Homeಸುದ್ದಿಗಳುಮೂಡಲಗಿ ತಾಲೂಕಿನ ಎಡದಂಡೆ ಕಾಲುವೆಗೆ ಮತ್ತು ಮೂಡಲಗಿ ಹಳ್ಳಕ್ಕೆ ನೀರು ಬಿಡಲು ಮನವಿ

ಮೂಡಲಗಿ ತಾಲೂಕಿನ ಎಡದಂಡೆ ಕಾಲುವೆಗೆ ಮತ್ತು ಮೂಡಲಗಿ ಹಳ್ಳಕ್ಕೆ ನೀರು ಬಿಡಲು ಮನವಿ

Published on

ಮೂಡಲಗಿ : ಪಟ್ಟಣದ ಭಗೀರಥ ವೃತ್ತದಿಂದ ಪೂರ್ವಕ್ಕೆ ಬರುವ ಎಡದಂಡೆ ಕಾಲುವೆಗೆ ನೀರು ಬಂದಿರುವುದಿಲ್ಲ ಮತ್ತು ಇಲ್ಲಿಂದ ಪ್ರಾರಂಭವಾಗಿ ಧರ್ಮಟ್ಟಿ, ಪಟಗುಂದಿ, ಕಮಲದಿನ್ನಿ ಗ್ರಾಮದವರೆಗೆ ನೀರು ಹರಿಸುವ ಕಾರ್ಯವಾಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ಮೇಶ ಗೋಕಾಕ ಹೇಳಿದರು.

ಸೋಮವಾರದಂದು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರರಾದ ಶ್ರೀಶೈಲ ಗುಡುಮೆಯವರ ಜೊತೆ ಸಮಾಲೋಚನೆ ನಡೆಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಬಾಗದ ರೈತರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು ಆದಷ್ಟು ಬೇಗನೆ ಮೂಡಲಗಿ ಪಟ್ಟಣದಲ್ಲಿರುವ ಹಳ್ಳಕ್ಕೆ ಮತ್ತು ಈ ಮೇಲೆ ತಿಳಿಸಿದ ಹಳ್ಳಿಗಳಿಗೆ ನೀರು ಹರಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಕೋರಿದರು. ಒಂದು ವೇಳೆ ಅಧಿಕಾರಿಗಳು ಈ ಕಾರ್ಯವನ್ನು ಆದಷ್ಟು ಬೇಗನೆ ಮಾಡದೆ ಹೊದರೆ ಈ ಬಾಗದ ರೈತರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭೀಮಶಿ ಕೋರಿಶೇಟ್ಟಿ, ಶಿವು ಗೋಕಾಕ, ಅಶೋಕ ಕೂಳವಿ, ಸಂಜು ಹಿಂಜಿ, ಚೇತನ ಕುಲಗೂಡೆ, ಚೇತನ ನಿಶಾನಿಮಠ ಸೇರಿದಂತೆ ಅನೇಕ ರೈತರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ಉಪಸ್ಥಿತರಿದ್ದರು.

Latest articles

More like this