ಮಹಾ ಎಕ್ಸ್‌ಕ್ಲೂಸಿವ್…KPSC ನೇಮಕಾತಿ ‘ಮಹಾ ವಂಚಕ ಖಿಲಾಡಿಗಳು’ ಯಾರು?
ಬೀದರ – 2021ರ ಪಿಎಸ್‌ಐ ಹಗರಣ ಪ್ರಕರಣಕ್ಕೆ ಆರ ಡಿ ಪಾಟೀಲ ಎಂಬಾತನ ಹೆಸರು ಕೇಳಿಬರುತ್ತಿತ್ತು* ಕಲ್ಯಾಣ ಕರ್ನಾಟಕ ಭಾಗಕ್ಕೆ..ಕಲಬುರಗಿ ಜಿಲ್ಲೆ ಆರ್ ಡಿ ಪಾಟೀಲ ಹೆಸರು ಕೇಳಿಬಂತು. ಇವಾಗ ಮತ್ತೆ ಕಲ್ಯಾಣ ಕರ್ನಾಟಕ ಭಾಗದ ಹೆಸರು ಇಡೀ ರಾಜ್ಯಾದ್ಯಂತ ಕೇಳಿಬರುತ್ತದೆ. 2026ರ ಕೆಪಿಎಸ್‌ಸಿ ಪಶುವೈದ್ಯಕಿಯ ನೇಮಕಾತಿ ಕುರಿತು ಇಲಾಖೆ ವಿವಾದ… ಮತ್ತೆ ಮತ್ತೆ ಕೇಳಿಬರುತ್ತಿರುವ ಹೆಸರುಗಳು. ಬಸವರಾಜ್ ಕನ್ನಾಳೆ ಕಿಂಗ್ ಪಿನ್ ಮೂಲತ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಡೊಣಗಾಪೊರು ಗ್ರಾಮದ ನಿವಾಸಿ.
KPSC ಇಲಾಖೆ ರಾಜ್ಯ ಮತ್ತು ಕಲ್ಯಾಣ ಕರ್ನಾಟಕದ ಭಾಗದ ನೇಮಕಾತಿ ವ್ಯವಸ್ಥೆಯಲ್ಲಿ ಮತ್ತೆ ವಿವಾದದ ಬಿರುಗಾಳಿ ಎದ್ದಿದೆಯೇ?
2021ರಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷಾ ಪ್ರಕರಣ…ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಜೈಲು ಸೇರಿದರು.. ಈಗ ಈ ಪ್ರಕರಣದಲ್ಲಿ ಯಾರು ಯಾರು ಜೈಲು ಸೇರುತ್ತಾರೆ ? 2026ರಲ್ಲಿ ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿಗೆ ಸಂಬಂಧಿಸಿದ ವಿವಾದದ ಚರ್ಚೆಗಳು*… ನಡೆಯುತ್ತಿದೆ ಇದು ಎರಡು ಬೇರೆ ಬೇರೆ ಸರ್ಕಾರದ ಆಡಳಿತ ಸಂದರ್ಭಗಳಲ್ಲಿ ನಡೆದ ಪ್ರಕರಣ…
ಆದರೆ ಸಾರ್ವಜನಿಕರು ಕೇಳುತ್ತಿರುವ ಪ್ರಶ್ನೆ ಮಾತ್ರ ಒಂದೇ, ಈ ನೇಮಕಾತಿ ವಿವಾದಗಳ ಹಿಂದಿರುವ ನಿಜವಾದ ಸತ್ಯ ಏನು? ಎಂದು
ನೇಮಕಾತಿ ವ್ಯವಸ್ಥೆಯ ಮೇಲಿನ ಪ್ರಶ್ನೆಗಳು ಮಾತ್ರ ಏಕೆ ಬದಲಾಗಲಿಲ್ಲ ? ವರ್ಷಗಟ್ಟಲೆ ಓದಿದ…ಬಡ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ..ಹಗಲು ರಾತ್ರಿ ಕಷ್ಟಪಟ್ಟು…ತಂದೆ ತಾಯಿ ಕೆಲಸ ಮಾಡಿ ಮಕ್ಕಳಿಗೆ ಓದಿಸಿದ್ದು ವ್ಯರ್ಥ…ಕುಟುಂಬದ ಕನಸುಗಳನ್ನು ಹೊತ್ತು…ವಿದ್ಯಾರ್ಥಿಗಳ ಓದಿದ್ದು ವ್ಯರ್ಥ..ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿ ಇಂದು ಕೇಳುತ್ತಿರುವ ಪ್ರಶ್ನೆ ಒಂದೇ*…ನನ್ನ ಪ್ರತಿಭೆಗೆ ನ್ಯಾಯ ಸಿಗುತ್ತದೆಯೇ? ನನ್ನ ಪರಿಶ್ರಮಕ್ಕೆ ಬೆಲೆ ಸಿಗುತ್ತದೆಯೇ? ನನ್ನ ಭವಿಷ್ಯ ಸುರಕ್ಷಿತವಾಗಿದೆಯೇ? ಎಂಬ ಎಲ್ಲಾ ಪ್ರಶ್ನೆಗಳು ನಿಗೂಢವಾಗಿ ಉಳಿದಿವೆ.
ಆರೋಪಗಳು ಕೇಳಿಬಂದಾಗ ತನಿಖೆಯ ಮಾತು ಬರುತ್ತದೆ. ಹೆಸರುಗಳು ಕೇಳಿಬರುತ್ತವೆ. ರಾಜಕೀಯ ಆರೋಪ–ಪ್ರತ್ಯಾರೋಪಗಳು ನಡೆಯುತ್ತವೆ…
ಆದರೆ…ಕೊನೆಗೆ ನಷ್ಟವಾಗುವುದು ಯಾರಿಗೆ? ಪರೀಕ್ಷೆಗಾಗಿ ವರ್ಷಗಟ್ಟಲೆ ಶ್ರಮಿಸಿದ ಬಡ ವಿದ್ಯಾರ್ಥಿಗೆ! ಸರ್ಕಾರಿ ಉದ್ಯೋಗದ ಕನಸು ಕಂಡ ಯುವಕನಿಗೆ! ತನ್ನ ಮಗ ಅಥವಾ ಮಗಳ ಯಶಸ್ಸಿಗಾಗಿ ಕಾಯುತ್ತಿರುವ ಕುಟುಂಬಕ್ಕೆ! ಯಾವುದೇ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಆರೋಪಗಳಿದ್ದರೂ…ಅವುಗಳ ಸತ್ಯಾಸತ್ಯತೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯಿಂದಲೇ ಹೊರಬರಬೇಕು ತಪ್ಪಿತಸ್ಥರು ಯಾರೇ ಆಗಿರಲಿ… ಎಷ್ಟೇ ಪ್ರಭಾವಿಗಳಾಗಿರಲಿ… ಕಾನೂನಿನ ಮುಂದೆ ಎಲ್ಲರೂ ಸಮಾನರಾಗಬೇಕು.
ಅದೇ ವೇಳೆ… ನಿರಪರಾಧಿಗಳಿಗೆ ಅನ್ಯಾಯವಾಗಬಾರದು ರಾಜ್ಯ ಸರ್ಕಾರದ ಮುಂದೆ ಈಗ ಹಲವು ಪ್ರಶ್ನೆಗಳಿವೆ. 2022ರಿಂದ ಇಲ್ಲಿಯವರೆಗೆ ನಡೆದ ನೇಮಕಾತಿ ಪ್ರಕ್ರಿಯೆಗಳ ಕುರಿತು ಅಗತ್ಯವಿದ್ದಲ್ಲಿ ಸಮಗ್ರ ಪರಿಶೀಲನೆ ನಡೆಯುತ್ತದೆಯೇ*? ನೇಮಕಾತಿ ಸಂಸ್ಥೆಗಳ ಕಾರ್ಯವೈಖರಿಯ ಕುರಿತು ಮೂಡಿರುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆಯೇ? ಅಗತ್ಯವಿದ್ದಲ್ಲಿ ಸೂಕ್ತ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ… ಸತ್ಯವನ್ನು ರಾಜ್ಯದ ಜನತೆಯ ಮುಂದೆ ತರಲಾಗುತ್ತದೆಯೇ? 2021ರ ಪಿಎಸ್‌ಐ ನೇಮಕಾತಿ ಪ್ರಕರಣದಿಂದ… 2026ರ ಕೆಪಿಎಸ್‌ಸಿ ನೇಮಕಾತಿ ವಿವಾದದ ಚರ್ಚೆಯವರೆಗೆ… ಒಂದು ಪ್ರಶ್ನೆ ಮಾತ್ರ ನಿರಂತರವಾಗಿ ಕೇಳಿಬರುತ್ತಿದೆ…ನೇಮಕಾತಿ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗುವುದು ಯಾವಾಗ?ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ನ್ಯಾಯ ಸಿಗುವುದು ಯಾವಾಗ? ಪ್ರತಿಭೆಯ ಮುಂದೆ ಯಾವುದೇ ಪ್ರಭಾವ ನಿಲ್ಲುವ ದಿನ ಯಾವಾಗ? ಸತ್ಯ ಹೊರಬರಬೇಕು… ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು…
ನಿರಪರಾಧಿಗಳಿಗೆ ರಕ್ಷಣೆ ಸಿಗಬೇಕು.ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಯಾರೂ ಆಟವಾಡದಂತಹ ಬಲಿಷ್ಠ ನೇಮಕಾತಿ ವ್ಯವಸ್ಥೆ ನಿರ್ಮಾಣವಾಗಬೇಕು!
ವರದಿ : ನಂದಕುಮಾರ ಕರಂಜೆ, ಬೀದರ