ಸಿಂದಗಿ; ಸಮಾಜದ ಅತ್ಯಂತ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿರುವ ಶಿಕ್ಷಕರು ಬರೀ ಶಿಕ್ಷಣ ನೀಡದೇ ಸಂಸ್ಕಾರ ನೀಡುವ ಏಕೈಕ ವ್ಯಕ್ತಿ ಎಂದರೆ ಶಿಕ್ಷಕ ಮಾತ್ರ. ಇಡೀ ಜೀವನವನ್ನೆ ಮಕ್ಕಳ ಶ್ರೇಯೋಭಿವೃದ್ಧಿಗೆ ಮುಡುಪಾಗಿಟ್ಟ ಶಿಕ್ಷಣ ಮಾಂತ್ರಿಕ ಡಾ. ಸರ್ವಪಲ್ಲಿ ರಾಧಾಕೃಷ್ಣರು ವಿವಿಯ ಕುಲಪತಿಗಳಾಗಿ, ಪ್ರಾಧ್ಯಾಪಕರಾಗಿ, ಈ ದೇಶದ ಉಪರಾಷ್ಟ್ರಪತಿಯಾಗಿ, ರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿ ಶಿಕ್ಷಕ ಸಮೂಹಕ್ಕೆ ದಾರಿದೀಪವಾಗಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಗುಂದಗಿ ಪಂಕ್ಷನ್ ಹಾಲ್ನಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡ ಡಾ.ಸರ್ವಪಲ್ಲಿ ರಾಧಾಕೃಷ್ಣನ್ರ ೧೩೮ನೇ ಜನ್ಮದಿನೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ವಿಶೇಷ ಅನುದಾನ ಕಲ್ಪಿಸುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಇಡುತ್ತೇವೆ ಎಂದು ತಿಳಿಸಿದ ಅವರು, ಎಂ.ಪಿಎಸ್ ದಿಂದ ಓಪಿಎಸ್ ಮಾಡುವಂತೆ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ಅದಕ್ಕೊಂದು ರೂಪು ನೀಡುವುದಾಗಿ ಹೇಳಿದರು.
ಸಾನ್ನಿಧ್ಯ ವಹಿಸಿದ ಯರನಾಳ ಸಂಸ್ಥಾನ ವೀರಕ್ತಮಠದ ಗುರು ಸಂಗನಬಸವ ಮಹಾಸ್ವಾಮಿಗಳು ಆರ್ಶಿವಚನ ನೀಡಿ, ಪ್ರತಿಯೊಂದು ಕ್ಷೇತ್ರದಲ್ಲಿ ಗುರುವಿಲ್ಲದಿದ್ದರೆ ಸಾಧನೆ ಶೂನ್ಯ ಬ್ರಹ್ಮ ಅಂದಾಗ ಹಾಗೆ ಬ್ರಹ್ಮನಿಗೆ ಗುರು ಅಂದಿಲ್ಲ ಅದಕ್ಕೆ ಪರಮೇಶನಿಗೂ ಮಿರಿದ ಶಕ್ತಿ ಗುರುವಿನ ಸ್ಥಾನದಲ್ಲಿದೆ. ಶಿಕ್ಷಕರ ವೃತ್ತಿ ಪವಿತ್ರವಾದದ್ದು ಅದನ್ನು ನೌಕರಿಯಂದು ಬಾವಿಸದೇ ಸಮರ್ಥವಾಗಿ ನಿಬಾಯಿಸಿ ಮಕ್ಕಳನ್ನು ಸಮಾಜದ ನಿರ್ಮಾಣ ಕರ್ತರನ್ನಾಗಿ ಮಾಡಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಕರ್ತವ್ಯವನ್ನು ಭಕ್ತಿ, ಶ್ರದ್ದೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ದಿ.ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ಅಖಂಡ ತಾಲೂಕಿನ ಶಿಕ್ಷಕರಿಗೆ ಬ್ಯಾಗ್ ವಿತರಣೆ ಮಾಡಿ, ೧೨೦ ಜನಸೇವಾ ನಿವೃತ್ತ ಶಿಕ್ಷಕರಿಗೆ ಹಾಗೂ ಮೃತ ಶಿಕ್ಷಕರ ಕುಟುಂಬದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಬಿಇಓ ಕಛೇರಿಯಿಂದ ಬೆಳಿಗ್ಗೆ ೯ ಗಂಟೆಗೆ ಡಾ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರದೊಂದಿಗೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆಯು ಸಾರೋಟದ ಮೂಲಕ ಸಾಗಿ ಬಂತು.
ಶಿಕ್ಷಕರ ದಿನೋತ್ಸವ ಸಮಿತಿ ಅಧ್ಯಕ್ಷ ಹಾಗೂ ತಾಪಂ ಅಧಿಕಾರಿ ಅನೀಲ ಹಳ್ಳಿ, ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಸಂತೋಷ ಸಾಲಿ ಸಿಂದಗಿ, ಬಸವರಾಜ ತೆಲ್ಲೂರ ಆಲಮೇಲ, ಸಾಹೇಬಗೌಡ ಬಿರಾದಾರ ದೇವರ ಹಿಪ್ಪರಗಿ, ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷೆ ಶ್ರೀಮತಿ ಎಸ್.ಎಂ.ಚಿಗರಿ, ಪ್ರೌಡಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಆರ್.ಎಚ್.ಬಿರಾದಾರ, ನೌಕರರ ಸಂಘದ ಅದ್ಯಕ್ಷ ಅಶೋಕ ತೆಲ್ಲೂರ, ಮಹಾಮಂಡಳ ಅದ್ಯಕ್ಷ ಅರುಣ ನಾಯ್ಕೋಡಿ, ಅನುದಾನಿತ ಪ್ರೌಡಶಾಲೆಗಳ ಅಧ್ಯಕ್ಷ ಶಿವಪುತ್ರ ಕಿರನಳ್ಳಿ, ಶಿಕ್ಷಣ ಸಂಯೋಜಕ ಅಕ್ಷರ ದಾಸೋಹ ಅಧಿಕಾರಿ ಎ.ಎಸ್.ಡೋಣೂರ, ದೈಹಿಕ ಶಿಕ್ಷಣ ರ್ವಿಕ್ಷಕ ರಮೇಶ ಬಿರಾದಾರ, ಶಿಕ್ಷಕ ರವಿ ಬಿರಾದಾರ, ಶಿಕ್ಷಕಿ ಜಯಶ್ರೀ ಬೆಣ್ಣಿ, ಜಯಶ್ರೀ ನಾಯಕ, ಬಸಮ್ಮ ಬಜಂತ್ರಿ, ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.
ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಶಿಕ್ಷಕ ಜಗದೀಶ ಸಿಂಗೆ ಶಿಕ್ಷಕರ ಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶರಣು ಲಂಗೋಟಿ ನಿರೂಪಿಸಿದರು. ದೇವರ ಹಿಪ್ಪರಗಿ ಅಧ್ಯಕ್ಷ ಪಿ.ಸಿ.ತಳಕೇರಿ ವಂದಿಸಿದರು.