ಸಿಂದಗಿ : ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ ೩೭೧(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ೪೮ ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸಾವಿರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಬೆಂಬಲ ವ್ಯಕ್ತಪಡಿಸಿದರು.
ದಲಿತ ವಿದ್ಯಾರ್ಥಿ ಪರಿಷತ್ತು ಜಿಲ್ಲಾ ಸಂಚಾಲಕ ಹುಚ್ಚಪ್ಪ ಬಾವಿಮನಿ ಮಾತನಾಡಿ, ಡಾ.ಅಂಬೇಡ್ಕರ ಅವರ ಸಂವಿಧಾನದ ೯೮ರ ಅನುಛೇದ ತಿದ್ದಪಡಿಯಲ್ಲಿ ೨೦೧೩ರಲ್ಲಿ ಹೈದ್ರಾಬಾದ ಕರ್ನಾಟಕದ ೬ ಜಿಲ್ಲೆಗಳಿಗೆ ಜಾರಿ ಮಾಡುವ ಸಂದರ್ಭದಲ್ಲಿ ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿರುವ ಸಿಂದಗಿ, ಇಂಡಿ, ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳು ದಾಖಲಿವೆ ಆದರೆ ಇವುಗಳನ್ನು ಹೀಂದೂಳಿಸಿ ಕೇಂದ್ರಕ್ಕೆ ಸಿಪ್ಪಾರಸ್ಸು ಮಾಡಲಾಗಿದೆ ಅದರ ಮರುಪಶೀಲನೆ ಮಾಡಬೇಕು ಇಲ್ಲದಿದ್ದರೆ ಜಿಲ್ಲೆಯಾಧ್ಯಂದ ಉಗ್ರಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ನಗರದ ಪ್ರದೇಶದ ಗೋಲಿಬಾರ ಮಡ್ಡಿ, ಕಕ್ಕಳಮೇಲಿ, ಮಾಡಬಾಳ, ಚಟ್ಟರಕಿ, ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ರಜಾರಕರ ಧಂಗೆಯಲ್ಲಿ ಹಾಳಾದ ಬಗ್ಗೆ ದಾಖಲೆಗಳಿವೆ ಆದಾಗ್ಯೂ ಜಿಲ್ಲಾ ರಾಜಕಾರಣಿಗಳ ನಿರ್ಲಕ್ಷ್ಯ ದೋರಣೆಯಿಂದ ಈ ಜಿಲ್ಲೆ ಕೈಬಿಟ್ಟು ಹೋಗಿದೆ ಅದರ ಮರುಪರಿಶೀಲನೆ ನಡೆಸುವುದು ನಮ್ಮೆಲ್ಲರ ಹಕ್ಕೋತ್ತಾಯವಾಗಿದೆ. ಕಾರಣ ಪ್ರತಿ ಮನೆಯಿಂದ ವಿದ್ಯಾರ್ಥಿಗಳ ಪಡೆ ಹೊರಬಂದು ಜನಾಂದೋಲನ ನಡೆಸಬೇಕು ಅಂದಾಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಚ್ಚೆತ್ತುಕೊಂಡು ಇತ್ತ ನೋಡಿ ವಿಜಯಪುರ ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು ಸಹ ಸಂವಿಧಾನದ ೩೭೧(ಜೆ) ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.
ಬಮ್ಮನಜೋಗಿ ಗ್ರಾಮದ ಜಗದೀಶ ನಾಯ್ಕೋಡಿ ಮಾತನಾಡಿ, ೨೦೧೩ರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಂವಿದಾನದ ವಿಶೇಷ ಸೌಲಭ್ಯ ಅಡಿಯಲ್ಲಿ ಹಿಂದುಳಿದ ಪ್ರದೇಶಕ್ಕೆ ದೊರಕುವ ವಿಶೇಷ ಸ್ಥಾನಮಾನ ೩೭೧ ಜೆ ಕಲಂ ಜಾರಿಗೆ ಬಂದಿತು. ಆದರೆ ಪಕ್ಕದ ಜಿಲ್ಲೆ ವಿಜಯಪುರ ಹೆಸರು ಬಿಟ್ಟುಹೋಯಿತು. ಕಲ್ಯಾಣ ಕರ್ನಾಟಕ ಸಮನಾಗಿ ವಿಜಯಪುರ ಜಿಲ್ಲೆಯು ಕೂಡ ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೌಗೋಳಿಕವಾಗಿ, ಪ್ರಾದೇಶಿಕವಾಗಿ ಹಿಂದುಳಿದ ಜಿಲ್ಲೆಯಾಗಿದೆ ೩೭೧ ಜೆ ಅಡಿಯಲ್ಲಿ ಸಿಗುವ ಪ್ರಾದೇಶಿಕ ಮಿಸಲಾತಿಗಳು ವಿಜಯಪುರ ಜಿಲ್ಲೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಖಂಡ ರೈತಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜುಣಗಿ, ಉಪಾಧ್ಯಕ್ಷ ಶಿವಶರಣಪ್ಪ ಬಿರಾದಾರ, ಜಗದೇವಿ ಬಿರಾದಾರ, ಅಶೋಕ ಅಲ್ಲಾಪುರ, ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಹರ್ಷವರ್ಧನ ಪೂಜಾರಿ, ಸಮಿತಿಯ ರಂಗನಾಥ ತೊರ್ಪೆ, ಎಂ.ಎಂ.ಹಂಗರಗಿ, ಅಶೋಕ ಅಲ್ಲಾಪುರ, ಗುರುರಾಜ ಪಡಶೆಟ್ಟಿ, ಶಂಕರ ಮಲ್ಲೇದ, ಪಂಡಿತ ಯಂಪೂರೆ, ಸಂಗಪ್ಪ ಬ್ಯಾಕೋಡ, ಪ್ರಶಾಂತ ಕುಲಕರ್ಣಿ, ದಾನಪ್ಪಗೌಡ ಚನಗೊಂಡ ವಕೀಲರು, ಸಿದ್ದು ಕಡಗಂಚಿ, ಪರಮೇಶ ಬಗಲಿ, ಅಂಬರೀಶ ಸುಣಗಾರ, ಎಸ್.ಆರ್.ಪಾಟೀಲ, ಬಾಬು ವಾಲೀಕಾರ ಸೇರಿದಂತೆ ಎಚ್.ಜಿ.ಪಪೂ ಕಾಲೇಜಿನ, ಸರಕಾರಿ ಪಪೂ ಕಾಲೇಜಿನ, ಆರ್.ಡಿ.ಪಾಟೀಲ ಕಾಲೇಜಿನ, ಸರಕಾರಿ ವಸತಿ ನಿಲಯದ, ಓಂಕಾರ ಕೆರಿಯರ ಅಕೆಡೆಮಿ ಗ್ರಂಥಾಲಯದ, ಕುವೆಂಪು ಗ್ರಂಥಾಲಯದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.