ಹೋಳಿಗೆ ಊಟದ ಸವಿ ಸವಿದ ಭಕ್ತರು ಸೆ.೨೦ರಂದು ಗಣೇಶ ವಿರ್ಸಜನೆ
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ವಿನಾಯಕ ಮಿತ್ರ ಮಂಡಳಿ ಇವರ ಆಶ್ರಯದಲ್ಲಿ ಪರೀಕ್ಷೆಯಲ್ಲಿ ೬ರಿಂದ ೧೦ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಸ್ಥಳೀಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಶನಿವಾರ ಸೆ.೧೯ರಂದು ಮಧ್ಯಾಹ್ನ ೧ ಗಂಟೆಗೆ ರಸಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು.
ಸ್ಥಳೀಯ ಶ್ರೀ ವಿನಾಯಕ ಮಿತ್ರ ಮಂಡಳಿ ಇವರ ಆಶ್ರಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶನಿವಾರ ಸೆ.೧೪ರಿಂದ ಸೋಮವಾರ ಸೆ.೨೦ ತನಕ ೭ ದಿನಗಳ ಕಾಲ ಇಲ್ಲಿಯ ಗ್ರಾಮದೇವಿ ದ್ಯಾಮವ್ವದೇವಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಪೂಜಿಸಿ, ಆರಾಧಿಸಿ, ಮಹಾಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿ, ಸೆ.೨೦ರಂದು ರಾತ್ರಿ ೧೦ಗಂಟೆಗೆ ಗಣಪತಿ ಮೂರ್ತಿ ವಿರ್ಸಜನೆ ಮಾಡಲಾಗುವದು ಎಂದು ಶಿವರಾಜ ಪತ್ತಾರ ತಿಳಿಸಿದ್ದಾರೆ.
ಸ್ಥಳೀಯ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ರಸಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ೬ರಿಂದ ೧೦ನೇ ತರಗತಿವರೆಗಿನ ಸುಮಾರು ೮೮ ಜನ ಶಾಲಾ ಮಕ್ಕಳು ಭಾಗವಹಿಸಿದ್ದರು. ಕವಿರಾಜ ಬುಳ್ಳಿ (೮೪) ಅಂಕ ಪಡೆದು ಪ್ರಥಮ ಸ್ಥಾನ, ಕಾವೇರಿ ಸವದತ್ತಿ (೮೨)ಅಂಕ ಪಡೆದು ದ್ವೀತೀಯ ಸ್ಥಾನ, ಸ್ವಾತಿ ಪಾಟೀಲ (೮೦)ಅಂಕ ಪಡೆದು ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಈ ರಸಪ್ರಶ್ನೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಸ್ಥಳೀಯ ಕೆನರಾ ಬ್ಯಾಂಕ್ ವತಿಯಿಂದ ನೆನಪಿನ ಕಾಣಿಕೆ, ಹಲವು ಜನರು ಆಕರ್ಷಕ ನಗದು ಬಹುಮಾನ ಸೆ.೨೦ರಂದು ನೀಡಲಿದ್ದಾರೆ. ರಸಪ್ರಶ್ನೆ ಪರೀಕ್ಷೆ ಆಯೋಜಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೋಳಿಗೆ ಊಟದ ಸವಿ: ಇಲ್ಲಿಯ ಗ್ರಾಮದೇವಿ ದ್ಯಾಮವ್ವದೇವಿ ದೇವಸ್ಥಾನ ಆವರಣದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಸಂಜೆ ೭:೩೦ ಗಂಟೆಗೆ ಸಮಸ್ತ ಭಕ್ತಾಧಿಗಳಿಗೆ ಬಿಸಿ, ಬಿಸಿ ಹೋಳಿಗೆ ಊಟದ (ಅನ್ನ ಸಂತರ್ಪನೆ) ವ್ಯವಸ್ಥೆ ಮಾಡಲಾಗಿತ್ತು. ನೂರಾರು ಜನ ಭಕ್ತರು ಸಾಲಾಗಿ ಕುಳಿತು ಹೋಳಿಗೆ ಊಟದ ಸವಿ ಸವಿದು ಸಂಭ್ರಮಿಸಿ, ಧನ್ಯತೆ ಮೆರೆದರು.
ಬೆಟಗೇರಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜಗದೀಶ ಜಾಧವ, ಶಿವರಾಜ ಪತ್ತಾರ, ಸಂತೋಷ ಬಡಿಗೇರ, ವಿಠ್ಠಲ ಬಡಿಗೇರ, ಭೀಮಶೆಪ್ಪ ಬಡಿಗೇರ, ಮಾರುತಿ ಬಡಿಗೇರ, ಪ್ರಕಾಶ ಬಡಿಗೇರ, ಮಾಂತು ಬಡಿಗೇರ, ಬಸವರಾಜ ಬಡಿಗೇರ, ಮಂಜು ಪತ್ತಾರ, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಶ್ರೀ ವಿನಾಯಕ ಮಿತ್ರ ಮಂಡಳಿ ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು ಇದ್ದರು.
ಪೋಟೊ: ಗಣೇಶ ಹಬ್ಬದ ನಿಮಿತ್ತ ರಸಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು.
ವರದಿ : ಅಡಿವೇಶ ಮುಧೋಳ