Homeಸುದ್ದಿಗಳುಬುದ್ಧ ಬಸವ ಅಂಬೇಡ್ಕರ ಜನ್ಮ ದಿನದ ಅಂಗವಾಗಿ ರಾಜ್ಯ ಮಟ್ಟದ ಕವನ ಸ್ಪರ್ಧೆ

ಬುದ್ಧ ಬಸವ ಅಂಬೇಡ್ಕರ ಜನ್ಮ ದಿನದ ಅಂಗವಾಗಿ ರಾಜ್ಯ ಮಟ್ಟದ ಕವನ ಸ್ಪರ್ಧೆ

Published on

ಬಾಗಲಕೋಟೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬುದ್ಧ ಬಸವ ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಥಮ ಬಹುಮಾನ 5,001 ಮತ್ತು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ದ್ವಿತೀಯ ಬಹುಮಾನ 4001 ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ತೃತೀಯ ಬಹುಮಾನ 3001 ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ಸಾವಿರದ ಒಂದು ರೂಪಾಯಿಯ ಐದು ಸಮಾಧಾನಕರ ಬಹುಮಾನ ಪ್ರಶಸ್ತಿ ಪತ್ರಗಳು ಮತ್ತು ನೆನಪಿನ ಕಾಣಿಕೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯ ನಿಯಮಗಳು ಹೀಗಿವೆ ಒಬ್ಬರಿಗೆ ಒಂದೇ ಕವಿತೆಯನ್ನು ಕಳಿಸುವ ಅವಕಾಶವಿದೆ.
ಚುಟುಕುಗಳು ಹನಿಗವನಗಳು ಹೈಕುಗಳು ಗಜಲ್ ಗಳಿಗೆ ಅವಕಾಶವಿಲ್ಲ
ಸ್ವರಚಿತ ಕವಿತೆಗಳಾಗಿರಬೇಕು ಸಾಮಾಜಿಕ ಜಾಲತಾಣಗಳು ಸೇರಿದಂತೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗಿರಬಾರದು, ಕೃತಿ ಚೌರ್ಯ ಮಾಡಿರಬಾರದು ಕವಿಗಳು ಕವನದ ಜೊತೆಗೆ ಕಾಯಂ ವಿಳಾಸ ಮತ್ತು ಮೊಬೈಲ್ ನಂಬರನ್ನು ಹಾಕಿರಬೇಕು. ಸಾಮಾಜಿಕ ಚಿಂತನಾರ್ಹ ಕವಿತೆಗಳಾಗಿರಬೇಕು ಎಲ್ಲಾ ಬಹುಮಾನಿತ ಕವಿತೆಗಳ ಜೊತೆಗೆ ಆಯ್ದ ಕವಿತೆಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ತರಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಲಾಗುವುದು. ಕವಿತೆಯಲ್ಲಿ ಧರ್ಮಾತೀತ ವರ್ಗಾತಿತ ಜಾತ್ಯಾ ಧಾರಿತ ಕೋಮು ಗಲಭೆ ಮುಂತಾದ ಸಾಮಾಜಿಕ ಬಿಕ್ಕಟ್ಟುಗಳನ್ನು ಉಂಟುಮಾಡುವ ವಿಷಯಗಳು ಇರಬಾರದು

ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಕವಿತೆಗಳನ್ನು ಕಳಿಸಲು 30-4- 2026 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ 9731095271 ಮಾಹಿತಿಯನ್ನು ಪಡೆದುಕೊಳ್ಳಬಹುದು ಅಂಚೆಯಲ್ಲಿ ಕಳಿಸುವವರು ಶ್ರೀ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷರು ಕ ಸಾ ಪ ಕಲಾಭವನ ನವನಗರ ಬಾಗಲಕೋಟೆ ಇಲ್ಲಿಗೆ ಹಾಗೂ bgkkasapa@gmail.com ಈ ಇ-ಮೇಲ್ ಗೂ ಕಳಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest articles

More like this