಮಾಧಿಕಾರಿಗಳಾದ  ಡಾ. ವೀರೇಂದ್ರ ಹೆಗಡೆಯವರ ಬಹು ಮುಖ್ಯ ಪಾತ್ರವಿದೆ ಎಂದರು.
  ದುಶ್ಚಟಗಳನ್ನು  ದೂರವಿಡುವಲ್ಲಿ ಜನಜಾಗೃತಿ ವೇದಿಕೆ, ಮಧ್ಯವರ್ಜನ ಶಿಬಿರ, ನವ ಜೀವನ ಸಮಿತಿ ಮತ್ತು ಸ್ವಾಸ್ಥ್ಯ ಸಂಕಲ್ಪ ಇವರುಗಳ ಆಶ್ರಯದಲ್ಲಿ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು. ಮಾದಕ ವಸ್ತುಗಳ ವಿರೋಧಿ ದಿನಾಚರಣೆ  ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವವು. ಜನರು ಜಾಗೃತರಾದರೆ ಮಾತ್ರ  ಉತ್ತಮವಾದ ಸಮಾಜವನ್ನು ಕಟ್ಟಬಹುದು ಎಂದು ವಿವರಿಸಿದರು.
    ಹರೀಶ್  ಕ್ಷೇತ್ರ ಯೋಜನಾಧಿಕಾರಿಗಳು  ಮೂಡಲಗಿ.
 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬ್ಯಾಂಕಿನ ವ್ಯವಹಾರಗಳನ್ನಷ್ಟಲ್ಲದೆ  ಅವರು ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು  ಅನುಷ್ಠಾನಿಸುತ್ತಾ ಬರುತ್ತಿದ್ದಾರೆ. ಜನರ ಅಭಿವೃದ್ಧಿ ಮಂತ್ರವೇ  ಗ್ರಾಮಾಭಿವೃದ್ಧಿ ಯೋಜನೆಯ ಧ್ಯೇಯವಾಗಿದೆ ಎಂದು ಹೇಳಿದರು.
   ಈ ಕಾರ್ಯಕ್ರಮದಲ್ಲಿ ದುಶ್ಟಗಳಿಂದ  ದೂರವಿರುತ್ತೇವೆ, ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ  ಎಂದು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಚನ ಸ್ವೀಕಾರ ಮಾಡಿಸಿದರು.
    ಆಚಾರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರವೀಣ ಕುಲಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ  ಗ್ರಾಮಾಭಿವೃದ್ಧಿ  ಯೋಜನೆ  ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿ  ವಿದ್ಯಾರ್ಥಿಗಳಲ್ಲಿ   ಜಾಗೃತಿಯನ್ನು ಮೂಡಿಸುತ್ತಿರುವುದು, ಅವರಿಗೆ ಪ್ರತಿಜ್ಞೆ ಸ್ವೀಕಾರ ಮಾಡಿಸುವುದು  ಸಮಾಜಕ್ಕೆ ನೀಡುವ ಉತ್ತಮ ಸಂದೇಶವಾಗಿದೆ. ಅದರಂತೆ ನಡೆದುಕೊಳ್ಳಿ  ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ  ಸಿಬ್ಬಂದಿಗಳು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Latest articles

More like this