Homeಸುದ್ದಿಗಳುಬಿ ಕೆ ಕಂಗ್ರಾಳಿ ಸರ್ಕಾರಿ ಶಾಲೆಯಲ್ಲಿ ಶಾಲಾ ಫ್ರಾರಂಭೋತ್ಸವ

ಬಿ ಕೆ ಕಂಗ್ರಾಳಿ ಸರ್ಕಾರಿ ಶಾಲೆಯಲ್ಲಿ ಶಾಲಾ ಫ್ರಾರಂಭೋತ್ಸವ

Published on

ಬೆಳಗಾವಿ –  ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಂಗ್ರಾಳಿ ಬಿ ಕೆ ಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು. ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ರಂಗೋಲಿ ಹಾಕಿ, ಮಕ್ಕಳನ್ನು ಚಾಕ್ಲೇಟ್ ಹಾಗು ಹೂವು ಕೊಟ್ಟು, ಬಲೂನ್ ಹಾರಿಸಿ, ಆರತಿ ಬೆಳಗಿ ಸ್ವಾಗತಿಸಲಾಯಿತು

ಎಸ್ ಡಿ ಎಂ ಸಿ ಅಧ್ಯಕ್ಷ ರುದ್ರಪ್ಪ ಬಲಕುಂದಿ ಚಾಲನೆ ನೀಡಿದರು ಸಿ ಆರ್ ಪಿ ಗಳಾದ ರಾಜು ಕೋಲಕಾರ ಆಗಮಿಸಿದ್ದರು ನಮಿತಾ ಕಾಂಬಳೆ, ಸಿದರಾಯಿ ಬೆಳಗಾವಿ ರಮೇಶ ವಡರತ್ತಿ ನಾಗಪ್ಪ ಕರಿಕಟ್ಟಿ, ಗಜಾನನ ಕಾಂಬಳೆ ಪಾಲಕರು ಪೋಷಕರು ಶಿಕ್ಷಣ ಪ್ರೇಮಿಗಳು ಆಗಮಿಸಿದ್ದರು.

ಶಾಲಾ ಪ್ರಧಾನ ಗುರುಗಳು ನದಾಫ ಹಾಗು ಎಲ್ಲ ಸಿಬ್ಬಂದಿ ಮಕ್ಕಳು ಹಾಜರಿದ್ದರು ಇದೇ ಸಮಯದಲ್ಲಿ ಶೈಕ್ಷಣಿಕ ವರ್ಷದ ಘೋಷ ವಾಕ್ಯ ಹೇಳಲಾಯಿತು. ಎಲ್ಲ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ಹರ್ಷ ವ್ಯಕ್ತ ಪಡಿಸಿದರು ಈ ದಿನ ಶಾಲೆಯಲ್ಲಿ ಎಲ್ಲರಿಗೂ ಸಿಹಿ ಊಟ ಬಡಿಸಲಾಯಿತು ಒಟ್ಟಿನಲ್ಲಿ ಶಾಲೆಯ ವಾತಾವರಣ ಚೆನ್ನಾಗಿತ್ತು ಪಾಲಕರ ಸಭೆ ನಡೆಸಿ ವರದಿ ಸಂಗ್ರಹಿಸಲಾಯಿತು ಮನೆ ಮನೆಗೆ ಹೋಗಿ ಸರಕಾರಿ ಶಾಲೆಗೆ ದಾಖಲಾಗಲು ಸಭೆ ತೀರ್ಮಾನಿಸಿತು

Latest articles

More like this