ಬೀದರ – ಪ್ರತಿದಿನ ಮನೆ ಮನೆಗೆ ತೆರಳಿ ಎಲ್ಲರ ಪ್ರೀತಿ ಗಳಿಸಿದ್ದ ಗೂಳಿ ಆಕಳು ಅನಾರೋಗ್ಯದಿಂದ ನರಳಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದಲ್ಲಿ ನಡೆದಿದೆ.
ಈ ಗೂಳಿ ಆಕಳ ಅನಾರೋಗ್ಯದ ಬಗ್ಗೆ ಹಲವು ಬಾರಿ ತಿಳಿಸಿದರೂ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಪಶು ಆಸ್ಪತ್ರೆ ಪಕ್ಕದಲ್ಲೇ ನರಳಾಡುತ್ತಿರುವ ಮೂಕ ಪ್ರಾಣಿ. ಹಸುವಿನ ಆರೋಗ್ಯದಲ್ಲಿ ಏರುಪೇರು ಕಂಡರೂ ವೈದ್ಯರು ಸ್ಥಳಕ್ಕೆ ಬಂದಿಲ್ಲ. ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು ಮೂಕ ಪ್ರಾಣಿಯ ಜೀವದ ಬಗ್ಗೆ ಪಶುವೈದ್ಯರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು
ಗೂಳಿ ಆಕಳಿಗೆ ಏನಾದರೂ ಆದರೆ ಪಶುವೈದ್ಯರೇ ಹೊಣೆ ಎಂದು ಎಚ್ಚರಿಕೆ ಕೂಡ ನೀಡಿದ್ದು, ತಕ್ಷಣ ಸೂಕ್ತ ಚಿಕಿತ್ಸೆ ನೀಡುವಂತೆ ಗ್ರಾಮಸ್ಥರ ಆಗ್ರಹ ಮಾಡಿದ್ದಾರೆ
ವರದಿ : ನಂದಕುಮಾರ ಕರಂಜೆ, ಬೀದರ