ಸಿಂದಗಿ : ಸರಕಾರಿ ಶಾಲೆಗಳಲ್ಲಿ ಮಾತೃ ಭಾಷೆಯ ಜೊತೆಗೆ ಇಂಗ್ಲೀಷ್ ಕಲಿಕೆಗೆ ಪ್ರೋತ್ಸಾಹ ನೀಡಲು ತಾಲ್ಲೂಕಿನ ಪ್ರಾಥಮಿಕ ಶಾಲೆಗಳಲ್ಲಿರುವ ಶಿಕ್ಷಕರಿಗೆ ಇಂಗ್ಲೀಷ್ ಭಾಷೆಯ ಬೋಧನೆ ಬಗ್ಗೆ ತರಬೇತಿ ಮೂಲಕ ಮಕ್ಕಳಿಗೆ ಗುಣ ಮಟ್ಟದ ಕಲಿಕೆಗೆ ಶಿಕ್ಷಕರು ಮುಂದಾಗಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಹೇಳಿದರು.
ನಗರದ ಟಿ ಎಸ್ ಪಿ ಮಂಡಳಿ ಕಾನೂನ ಶಿಕ್ಷಣ ಕಾಲೇಜ ಆವರಣದಲ್ಲಿ ರವಿವಾರರಂದು ಶಾಲಾ ಶಿಕ್ಷಣ ಇಲಾಖೆ ಡಿ ಎಸ್ ಇ ಆರ್ ಟಿ ಬೆಂಗಳೂರು ಸಮಗ್ರ ಶಿಕ್ಷಣ ಕರ್ನಾಟಕ ಆರ್ ಐ ಇ ಎಸ್ ಐ .ವಿಜಯಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದೊಂದಿಗೆ 1ರಿಂದ 5 ನೇ ತರಗತಿ ಬೋಧಿಸುವ ಶಾಲಾ ಶಿಕ್ಷಕರಿಗೆ (ಇ ಎಂ ಟಿ ಟಿ ಪಿ) ದ್ವಿ ಭಾಷಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕರಿಗೆ ತರಬೇತಿ ನೀಡಲಿದ್ದು, ಹೊಸ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಶಿಕ್ಷಕರನ್ನು ಸಜ್ಜುಗೊಳಿಸಲು ಅದು ತಯಾರಿ ನಡೆಸಿದೆ, ಸರಕಾರಿ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಕೌಶಲ್ಯ ಕಲಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ದ್ವಿಭಾಷಾ ತರಗತಿಗಳನ್ನು ನಡೆಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತಷ್ಟು ಶಾಲೆಗಳಲ್ಲಿ ವಿಸ್ತರಣೆಗೆ ಶಿಕ್ಷಕರಿಗೆ ತರಬೇತಿ ನೀಡಿ ಜೂನ್ 2 ರಂದು ತರಗತಿ ಆರಂಭ ಮಾಡಲಾಗುವದು . ಮಕ್ಕಳಿಗೆ ಇಂಗ್ಲೀಷ ಭಾಷೆಯ ಸರಳ ಬೋಧನೆ .ಇಂಗ್ಲೀಷ್ ಅನ್ನು ಸಂವಹನ ಭಾಷೆಯಾಗಿ ಕಲಿಸುವುದು.ಮೂಲಭೂತ ಇಂಗ್ಲೀಷ್ ವ್ಯಾಕರಣದ ಅರಿವು. ಆಟ ಮತ್ತು ಚಟುವಟಿಕೆಗಳ ಮೂಲಕ ಮಕ್ಕಳಿಗೆ ಇಂಗ್ಲೀಷ್ ಕಲಿಸುವ ವಿಧಾನವಾಗಿದೆ ಎಂದರು.
ಬಿ ಆರ್ ಪಿ ಎಫ್ ಆರ್ ಕಾಚೂರ ಮಾತನಾಡಿ,
ಸರಕಾರದ ಸೂಚನೆಯಂತೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ದ್ವಿಭಾಷಾ ಬೋಧನೆ ಬಗ್ಗೆ ತರಬೇತಿ ನೀಡಲಾಗುತ್ತದೆ .ಶಿಕ್ಷಕರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ತರಬೇತಿ ಪಡೆದು ಮಕ್ಕಳಿಗೆ ಗುಣ ಮಟ್ಟ ಶಿಕ್ಷಣ ನೀಡಬೇಕು ಎಂದರು .
ತರಬೇತಿ ನೋಡಲ ಅಧಿಕಾರಿ ವಾಯ್ ಎಂ ಬಿರಾದಾರ, ಕನ್ನೊಳ್ಳಿ ವಲಯದ ಸಿ ಆರ್ ಪಿ ಸೋಮೇಶಗೌಡ ಪಾಟೀಲ. ಬಿ ಎಚ್ ಗೋಗಿ . ಎಫ್ ಎನ್ ನದಾಫ .ಮುಖ್ಯ ಶಿಕ್ಷಕಿ ಜಯಶ್ರೀ ಬಾಸಗಿ ಇದ್ದರು.