Homeಸುದ್ದಿಗಳುಪರಿಸರ ಸಂರಕ್ಷಣೆಗೆ ಮಿತ ಬಳಕೆ ಅಗತ್ಯ: ಡಾ.ಸುವರ್ಣಖಂಡಿ

ಪರಿಸರ ಸಂರಕ್ಷಣೆಗೆ ಮಿತ ಬಳಕೆ ಅಗತ್ಯ: ಡಾ.ಸುವರ್ಣಖಂಡಿ

Published on

ಜಮಖಂಡಿ: ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು, ಮರುಬಳಕೆ ಮಾಡಬೇಕು. ಐಷಾರಾಮಿ ಜೀವನವನ್ನು ಕೈಬಿಟ್ಟು ಸರಳ ಜೀವನ ನಡೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಹೇಳಿದರು.

ವಿಜಯಪುರ ರಸ್ತೆ ಪಕ್ಕದ ರೋಟರಿ ಭವನದಲ್ಲಿ ಶುಕ್ರವಾರ ಸಂಜೆ ಸ್ಥಳೀಯ ರೋಟರಿ ಸಂಸ್ಥೆ ಆಯೋಜಿಸಿದ್ದ ವಾರದ ಸಭೆಯ ಮುಖ್ಯ ಅತಿಥಿಯಾಗಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರಾಣಿ ಜನ್ಯ ವಸ್ತುಗಳನ್ನು ಉಪಯೋಗಿಸಬಾರದು. ಸಸಿಗಳನ್ನು ನೆಟ್ಟು ಪೋಷಿಸಿ ಗಿಡಮರಗಳನ್ನು ಬೆಳೆಸಬೇಕು. ಆಹಾರ ಧಾನ್ಯ, ನೀರು, ಮಣ್ಣು ಕಲುಷಿತ ಆಗದಂತೆ ಜಾಗೃತೆ ವಹಿಸಬೇಕು. ಮುಂದಿನ ಪೀಳಿಗೆಗಾಗಿ ಸ್ವಚ್ಛ ಪರಿಸರ ಉಳಿಸಬೇಕು ಎಂದರು.

ಶ್ರೀಧರ ಕಾಖಂಡಕಿ ರೋಟರಿ ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ ಸ್ವಾಗತಿಸಿದರು. ಸಂತೋಷ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಮಹಾದೇವ ಕಂಕಾಳೆ ರೋಟರಿ ಸಂಸ್ಥೆಯ ಫೋರ್ ವೇ ಟೆಸ್ಟ್ ಓದಿದರು. ಕಾರ್ಯದರ್ಶಿ ಎಂ.ಎಚ್. ಕಡ್ಲಿಮಟ್ಟಿ ವಂದಿಸಿದರು.

Latest articles

More like this