Homeಸುದ್ದಿಗಳುಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ: ರೋಗನಿರೋಧಕ ಬೆಳೆಗಳಿಗೆ ಆದ್ಯತೆ ನೀಡಲು ರೈತರಿಗೆ ಸಲಹೆ

ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ: ರೋಗನಿರೋಧಕ ಬೆಳೆಗಳಿಗೆ ಆದ್ಯತೆ ನೀಡಲು ರೈತರಿಗೆ ಸಲಹೆ

Published on

ಮುಂಗಾರು ಬಿತ್ತನೆ ಬೀಜ ವಿತರಣೆಗೆ ಹುನಗುಂದ ಕೃಷಿ ಇಲಾಖೆ ಚಾಲನೆ

ಹುನಗುಂದ: ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಸೋಮವಾರ ಪಟ್ಟಣದ ఎపిఎంసి ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಮುಂಗಾರು ಬಿತ್ತನೆ ಬೀಜ ವಿತರಣೆಗೆ ಚಾಲನೆಯನ್ನು ನೀಡಲಾಯಿತು. ಈ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಅಂಟರತಾನಿ ಮಾತನಾಡಿ, ಈ ಬಾರಿ ಮುಂಗಾರು ಹಂಗಾಮಿನ ಪೂರ್ವದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಭಾರತೀಯ ಹವಾಮಾನ ವರದಿಯಂತೆ ಮುಂದೇನೂ ಕೂಡಾ ಅಂತಹ ಆಶಾದಾಯಕ ಮಳೆಯಾಗುವ ಸಂಭವವಿಲ್ಲದಿರುವದರಿಂದ ಇಂತಹ ಪರಿಸ್ಥಿತಿಯಲ್ಲಿ ರೈತರು ರೋಗ ನಿರೋಧಕ ಬೆಳೆಗಳಾದ ತೊಗರಿ, ಸೂರ್ಯಕಾಂತಿ, ಸಜ್ಜೆ ಹಾಗೂ ನವಣೆಯಂತಹ ಬೀಜ ಬಿತ್ತಿದರೇ ಮಾತ್ರ ಅಲ್ಪ ಮಳೆಗೆ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾದ ಬಿಕ್ಕಟ್ಟಿನಿಂದ ಯೂರಿಯಾ ಹಾಗೂ ಡಿಎಪಿ ಗೊಬ್ಬರದ ಕೊರತೆ ಸ್ವಲ್ಪ ಮಟ್ಟಿಗಿದೆ. ಬೇರೆ ಗೊಬ್ಬರ ಹಾಗೂ ಬೀಜದ ಕೊರತೆ ಇಲ್ಲ. ರೈತರು ಸಾವಯವ ಗೊಬ್ಬರ ಬಳಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ರೈತರು ಬೆಳೆಗಳಿಗೆ ಮಿತವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು. ಸರ್ಕಾರದ ತಾಂತ್ರಿಕ ನಿರ್ದೇಶನದಂತೆ ತಡವಾಗಿ ಬೀಜ ವಿತರಣೆ ಮಾಡಲಾಗುತ್ತಿದೆ. ಮಳೆ ಕಡಿಮೆ ಆಗಿದ್ದರಿಂದ ಬೀಜದ ಬೇಡಿಕೆ ಕಡಿಮೆಯಾಗಿದೆ ಎಂದರು.

ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ ಜೋಶಿ ಮಾತನಾಡಿ ರೈತರು ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಖರೀದಿಸುವಾಗ ಸಂಬಂಧಪಟ್ಟ ಅಂಗಡಿಯವರಿಂದ ಕಡ್ಡಾಯವಾಗಿ ರಶೀದಿ ಪಡೆಯಬೇಕು.ರೈತರು ಬೀಜೋಪಚಾರದಿಂದ ರೋಗಗಳ ನಿಯಂತ್ರಣದ ಜೊತೆಗೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಪ್ರಭು ಇದ್ದಲಗಿ, ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಜಾಲಿಹಾಳ, ಖಜಾಂಚಿ ಬಸವರಾಜ ಹೊಸಮನಿ, ನಿರ್ದೇಶಕರಾದ ಶರಣಗೌಡ ಅರಸಿಬಿಡಿ, ವಿಜಯ ಮಹಾಂತೇಶ ಮಲಗಿಹಾಳ, ಶರಣು ಗೋಲಪ್ಪನವರ, ಕೃಷಿ ಅಧಿಕಾರಿ ಮಹೇಶ ಕಟಗೇರಿ, ಸಂಗಮೇಶ ಸಜ್ಜನ ಅರುಣಕುಮಾರ ಚವ್ಹಾಣ, ಶಂಭಯ್ಯ ಹಿರೇಮಠ ಮತ್ತು ಶೇಖಣ್ಣ ನಾಗೂರ ಸೇರಿದಂತೆ ರೈತರು ಇದ್ದರು.

Latest articles

More like this