Homeಸುದ್ದಿಗಳುಮೇ ೩೦ಕ್ಕೆ ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ವಿಶೇಷ ‘ಸ್ವಾತಿ’ ಪೂಜೆ

ಮೇ ೩೦ಕ್ಕೆ ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ವಿಶೇಷ ‘ಸ್ವಾತಿ’ ಪೂಜೆ

Published on

ಮೈಸೂರು – ನಗರದ ಕಾಳಿದಾಸ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ ೩೦ರಂದು ಶನಿವಾರ ಶ್ರೀ ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್‌ರವರ ದಿವ್ಯ ಅನುಗ್ರಹದೊಂದಿಗೆ ಸೌರಮಾನ ಶ್ರೀ ಲಕ್ಷ್ಮಿ ನರಸಿಂಹ ಜಯಂತಿ ಹಾಗೂ ವಿಶೇಷ ‘ಸ್ವಾತಿ’ ಪೂಜೆ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೭.೩೦ಕ್ಕೆ ವಿಶ್ವರೂಪ ದರ್ಶನ, ೮.೪೫ಕ್ಕೆ ಶ್ರೀ ಲಕ್ಷಿö್ಮÃನರಸಿಂಹಸ್ವಾಮಿ ನವಕಲಶ ಸ್ಥಾಪನ ತಿರುಮಂಜನ (ಅಭಿಷೇಕ) ಮತ್ತು ದಿವ್ಯ ಪ್ರಬಂದ ಪಾರಾಯಣ, ಮಧ್ಯಾಹ್ನ ೧ಕ್ಕೆ ವಿಶೇಷ ಅಲಂಕಾರ, ಮಂತ್ರಪುಷ್ಪ, ಅಷ್ಟೋತ್ತರ, ೧.೩೦ಕ್ಕೆ ಮಹಾ ನೈವೇದ್ಯ, ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಸಂಜೆ ೭.೦೦ ಗಂಟೆಗೆ ತಿರುವೀಧಿ ಉತ್ಸವ (ಮುಖ್ಯ ರಸ್ತೆಗಳಲ್ಲಿ), ೮ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ೯ಕ್ಕೆ ದೇವರಿಗೆ ಏಕಾಂತ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಮುಖ್ಯಸ್ಥ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ತಿಳಿಸಿದ್ದಾರೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ. ಮಾಹಿತಿಗೆ ಮೊಬೈಲ್ ೯೩೪೨೧೮೮೩೨೩, ೭೫೯೮೮೩೨೨೭೧ ಸಂಪರ್ಕಿಸಬಹುದು.

Latest articles

More like this