ಸಿಂದಗಿ: ರೈತರ ಹಿತಾಸಕ್ತಿ, ಕೃಷಿ ಅಭಿವೃದ್ಧಿಗೆ ಪೂರಕ ಕಾರ್ಯಾಗಾರವನ್ನು ಆಯೋಜಿಸಬೇಕು ಎಂದು ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.
ನಗರದಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ತಾಲೂಕಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿ ಮತ್ತು ಸಮಗ್ರ ಪೋಷಕಾಂಶ ನಿರ್ವಹಣೆಯ ಮಹತ್ವ, ತಾಲೂಕಿನಲ್ಲಿ ಕಬ್ಬಿನ ಕ್ಷೇತ್ರ ಹೆಚ್ಚಾಗಿದ್ದು ಕಬ್ಬಿನ ಬೆಳೆಗೆ ನೀರು ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮುಡಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಸದಸ್ಯ ಅಶೋಕ ಅಲ್ಲಾಪೂರ ಮಾತನಾಡಿ, ತಾಲೂಕಿನಲ್ಲಿರುವ ಕೃಷಿಕ ಸಮಾಜ ರೈತರ ಕ್ಷೇಮಾಭಿವೃದ್ಧಿಗಾಗಿ ಇದ್ದು ಕೃಷಿಗೆ ಪೂರಕವಾದ ಎಲ್ಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು. ಆಗ ರೈತರ ಸಮಸ್ಯೆಗಳು ಪರಿಹಾರ ಕಂಡುಕೊಳ್ಳಲು ಸಾಧ್ಯ. ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ. ಮುಂಬರುವ ಸಭೆಯಲ್ಲಿ ರೈತರಿಗೆ ಸಂಬಂಧಿಸಿದ ಹೆಸ್ಕಾಂ, ಎಪಿಎಂಸಿ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಬೇಕು. ತಾಲೂಕಿನಲ್ಲಿರುವ ಎಫಿಓ, ಕೃಷಿ ಪರಿಕರ ಮಾರಾಟಗಾರರ ಜೊತೆಯಲ್ಲಿ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಕರೆಯಬೇಕು. ಆಗ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಾಧ್ಯ ಎಂದರು.
ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ ಸಾಣಿ, ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ, ಪಶುಪಾಲನಾ ಇಲಾಖೆ ಮುಖ್ಯ ವೈಪಶುವೈದ್ಯಾಧಿಕಾರಿ ಡಾ.ಶರಣಗೌಡ ಬಿ.ಎಂ., ಅರಣ್ಯಾಧಿಕಾರಿ ಇರ್ಷಾದ ನೆವಾರ ಅವರು ಇಲಾಖೆಗಳ ಪ್ರಗತಿ ತಿಳಿಸುವ ಜೊತೆಗೆ ರೈತರಿಗೆಗಾಗಿ ಒರುವ ಯೋಜನೆಗಳ ಬಗ್ಗೆ ಮಾಹಿತಿನೀಡಿದರು.
ಕೃಷಿಕ ಸಮಾಜದ ಜಿಲ್ಲಾ ಪ್ರಧಾನಕಾರ್ಯದರ್ಶಿ ರಮೇಶ ಪೂಜಾರ, ತಾಲೂಕಾ ಉಪಾದ್ಯಕ್ಷ ಬಸಯ್ಯ ಹಿರೇಮಠ, ಪ್ರಧಾನಕಾರ್ಯದರ್ಶಿ ದೇವೇಂದ್ರ ಬಡಿಗೇರ, ಶಾಯಪ್ಪ ಪೂಜಾರಿ ವೇದಿಕೆ ಮೇಲೆ ಇದ್ದರು.
ತಾಲೂಕಾ ಸಮಿತಿ ನಿರ್ದೇಶಕರಾದ ಭೀಮಾಶಂಕರ ನೆಲ್ಲಗಿ, ಸಿದ್ದಪ್ಪ ಹಿರೇಕುರಬರ, ನಾಗಪ್ಪ ಬಿರಾದಾರ, ರೇವಣಸಿದ್ದಪ್ಪ ಬಡಾನೂರ, ಅರವಿಂದ ಬಿರಾದಾರ ಇದ್ದರು.