Homeಸುದ್ದಿಗಳುವಿಜ್ಞಾನ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕು ಎಂದು ಹೇಳಿಕೊಡುತ್ತದೆ: ಪ್ರೊ. ಮೀಶಿ ನಾಯಕ

ವಿಜ್ಞಾನ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕು ಎಂದು ಹೇಳಿಕೊಡುತ್ತದೆ: ಪ್ರೊ. ಮೀಶಿ ನಾಯಕ

Published on

ಮೂಡಲಗಿ: “ವಿಜ್ಞಾನ, ತಂತ್ರಜ್ಞಾನ ಅಧ್ಯಯನ ಮನುಷ್ಯನಿಗೆ ಹೇಗೆ ಬದುಕಬೇಕೆಂದು ಹೇಳಿಕೊಟ್ಟರೆ, ಕಲೆ ಏತಕ್ಕಾಗಿ ಬದುಕಬೇಕೆಂದು ಹೇಳಿಕೊಡುತ್ತದೆ,” ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎ ಎಸ್ ಮೀಶಿ ನಾಯಿಕ ಅಭಿಪ್ರಾಯಪಟ್ಟರು.

ಅವರು  ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಬಿಸಿಎ ಮಹಾವಿದ್ಯಾಲಯದ ಲ್ಲಿ ಸನ್ 2026-27 ನೇ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕಾಲೇಜಿನ ಕುರಿತು ಮಾಹಿತಿ ನೀಡುವ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಕಲಾ ವಿಭಾಗದ ಕುರಿತು ಉಪನ್ಯಾಸ ನೀಡುತ್ತಿದ್ದರು.

ಇಂದು ಶರವೇಗದಲ್ಲಿ ಸಾಗುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಧ್ಯಯನದತ್ತ ವಿದ್ಯಾರ್ಥಿಗಳ ಒಲವು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಪ್ರೊ. ಮೀಶಿ ನಾಯಿಕ, ಕಲಾ ಅಧ್ಯಯನ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಮೌಲ್ಯಗಳನ್ನು ಹಾಗೂ ವಿಶಿಷ್ಟ ಸಾಮರ್ಥ್ಯವನ್ನು ಬೆಳೆಸಿ. ಇನ್ನೊಬ್ಬರಿಗಿಂತ ವಿಭಿನ್ನವಾಗಿ ರೂಪಿಸುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ನಮ್ಮೆದುರಿಗಿರುವ ಮೇರು ವ್ಯಕ್ತಿತ್ವದ ಚಿಂತಕರು, ವಿಮರ್ಶಕರು, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ರಾಜಕಾರಣಿಗಳು, ವಕೀಲರು, ನ್ಯಾಯವಾದಿಗಳು, ಅಧಿಕಾರಿಗಳು, ಹೋರಾಟಗಾರರು, ಸೈನಿಕರು, ಪೊಲೀಸರು, ರೈತರು ಹಾಗೂ ವ್ಯಾಪಾರಿಗಳು ಹೀಗೆ ಎಲ್ಲರೂ ಕಲಾ ವಿಭಾಗದಿಂದ ರೂಪಗೊಂಡು ಶ್ರೇಷ್ಠನಾಮ ರಾವವರು ಎಂದು ಸ್ಮರಿಸಿಕೊಂಡರು

ಸುಮಾರು 43 ಎಕರೆ ವಿಸ್ತಿರ್ಣದಲ್ಲಿ ಹರಡಿಕೊಂಡಿರುವ ನಮ್ಮ ಕಾಲೇಜಿನ ಪರಿಸರದಲ್ಲಿ ಸುಮಾರು ಒಂಬತ್ತು ಐಚ್ಚಿಕ ವಿಷಯಗಳು ಹದಿನೈದು ವಿಷಯಗಳ ಕಾಂಬಿನೇಷನ್ ಗುಂಪುಗಳು ಅರ್ಹ ಪ್ರತಿಭಾವಂತ ಹಾಗೂ ಸಂಶೋಧನಾ ಸಂಪನ್ಮೂಲವುಳ್ಳ ಭೂಧನಾ ವ್ಯವಸ್ಥೆ ಸುಸಜ್ಜಿತ ಗ್ರಂಥಾಲಯ ಕ್ರೀಡಾ ಮೈದಾನ ಎನ್ ಎಸ್ ಎಸ್ ಸ್ಕೌಟ್ಸ್ ಎಂಡ್ ಗೈಡ್ಸ ಘಟಕಗಳು ಹೇಗೆ ಸೌಲಭ್ಯಗಳ ರಾಶಿಯೆ ಕಾಲೇಜಿನಲ್ಲಿ ಇದೆ ಎಂದು ಬಣ್ಣಿಸಿದರು.

ವಾಣಿಜ್ಯ ವಿಭಾಗದ ಕುರಿತು ಪ್ರಾಧ್ಯಾಪಕಿ ಪ್ರೊ. ಸುನಂದಾ ಅಂಗಡಿ ಮಾತನಾಡಿ, ವಾಣಿಜ್ಯಶಾಸ್ತ್ರದ ಅಧ್ಯಯನದಿಂದ ವಿದ್ಯಾರ್ಥಿಗಳು ಬ್ಯಾಂಕಿಂಗ್, ಲೆಕ್ಕಪತ್ರ ನಿರ್ವಹಣೆ, ಹಣಕಾಸು, ತೆರಿಗೆ, ವಿಮೆ, ಮಾರುಕಟ್ಟೆ ನಿರ್ವಹಣೆ ಹಾಗೂ ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಬಿಸಿಎ ವಿಭಾಗದ ಕುರಿತು ಪ್ರಾಧ್ಯಾಪಕಿ ಪ್ರೊ. ನಿಖಿತಾ ಭರಮನ್ನವರ ಮಾತನಾಡಿ, ಬಿಸಿಎ ಅಧ್ಯಯನದಲ್ಲಿ ಪ್ರೋಗ್ರಾಮಿಂಗ್, ವೆಬ್ ಡೆವಲಪ್‌ಮೆಂಟ್, ಡೇಟಾಬೇಸ್ ನಿರ್ವಹಣೆ, ಸಾಫ್ಟ್‌ವೇರ್ ಅಭಿವೃದ್ಧಿ, ಕಂಪ್ಯೂಟರ್ ನೆಟ್‌ವರ್ಕಿಂಗ್ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಜ್ಞಾನವನ್ನು ಪಡೆಯುವುದರ ಜೊತೆಗೆ, ಅಧ್ಯಯನದ ನಂತರ ಸಾಫ್ಟ್‌ವೇರ್ ಡೆವಲಪರ್, ವೆಬ್ ಡೆವಲಪರ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಡೇಟಾಬೇಸ್ ನಿರ್ವಾಹಕ ಹಾಗೂ ಟೆಕ್ನಿಕಲ್ ಸಪೋರ್ಟ್ ಎಕ್ಸಿಕ್ಯೂಟಿವ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಪವನ್ ಕುಮಾರ್ ಕೆ. ಮಾತನಾಡಿ, “ಕಲಿಯಲು ಬಂದ ವಿದ್ಯಾರ್ಥಿಗಳು ಶಿಸ್ತನ್ನು ಕಲಿಯದಿದ್ದರೆ ಮತ್ತೇನನ್ನೂ ಕಲಿಯಲು ಸಾಧ್ಯವಿಲ್ಲ. ಆದ್ದರಿಂದ ಜೀವನದಲ್ಲಿ ಮೊದಲು ಶಿಸ್ತನ್ನು ಅಳವಡಿಸಿಕೊಳ್ಳಿರಿ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸವಿತಾ ಕೊತ್ತಲ ಆಯ್ ಕ್ಯು ಎ ಸಿ ಸಂಯೋಜನಾಧಿಕಾರಿ ಪಿ.ಬಿ ಚೌಡಕಿ ಆಯ್ ಟಿ ಸಂಯೋಜನಾಧಿಕಾರಿ ಎಮ್.ಎಸ್.ಕುಂದರಗಿ ಎನ್. ಎಸ್ ಎಸ್ ಸಂಯೋಜನಾಧಿಕಾರಿಗಳಾದ ಎಲ್ ಪಿ ಹಿಡಕಲ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷರಾದ ಭಾರತಿ ತಳವಾರ ಗ್ರಂಥಪಾಲಕ ಡಾ ಬಸವಂತ ಬರಗಾಲಿ ಪ್ರೀತಿ ಬೆಳಗಲಿ ಎಸ್. ಎಲ್ ಹೊಸಟ್ಟಿ ಎಸ್ ಎಸ್ ಹಿರೇಮಠ ಗೀತಾ ಹಿರೇಮಠ ನಿರಂಜನ್ ಹೊಸಟ್ಟಿ ವೆಂಕಟೇಶ ಪಾಟೀಲ ಲಕ್ಷ್ಮಣ ನಂದಿ ಮನೋಹರ ಲಮಾನಿ ರಮೇಶ ಖಾನಪ್ಪಗೋಳ ಕಲ್ಮೇಶ ಇಂಗಳೆ ಮುಂತಾದವರು ಉಪಸ್ಥಿತರಿದ್ದರು
ಪ್ರಾರಂಭದಲ್ಲಿ ವಿದ್ಯಾರ್ಥಿನಿ ಅಶ್ವಿನಿ ನಾಯಿಕವಾಡಿ ಪ್ರಾರ್ಥಿಸಿದರು. ಎಸ್ ಎಸ್ ಕುಳಿಗೋಡ
ಸ್ವಾಗತಿಸಿದರು. ಎಸ್ ಆರ್ ಮುಗಳಿ ಕಾರ್ಯಕ್ರಮ ನಿರ್ವಹಿಸಿ. ಕೊನೆಗೆ ವಂದಿಸಿದರು.

Latest articles

More like this