ಹಾಸನ: ಹಾಸನದ ಪಿಡಬ್ಲ್ಯೂಡಿ ಕಾಲೋನಿ ಶ್ರೀರಾಮ ಮಂದಿರ ಸಮುದಾಯ ಭವನದಲ್ಲಿ ಹೆಸರಾಂತ ಸಂಗೀತ ನಿರ್ದೇಶಕರಾದ ಮಹೇಶ್ ಕರಡ್ಯ ಇವರ ನಿರ್ದೇಶನದಲ್ಲಿ ಸಾಮ್ರಾಟ ಸುಯೋಧನ ಪೌರಾಣಿಕ ನಾಟಕ ತಾಲೀಮಿನ ಪ್ರಥಮ ಪೂಜೆ ನೆರವೇರಿತು.
ಕಲಾವಿದರಾದ ಎಚ್.ಎಮ್.ಪ್ರಭಾಕರ್ ಸಿದ್ದಯ್ಯ ನಗರ ಹಾಸನ, ಸುನಿಲ್ ಆಡುವಳ್ಳಿ, ಶ್ರೀನಿವಾಸ್ ಕರಿಗೌಡನ ಕೊಪ್ಪಲು ಇವರ ಜನ್ಮದಿನವನ್ನು ಕೇಕ್ ಕತ್ತರಿಸಿ ಈ ಕಲಾವಿದರುಗಳಿಗೆ ಸ್ನೇಹ ಬಳಗ ಸನ್ಮಾನಿಸಿ ಗೌರವಿಸಿತು.
ಕರ್ನಾಟಕ ರಾಜ್ಯ ಬರಹಗಾರರ ಸಂಘ ನಡೆಸಿದ ರಾಜ್ಯಮಟ್ಟದ ಆನ್ ಲೈನ್ ರಂಗಗೀತೆ ಗಾಯನ ಕಾರ್ಯಕ್ರಮದಲ್ಲಿ ಕಲಾವಿದರು ಭಾಗವಹಿಸಿದರು. ರಾಜಾದ್ಯಂತ ಭಾಗವಹಿಸಿದ ಕಲಾವಿದರು:
ಧರ್ಮ ಜಿ. ಗರೀಘಟ್ಟ,
ಪುಟ್ಟಸ್ವಾಮಿಗೌಡ ರಾಮೇನಹಳ್ಳಿ,
ಕೆಂಚೇಗೌಡ ಕಾಳೇನಹಳ್ಳಿ ಮಂಡ್ಯ,
ರವಿ ಜಿ. ಜಿ. ವಕೀಲರು ಗರೀಘಟ್ಟ ಅರಕಲಗೂಡು
ಪ್ರಕಾಶ್ ಟಿ. ಆರ್. ತಟ್ಟೇಕೆರೆ ಹಾಸನ, ನರಸಿಂಹರಾಜು ಸಿ. ಹೆಚ್. ಹುಲುವಂಗಳ ಕೊರಟಿಕೆರೆ,
ಚೇತನ್ ಚಂದು ಕೊರಟಿಕೆರೆ,
ಹಾರ್ಧಿಕ್ ಗೌಡ, ಕಿತ್ತಾನೆ ಹಾಸನ,
ಶಿವಕುಮಾರ್ ಮದಲೂರು ಶಿರಾ,
ಕಾಮಾಕ್ಷಿ ಬಿ. ಜಿ. ಹೊಳೆನರಸೀಪುರ,
ಕಲ್ಲಯ್ಯ ಸೀಗೂರು,
ಹೆಚ್. ಎಂ. ಪ್ರಭಾಕರ್ ಸಿದ್ದಯ್ಯನಗರ ಹಾಸನ.
ಶಶಿ ಸಾಲಗಾಮೆ,
ಧರ್ಮಣ್ಣ ಗವೇನಹಳ್ಳಿ
ಗಿರೀಶ್ ಲಕ್ಕಿಹಳ್ಳಿ,
ಶ್ರೀನಿವಾಸ್ ಕರೀಗೌಡನಕೊಪ್ಪಲು,
ಬಸವರಾಜ್ ಹರದನಹಳ್ಳಿ,
ನಾಗಮೋಹನ್ ಹಾಸನ,
ಚಂದ್ರಶೇಖರ್ ಸಿಗರನಹಳ್ಳಿ,
ರಮೇಶ್ ಗೌಡಪ್ಪ,ಹಾಸನ, ನಂಜಪ್ಪ ಹಾಸನ. ಶೈಲಜಾ ಕೆ. ವಿ. ಜೈಪುರ.
ಪಾಲಾಕ್ಷಚಾರ್ ಸೀಗೆನಾಡು,
ಕೃಷ್ಣಮೂರ್ತಿ ಹಾಸನ,
ಮಮತಾ ಸುಂದರೇಶ್ ಹಾಸನ,
ದಿನೇಶ್ ಕೆ. ಆರ್. ಆಲೂರು,
ಸೋಮಶೇಖರ್ ಎಲೆಚಾಗಹಳ್ಳಿ,
ಸತೀಶ್ ಕಬ್ಬತ್ತಿ.
ಕಾಮಾಕ್ಷಿ ಹಾಸನ,
ರವಿಕುಮಾರ್ ಬಿದರೆ,
ಸುಮಂಗಲಾ ಜೋಯಿಡ, ಉತ್ತರ ಕನ್ನಡ
ಮಂಜುಳಾ ಉಮೇಶ್ ಹಾಸನ.
ಮಂಜುನಾಥ್ ಹಂಗರಹಳ್ಳಿ. ಬೀರಪ್ಪ ನೆಲ್ಲುಗುಡಿಗೆ.
ಹಾಸನದ ಕಾರ್ಯಕ್ರಮದಲ್ಲಿ ಮಾತನಾಡಿದ ಕಲಾವಿದ ಚಂದ್ರು ಸಿಗರನಹಳ್ಳಿ ಮಾತನಾಡಿ ಹಾಸನದಲ್ಲಿ ಶೀಘ್ರದಲ್ಲೇ ರಂಗದ ಮೇಲೆ ಈ ನಾಟಕ ಪ್ರದರ್ಶನಕ್ಕೆ ಸಿದ್ಧತೆ ಮಾಡುತ್ತಿರುವುದಾಗಿ ತಿಳಿಸಿದರು. ಸಾಹಿತಿ ಗೊರೂರು ಅನಂತರಾಜು ಮಾತನಾಡಿ ಸಾಮ್ರಾಟ್ ಸುಯೋಧನ ನಾಟಕ ಹಾಸನ ಕಲಾವಿದರಿಗೆ ಹೊಸ ಪ್ರಯೋಗವಾಗಿದ್ದು ಈ ಹಿಂದೆ ನಡೆದ ನಾಟಕೋತ್ಸವದಲ್ಲಿ ಬೆಂಗಳೂರಿನ ಒಂದು ತಂಡ ಹಾಸನದ ಕಲಾಭವನದಲ್ಲಿ ಪ್ರದರ್ಶಿಸಿದ್ದನ್ನು ಸ್ಮರಿಸಿದರು.
ಹಾಸನ ಜಿಲ್ಲಾ ಕಲಾವಿದರ ಸಂಘದ ಖಜಾಂಚಿ ರಮೇಶ ಗೌಡಪ್ಪ ಮಾತನಾಡಿ ಹಾಸನದಲ್ಲಿ ರಂಗ ಚಟುವಟಿಕೆ ನಿರಂತರ ನಡೆಯುತ್ತಿರಬೇಕು ಎಂದು ಆಶಿಸಿದರು. ನಾಟಕ ನಿರ್ದೇಶಕರು ಮತ್ತು ಹಾರ್ಮೋನಿಯಂ ಮಾಸ್ಟರ್ ಮಹೇಶ ಕರಡ್ಯ ನಾಟಕ ಕುರಿತಾಗಿ ಮಾತನಾಡಿ ಈ ನಾಟಕ ಅದ್ಭುತ ಡೈಲಾಗ್ ನಿಂದ ಕೂಡಿದ್ದು ಕಲಿಯುವ ಕಲಾವಿದರಿಗೆ ಒಂದು ಸವಲಾಗಿದೆ ಎಂದರು. ನಾಗಮೋಹನ ಸ್ವಾಗತಿಸಿದರು