Homeಸುದ್ದಿಗಳುಶ್ರೀ ಸಿದ್ಧಾರೂಢ ದೇವರ ಪರಮಾರ್ಥ ಮಹೋತ್ಸವ

ಶ್ರೀ ಸಿದ್ಧಾರೂಢ ದೇವರ ಪರಮಾರ್ಥ ಮಹೋತ್ಸವ

Published on

ಹಳ್ಳೂರ – ಶ್ರೀ ಮಹಾಲಕ್ಷ್ಮಿ ಸ್ಥಾನ ವೆನಿಸಿದ ಸುಕ್ಷೇತ್ರ ಹಳ್ಳೂರ ಗ್ರಾಮದಲ್ಲಿ ಸದ್ಗುರು ಶ್ರೀ ಸಿದ್ದಾರೂಢ ದೇವರ ಪರಮಾರ್ಥ ಮಹೋತ್ಸವವು ಶನಿವಾರ ದಿ 30 ರಂದು ಬೆಳಿಗ್ಗೆ ಶ್ರೀ ಸಿದ್ದಾರೂಢ ಮೂರ್ತಿಗೆ ಅಭಿಷೇಕ ಮಹಾಪೂಜೆ ನಂತರ ಓಂಕಾರ ಧ್ವಜಾರೋಹಣ ನೆರೆವೇರುವುದು.

ರಾತ್ರಿ 8 ಗಂಟೆಗೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ. ರವಿವಾರ ಮುಂಜಾನೆ ಶ್ರೀ ಸಿದ್ಧಾರೂಢ ಮೂರ್ತಿಗೆ ಅಭಿಷೇಕ, ಮಹಾಪೂಜೆ ನಂತರ ಶ್ರೀ ಸಿದ್ಧಾರೂಢ ಮಠದಿಂದ ಪಲ್ಲಕ್ಕಿ ಉತ್ಸವ ಶ್ರೀ ಸಿದ್ಧಾರೂಢ ಭಾವಚಿತ್ರದೊಂದಿಗೆ ಆರತಿ ಮತ್ತು ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ಕಾರ್ಯಕ್ರಮ ಜರಗುವುದು. ಮುಂಜಾನೆ 11 ಗಂಟೆಗೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮ ಜರುಗುವುದು. ಪ್ರವಚನ ನೀಡಲಿರುವ ಮಹಾತ್ಮರು ಶ್ರೀ ಜ್ಞಾನೇಶ್ವರ ಮಹಾಸ್ವಾಮಿಗಳು ಮಠ ನಾಗರಾಳ. ಶ್ರೀ ನಾಗೇಶ್ವರ ಮಹಾಸ್ವಾಮಿಗಳು ಸಿದ್ಧಾರೂಢ ಮಠ ಉಪ್ಪಾರಟ್ಟಿ. ಶ್ರೀ ಆನಂದಾನಂದ ಶರಣರು ನಾಗರಾಳ. ಶಿವಾನಂದ ಮಹಾಸ್ವಾಮಿಗಳು ತಿಕೋಟಾ. ಬೆಮೂಲ ಅಧ್ಯಕ್ಷರು ಹಾಗೂ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.

2 ದಿನ ಶ್ರೀ ಸಿದ್ದಾರೂಢ ಭಜನಾ ಮಂಡಳಿ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಶ್ರೀ ಸಿದ್ದಾರೂಢ ಪಾರಮಾರ್ಥ ಮಹೋತ್ಸವದಲ್ಲಿ ಹಳ್ಳೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತರು ಭಾಗವಹಿಸಬೇಕೆಂದು ಜಾತ್ರೆಯ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಮುರಿಗೆಪ್ಪ ಮಾಲಗಾರ

Latest articles

More like this