Homeಸುದ್ದಿಗಳುಬೀದರ ಸಕ್ಕರೆ ಕಾರ್ಖಾನೆ ಉಳಿಸಲು ಖಂಡ್ರೆ ಶಿಕ್ಷಣ ಸಂಸ್ಥೆ ಮಾರಬೇಕು - ಸೋಮನಾಥ ಪಾಟೀಲ

ಬೀದರ ಸಕ್ಕರೆ ಕಾರ್ಖಾನೆ ಉಳಿಸಲು ಖಂಡ್ರೆ ಶಿಕ್ಷಣ ಸಂಸ್ಥೆ ಮಾರಬೇಕು – ಸೋಮನಾಥ ಪಾಟೀಲ

Published on

ಬೀದರ – ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಲು ಖಂಡ್ರೆಯವರ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಮಾರಾಟ ಮಾಡಬೇಕು ಎಂದು ಬೀದರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ ಹೇಳಿದರು.

BSSK ಬಚಾವ್ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿ. ಭೀಮಣ್ಣ ಖಂಡ್ರೆಯವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಕಟ್ಟುವಾಗ ಸಕ್ಕರೆ ಕಾರ್ಖಾನೆಯಿಂದ ಒಂದು ಚೀಲ ಸಕ್ಕರೆಗೆ ಒಂದು ರೂ. ಸೆಸ್ ಪಡೆದು ಕಟ್ಟಿದ್ದಾರೆ. ಈಗ ಕಾರ್ಖಾನೆ ಸಂಕಷ್ಟದಲ್ಲಿ ಇರುವಾಗ ಶಿಕ್ಷಣ ಸಂಸ್ಥೆ ಮಾರಿ ಕಾರ್ಖಾನೆಯ ಸಾಲ ತೀರಿಸಬೇಕು. ಆ ಸಂಸ್ಥೆಯ ಮಾಲೀಕರೇನು ರೈತರಾ ಎಂದು ಪ್ರಶ್ನೆ ಮಾಡಿ ಸಚಿವ ಖಂಡ್ರೆ ವಿರುದ್ಧ ಕಿಡಿ ಕಾರಿದರು.

ಭೀಮಣ್ಣ ಖಂಡ್ರೆ ಕೃಷಿ ಮಹಾವಿದ್ಯಾಲಯ, ಬೀದರ

BSSk ಕಾರ್ಖಾನೆಯ ಮೇಲೆ ಸುಮಾರು ನಾನೂ ರು ಕೋಟಿ ಸಾಲ ಇರುವ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಬಿಡಿಸಿಸಿ ಬ್ಯಾಂಕ್ ನವರು ಮಾರಾಟ ಮಾಡಲು ಮುಂದಾಗಿದ್ದು ಅದನ್ನು ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಕಳೆದ ಮೂರು ವರ್ಷಗಳಿಂದ ಬಂದ್ ಇರುವ ಕಾರ್ಖಾನೆಯನ್ನು ಮಾರಾಟ ಮಾಡದೆ ಲೀಸ್ ಮೇಲೆ ಕೊಟ್ಟು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಹುಮನಾಬಾದ್ ನಿಂದ ಹಳ್ಳಿಖೇಡವರೆಗೆ ಪಾದಯಾತ್ರೆ ಹಮ್ಮಿಕೊಂಡ ಸಂದರ್ಭದಲ್ಲಿ ಪಾಟೀಲ ಮಾತನಾಡಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this