Homeಸುದ್ದಿಗಳುSSB ಶಸ್ತ್ರಚಿಕಿತ್ಸಕರಿಂದ ನಂದಿ ಬೆಟ್ಟಕ್ಕೆ ಟ್ರಕಿಂಗ್

SSB ಶಸ್ತ್ರಚಿಕಿತ್ಸಕರಿಂದ ನಂದಿ ಬೆಟ್ಟಕ್ಕೆ ಟ್ರಕಿಂಗ್

Published on

ಬೆಂಗಳೂರು – ಆರೋಗ್ಯವಂತ ಶಸ್ತ್ರಚಿಕಿತ್ಸಕ; ಆರೋಗ್ಯವಂತ ರಾಷ್ಟ್ರ ಎನ್ನುವ ಶ್ಲಾಘನೀಯ ಧ್ಯೇಯವಾಕ್ಯದೊಂದಿಗೆ, ಬೆಂಗಳೂರಿನ ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು (SSBASICC) ಮತ್ತು ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ (ASI) ಕರ್ನಾಟಕ ಶಾಖೆಯ ವತಿಯಿಂದ ಏಪ್ರಿಲ್ 12 ರಂದು ವಿಶ್ವಪ್ರಸಿದ್ಧ ನಂದಿ ಬೆಟ್ಟಕ್ಕೆ ಯಶಸ್ವಿ ಚಾರಣ ಹಮ್ಮಿಕೊಳ್ಳಲಾಗಿತ್ತು.

​ವೈದ್ಯಕೀಯ ವೃತ್ತಿಯ ಒತ್ತಡದ ನಡುವೆಯೂ ದೈಹಿಕ ಫಿಟ್‌ನೆಸ್ ಮತ್ತು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಅಸ್ಟರ್ ಸಿಎಂಐ ಆಸ್ಪತ್ರೆಯ (Aster CMI Hospital) ಸಹಯೋಗದೊಂದಿಗೆ ನಡೆದ ಈ ಚಾರಣದಲ್ಲಿ ನೂರಾರು ಶಸ್ತ್ರಚಿಕಿತ್ಸಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು

ಬೆಳಿಗ್ಗೆ 5:30ಕ್ಕೆ ಹೆಬ್ಬಾಳದ ಅಸ್ಟರ್ ಸಿಎಂಐ ಆಸ್ಪತ್ರೆಯಿಂದ ಚಾರಣಕ್ಕೆ ಚಾಲನೆ ನೀಡಲಾಯಿತು.
ಸುಲ್ತಾನ್‌ಪೇಟೆಯ ಮೂಲಕ ಆರಂಭವಾದ ಈ ಚಾರಣದಲ್ಲಿ ವೈದ್ಯರು ಪ್ರಕೃತಿಯ ಸೌಂದರ್ಯವನ್ನು ಸವಿಯುವುದರ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು.

​ಶಸ್ತ್ರಚಿಕಿತ್ಸಕರ ಜೀವನದಲ್ಲಿ ದೈಹಿಕ ಸಾಮರ್ಥ್ಯವು ಅತ್ಯಂತ ಪ್ರಮುಖವಾದುದು. ವೈದ್ಯರು ಫಿಟ್ ಆಗಿದ್ದಾಗ ಮಾತ್ರ ರೋಗಿಗಳಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂಬ ಆಶಯದೊಂದಿಗೆ ಈ ನಡಿಗೆ ಹಮ್ಮಿಕೊಳ್ಳಲಾಗಿತ್ತು.
​ಈ ಸಂದರ್ಭದಲ್ಲಿ KSC ASI chairman Dr. ನಾಝಿಯ ಶೇಖ್ ASI ರಾಷ್ಟ್ರೀಯ ಸಂಯೋಜಕ ಡಾ. ಎಚ್.ವಿ. ಶಿವರಾಮ್ SSBASICC ಅಧ್ಯಕ್ಷರಾದ ಡಾ. ಸುನಿಲ್ ಕುಮಾರ್ ಕಾರ್ಯದರ್ಶಿ ಡಾ. ವಿಕ್ರಮ್ ಎಸ್ ಬಿಳಿಗಿರಿ. ಖಜಾಂಚಿ ಡಾ. ಕಪಿಲ್ ಕಿಶೋರ್ ಡಾಕ್ಟರ್ ರವೀಂದ್ರ. ಜಯದೇವ ಹೃದ್ರೋಗ ಆಸ್ಪತ್ರೆಯ ಖ್ಯಾತ ಶಸ್ತ್ರಚಿಕಿತ್ಸಕ Dr.ಸುನಿಲ್ ಪಿ ಕೆ, Dr. ಲಕ್ಷ್ಮಣ್ Dr. ವೆಂಕಟೇಶ್ ಕೆ ಎಲ್ . Aster CMI Dr .ಮಹೇಶ್ ಚೆನ್ನಪ್ಪ ಸೇರಿದಂತೆ ಹಲವು ಗಣ್ಯ ಶಸ್ತ್ರ ಚಿಕಿತ್ಸಕರು ಉಪಸ್ಥಿತರಿದ್ದರು

​ಬೆಟ್ಟದ ತುದಿಯಲ್ಲಿ ಯೋಗ ಮತ್ತು ಲಘು ಉಪಾಹಾರದ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.”ಫಿಟ್‌ನೆಸ್ ಇಸ್ ದ ಹಾಲ್‌ಮಾರ್ಕ್ ಆಫ್ ಎ ಸರ್ಜನ್” ಎನ್ನುವ ಘೋಷವಾಕ್ಯ ಈ ಬಾರಿಯ ಚಾರಣದ ಪ್ರಮುಖ ಆಕರ್ಷಣೆಯಾಗಿತ್ತು

ಅಸ್ಟರ್ ಸಿಎಂಐ ಆಸ್ಪತ್ರೆಯ ಬೆಂಬಲದೊಂದಿಗೆ ನಡೆದ ಈ “ಟ್ರೆಕ್ ಟು ನಂದಿ ಹಿಲ್ಸ್” ಅಭಿಯಾನವು ಯಶಸ್ವಿಯಾಗಿ ನೆರವೇರಿತು.

Latest articles

More like this