Homeಸುದ್ದಿಗಳುಇಂಧನ, ಆಮ್ಲಜನಕ, ತಾಪಮಾನ ಮೂರರಲ್ಲಿ ಒಂದನ್ನು ತೆಗೆದರೆ ಅಗ್ನಿ ಆರಿಸಬಹುದು – ಆನಂದ್ ಕುಮಾರ್ ತಿವಾರಿ

ಇಂಧನ, ಆಮ್ಲಜನಕ, ತಾಪಮಾನ ಮೂರರಲ್ಲಿ ಒಂದನ್ನು ತೆಗೆದರೆ ಅಗ್ನಿ ಆರಿಸಬಹುದು – ಆನಂದ್ ಕುಮಾರ್ ತಿವಾರಿ

Published on

ಮೂಡಲಗಿ -ಇಂಧನ, ಆಮ್ಲಜನಕ, ತಾಪಮಾನ ಎಂಬ ಮೂರು ಅಂಶಗಳ ಸಂಯೋಗದಿಂದ ಉಂಟಾಗುವ ಅಗ್ನಿಜ್ವಾಲೆಯನ್ನು ಅದೇ ಇಂಧನ, ಆಮ್ಲಜನಕ, ತಾಪಮಾನಗಳಲ್ಲಿ ಒಂದನ್ನು ತೆಗೆದುಹಾಕುವ ಮೂಲಕ ಅಗ್ನಿಯನ್ನು ಆರಿಸಬಹುದು ಎಂದು ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಅಗ್ನಿ ಸುರಕ್ಷತಾ ತಜ್ಞ ಹಾಗೂ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥ ಆನಂದ್ ಕುಮಾರ ತಿವಾರಿ ಅಭಿಪ್ರಾಯ ಪಟ್ಟರು .

ಅವರು ಇಂದು ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ದಾಲ್ಮಿಯಾ ಭಾರತ್ ಫೌಂಡೇಶನ್ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿ ಸಿ ಎ ಮಹಾವಿದ್ಯಾಲಯದ ಐಕ್ಯೂಎಸಿ, ರೆಡ್ ಕ್ರಾಸ್ ಘಟಕ, ರೋವರ್ ಸ್ಕೌಟ್ಸ್ ಘಟಕ, ಎನ್ಎಸ್ಎಸ್ ಹಾಗೂ ವಿದ್ಯಾರ್ಥಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅಗ್ನಿ ಸುರಕ್ಷತಾ ಸಪ್ತಾಹ 2026ರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಅಗ್ನಿಯಲ್ಲಿ ವಿದ್ಯುತ್, ಗ್ಯಾಸ್, ಎಣ್ಣೆ ಹಾಗೂ ಘನ ವಸ್ತುಗಳ ಅಗ್ನಿ ಎಂಬ ನಾಲ್ಕು ಪ್ರಕಾರಗಳಿದ್ದು, ಅಗ್ನಿಯನ್ನು ನೀರು, ಮಣ್ಣು ಹಾಗೂ ಒದ್ದೆ ಬಟ್ಟೆಯಿಂದ ಮುಚ್ಚುವ ಮೂಲಕ ಆಮ್ಲಜನಕ ಕಡಿಮೆ ಮಾಡಿ ಅಗ್ನಿ ಆರಿಸಬಹುದು. ಆದರೆ ವಿದ್ಯುತ್ ಅಗ್ನಿಗೆ ಯಾವುದೇ ಕಾರಣಕ್ಕೂ ನೀರು ಬಳಸಬಾರದು ಎಂದ ತಿವಾರಿ . ಮನೆಗಳಲ್ಲಿ ಫೈರ್ ಎಕ್ಸ್ಟಿಂಗ್ವಿಷರ್ ಇಟ್ಟುಕೊಳ್ಳುವುದು ಉತ್ತಮ ಎಂದರು.
ಈ ಸಂದರ್ಭದಲ್ಲಿ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ದಾಲ್ಮಿಯಾ ಭಾರತ್ ಫೌಂಡೇಶನ್‌ನ ಸಿಎಸ್‌ಆರ್ ವಿಭಾಗದ ಮುಖ್ಯಸ್ಥರಾದ ರಾಮನಗೌಡ ಬಿರಾದರ್, ಸಮುದಾಯ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಪಾಟೀಲ ಹಾಗೂ ಸೆಕ್ಯುರಿಟಿ ವಿಭಾಗದ ಮಹಾಂತೇಶ ಲಂಬಾಣಿ ಅವರು ಅಗ್ನಿ ಅವಘಡಗಳ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ. ಕೆ.ಪಿ. ಡೋಣಿ ಮಾತನಾಡಿ, ಸಾಮಾಜಿಕ ಹಾಗೂ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಿರುವ ದಾಲ್ಮಿಯಾ ಭಾರತ್ ಫೌಂಡೇಶನ್‌ನ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದರು

ಕಾರ್ಯಕ್ರಮವನ್ನು ದಾಲ್ಮಿಯಾ ಭಾರತ ಪೌಂಡೇಶನ್ ನ ಟ್ರೇನರ್ ಆಯ್ ಎಸ್ ಜಾದವ ಸಂಘಟಿಸಿದ್ದರು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪವನ್ ಕುಮಾರ್ ಕೆ., ಪ್ರೊ. ಎಲ್. ಪಿ. ಹಿಡಕಲ್, ಆಯ್ ಕ್ಯೂ ಎ ಸಿ ಸಂಯೋಜನಾಧಿಕಾರಿ ಪ್ರೊ. ಪಿ. ಬಿ. ಚೌಡಕಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪ್ರೊ. ಎ. ಎಸ್. ಮಿಸಿ ನಾಯಿಕ, ಆಯ್ ಟಿ ಸಂಯೋಜನಾಧಿಕಾರಿ ಪ್ರೊ. ಎಂ. ಎಸ್. ಕುಂದರಗಿ, ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಕೆ. ಪಿ. ಡೋಣಿ, ರೋವರ್ಸ್ ಸ್ಕೌಟ್ಸ್ ಘಟಕಾಧಿಕಾರಿ ಡಾ. ಬಸವಂತ ಬರಗಾಲಿ, ಮಹಿಳಾ ಸಂಘದ ಅಧ್ಯಕ್ಷೆ ಪ್ರೊ. ವೇದಾ. ಆರ್. ದೇಶಪಾಂಡೆ ಮಹಿಳಾ ಸಬಲಿಕರಣ ಘಟಕದ ಅಧ್ಯಕ್ಷೆ ಮಿಸ್ ಬಿ. ಎಂ. ತಳವಾರ, ಪ್ರೊ. ಸವಿತಾ ಕೊತ್ತಲ, ಪ್ರೊ. ಪಿ. ಬಿ. ಬೆಳಗಲಿ, ಪ್ರೊ. ಎಲ್. ಎಸ್. ಹೊಸಟ್ಟಿ ಪ್ರೊ ಎಸ್ ಕೆ ಅಂಗಡಿ ಪ್ರೊ ಎಸ್ ಪಿ ಕಾಂಬಳೆ ಪ್ರೊ ಸಂತೋಷ ಮುಗಳಿ ಪ್ರೊ ಎನ್ ಸಿ ಭರಮನ್ನವರ ಪ್ರೊ ಪ್ರತಿಭಾ ಪಂಡ್ರೊಳಿ ಪ್ರೊ ಎಸ್ ಎಸ್ ಕುಲಿ ಗೋಡ ವೆಂಕಟೇಶ ಪಾಟೀಲ ಅರ್ಜುನ ಗಸ್ತಿ ಲಕ್ಷ್ಮಣ ನಂದಿ ಮನೋಹರ ಲಮಾನಿ ರಮೇಶ ಖಾನಪ್ಪಗೋಳ ಕಲ್ಮೇಶ ಇಂಗಳೆ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ದಾಲ್ಮಿಯಾ ಭಾರತ ಪೌಂಡೇಶನ್ ಟ್ರೇನರ್. ಆಯ್ ಎಸ್ ಜಾದವ ಸ್ವಾಗತಿಸಿದರು ಪ್ರೊ. ಎಸ್. ಕೆ. ಅಂಗಡಿ ನಿರೂಪಿಸಿದರು. ಪ್ರೊ. ಎ. ಎಸ್. ಮಿಸಿ ನಾಯಿಕ ವಂದಿಸಿದರು.

Latest articles

More like this