ಛಬ್ಬಿ: ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡುತ್ತದೆ. ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಜತೆಗೆ ವಿಭಿನ್ನ ಕೌಶಲ ಉತ್ತಮಗೊಳಿಸಲು ಸಹಕಾರಿಯಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಬಿ.ಎನ್ ಲಚ್ಯಾನ್ ಹೇಳಿದರು.
ಗದ್ದನಕೇರಿ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಛಬ್ಬಿ ಪುನರ್ವಸತಿ ಕೇಂದ್ರ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುಲ್‌ಬುಲ್ ಘಟಕವನ್ನು ಉದ್ಘಾಟಿಸಿ
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾವ್ ಸಾಹೇಬ್ ದೇಸಾಯಿ ಮಾತನಾಡುತ್ತಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಡಿಯಲ್ಲಿ ಬರುವ ೫ ರಿಂದ ೧೦ ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಶಿಸ್ತು, ಸೇವಾ ಮನೋಭಾವ, ನಾಯಕತ್ವ ಗುಣ ಮತ್ತು ಉತ್ತಮ ಚಾರಿತ್ರ್ಯವನ್ನು ಬೆಳೆಸಲು ಇರುವ ಘಟಕವಾಗಿದೆ.ಸರ್ಕಾರಿ ಶಾಲೆಗಳು ಜ್ಞಾನದ ಭಂಡಾರ ,ಗ್ರಾಮದ ಎಲ್ಲ ಜನರು ಒಳಗೊಳ್ಳುವಂತೆ ಇರುವ ಏಕೈಕ ಜೀವಂತ ದೇವಾಲಯವೆಂದರು .
ಕಾರ್ಯಕ್ರಮದ ಉಸ್ತುವಾರಿ ಅಧಿಕಾರಿ ಧರ್ಮರಾಜ್ ಗೌಳಿ ಮಾತನಾಡಿದರು.
ಚಂದ್ರಶೇಖರ್ ಸಾಳಗುಂದಿ ಅಧ್ಯಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಛಬ್ಬಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಎಲ್ಲ ಮಕ್ಕಳು ನಮ್ಮವರು ಎನ್ನುವ ಭಾವದೊಂದಿಗೆ ನಿರ್ಣಯ ನೀಡಬೇಕೆಂದರು.
ಶಾಲೆಯ ಅಧ್ಯಕ್ಷ ರಮೇಶ್ ಮೇಟಿ, ಸದಸ್ಯರಾದ ಮುತ್ತಪ್ಪ ಮಾದರ,ಶೈನಾಜ್ ಪಿಂಜಾರ ,ರತ್ನಾ ಸಂಗೋಳ್ಳಿ , ಹೊಳೆಬಸಪ್ಪ ಅಂತಾಪುರ ರಮೇಶ್ ವಾಲಿಕಾರ್,ಹಿರಿಯ ವಿದ್ಯಾರ್ಥಿಗಳಾದ ಲಕ್ಷ್ಮಣ್ ಮಾದರ,ಈರಣ್ಣ ಯಂಡಿಗೇರಿ ಪರಶುರಾಮ ಅಂಗಡಿ,ಸೋಮು ವಾಲಿಕಾರ್ ,ಮಲ್ಲು ಛಬ್ಬಿ. ಮುಖ್ಯ ಗುರು ಮಾತೆ ಪದ್ಮಾವತಿ ಬಂದಿಕೇರಿ,ಶಿಕ್ಷಕರಾದ ಮುತ್ತು ಬಳ್ಳಾ ಕಾವೇರಿ ಯಳಮೇಲಿ,ತನ್ವೀರ್ ಬಾನು,ಶಿಲ್ಪ ಇದ್ದರು.