ಮೂಡಲಗಿ:-ಪಟ್ಟಣದ ಲಕ್ಷ್ಮೀ ನಗರದಲ್ಲಿ ಆಶ್ರಯ ಸೇವಾ ಸಂಘ (ರಿ ) ಇವರ ನೇತೃತ್ವದಲ್ಲಿ, “ಅನಾಥ ಮಕ್ಕಳ ಆಶ್ರಮ” ಬುಧವಾರ ಉದ್ಘಾಟನೆಯಾಯಿತು.
ಮೂಡಲಗಿಯು ತಾಲೂಕಾದ ಮೇಲೆ ಅನಾಥ ಆಶ್ರಮ ಆಮಭವಾಗಿದೆ. ಈ ಅನಾಥ ಮಕ್ಕಳ ಉಜ್ವಲ ಭವಿಷ್ಯ ಬೆಳಗಲಿ. ಈ ಅನಾಥ ಆಶ್ರಮದ ಸಿಬ್ಬಂದಿಗಳಿಗೆ ಸದಾ ನಮ್ಮ ಸಹಕಾರ ಇರುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮರೆಪ್ಪ ಮರೆಯಪ್ಪಗೋಳ ಹೇಳಿದರು.
ನಮ್ಮ ಆಶ್ರಯ ಸೇವಾ ಸಂಘವು (ರಿ) ಅನಾಥ ಮಕ್ಕಳನ್ನು ನಮ್ಮ ಮಕ್ಕಳಂತೆ ಪ್ರೀತಿ,ವಿಶ್ವಾಸದಿಂದ ಕಾಣುತ್ತೇವೆ ಎಂದು ಸಂಘದ ಕಾರ್ಯದರ್ಶಿಗಳಾದ ವಸಂತ ಕಡಪಟ್ಟಿಯವರು ವಿಶ್ವಾಸದ ನುಡಿಗಳನ್ನಾಡಿದರು.
ಪಾಸ್ಟರ್ ವಿಲ್ಸನ್ ಡ್ಯಾಂ ಆಶ್ರಮದ ನೂತನ ಕಛೇರಿಯನ್ನು ಉದ್ಘಾಟಿಸಿ, ಸಸಿಗೆ ನೀರುಣಿಸಿ ಹಾಗೂ ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳು ಲೂಕ್ ನಂದಗಾವ, ಡೇವಿಡ್ ಕಡಬಗಟ್ಟಿ, ಮಾರುತಿ ಕೆಂಚನ್ನವರ, ಯಶವಂತ ಕೆಂಚನ್ನವರ, ಬಸವರಾಜು ಉಪ್ಪಾರಟ್ಟಿ, ಯಶವಂತ್ ಮಾರಿಹಾಳ ಶಿಕ್ಷಕರು,ರಮೇಶ ಸಣ್ಣಕ್ಕಿ, ಶಾಭು ಸಣ್ಣಕ್ಕಿ, ಭಗವಂತ ಉಪ್ಪಾರ, ಗಣಪತಿ ಜಾಡರ, ರವಿ ಮೂಡಲಗಿ, ಸದಾಶಿವ ಮೀಶಿ, ರಾಜಶೇಖರ್ ಹಿರೇಮಠ, ಪ್ರವೀಣ ಕೆಂಚನ್ನವರ ಇನ್ನು ಅನೇಕರು ಉಪಸ್ಥಿತರಿದ್ದು.
ಆಶ್ರಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಕಡಪಟ್ಟಿ ಸ್ವಾಗತಿಸಿ, ನಿರೂಪಿಸಿ ಮತ್ತು ವಂದಿಸಿದರು.