ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು ಮತ್ತು ಹಾಸನ ಹಾಗೂ ಶ್ರೀ ಶಾರದ ಕಲಾ ಸಂಘ, ವಿಜಯನಗರ ಬಡಾವಣೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್. ಜಿ. ಗಂಗಾಧರ ಕಲಾವಿದರು ಇವರ ಸಾರಥ್ಯದಲ್ಲಿ ಏರ್ಪಡಿಸಲಾಗಿದೆ.
ಹಾಸನದ ಅಂಬೇಡ್ಕರ್ ಭವನ ಸಭಾಂಗಣದಲ್ಲಿ ದಿನಾಂಕ 19-4-2026ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ಕ್ಷೇತ್ರದ ಶಾಸಕರು ಸ್ವರೂಪ ಪ್ರಕಾಶ ನೆರವೇರಿಸುವರು. ಪತ್ರಕರ್ತರು ರವಿ ನಾಕಲಗೂಡು ಅಧ್ಯಕ್ಷತೆಯಲ್ಲಿ ನಾಯಕರಹಳ್ಳಿ ಮಂಜೇಗೌಡರು ಮಾಜಿ ಕ.ಸಾ.ಪ. ಅಧ್ಯಕ್ಷರು, ಡಾ. ತಾರಾನಾಥ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಈ.ಕೃಷ್ಣೇಗೌಡರು, ಸ.ಕಾ. ಇಂ, ಪುಟ್ಟರಾಜಪ್ಪನವರು ನಿ. ಸ.ಕಾ.ಇo, ಯೋಗೇಶ್, ವಕೀಲರು, ವೆಂಕಟೇಶ್ ನಿ. ಕಿ. ಇಂ. ಕೃಷ್ಣದಾಸ್ ದ.ಸಂ.ಸ. ಮುಖಂಡರು ಉಪಸ್ಥಿತಿ ಇರುವರು.
ವಿಶೇಷ ಆಹ್ವಾನಿತರಾಗಿ ಸಾಹಿತಿ ಗೊರೂರು ಅನಂತರಾಜು, ಕಲಾವಿದರುಗಳಾದ ಬಿದರೆ ರವಿ, ದರ್ಶನ್ ವೆಂಕಟೇಶ್, ಎ.ಸಿ. ರಾಜು, ಕುಮಾರ್, ಗೋವಿಂದೇಗೌಡರು, ವೆಂಕಟೇಗೌಡರು ಪಟ್ನ, ಹೆಚ್.ಜಿ. ವಿಜಯ ಕುಮಾರ್ ನ್ಯಾಯಾಂಗ ಇಲಾಖೆ ಭಾಗವಹಿಸುವರು..
ಶ್ರೀಮತಿ ರಾಣಿ ತಂಡದಿಂದ ಲಲಿತ ಸಹಸ್ರ ನಾಮ, ಶ್ರೀಮತಿ ಕಲಾವತಿ ಮಧುಸೂಧನ್, ಕುಸುಮ ಎನ್.ಕೆ. ಇವರಿಂದ ವೀಣಾವಾದನ, ಭಕ್ತಿಗೀತೆ, ಹೆಚ್. ಜಿ. ಗಂಗಾಧರ ತಂಡದಿಂದ ಸುಗಮ ಸಂಗೀತ, ಶ್ರೀಮತಿ ಸಾವಿತ್ರಮ್ಮ ತಂಡ ಜಾನಪದ ನೃತ್ಯ, ಯಶೋಧ ತಂಡ ಸೋಬಾನೆ ಪದ, ವಿರುಪಾಕ್ಷ ತಂಡ ರಂಗಗೀತೆ, ಗ್ಯಾರಂಟಿ ರಾಮಣ್ಣ ತಂಡ ಸಂಕೋಲೆ ಸಾಮಾಜಿಕ ನಾಟಕ, ದುದ್ದ ಯೋಗೇಂದ್ರ, ದೊಡ್ಡಳ್ಳಿ ರಮೇಶ, ವಿಜಯ ಕುಮಾರ ರವರಿಂದ ತತ್ವಪದ, ಜನಪದ ಗಾಯನ ಮತ್ತು ಮೂಡಲಪಾಯ ಯಕ್ಷಗಾನ ಭೀಮಾರ್ಜುನ ಕಾಳಗ ರಚನೆ ಡಾ.ಚಂದ್ರು ಕಾಳೇನಹಳ್ಳಿ, ನಿರ್ದೇಶನ ಸಿ. ರಾಣಿ ಭಾಗವಹಿಸುವ ಕಲಾವಿದರು ಸ.ಹಿ.ಪ್ರಾ.ಶಾಲೆ, ಕುದುರು ಗುಂಡಿ.