ಗೃಹಲಕ್ಷ್ಮಿ ಹಣ ತೆಗೆದುಕೊಳ್ಳುವ ಕುಟುಂಬದ ಪ್ರಥಮ ಮಹಿಳೆಗೆ ಹೊಸ ಸಿಮ್ ಖರೀದಿಸಬೇಕು ಮತ್ತು ಅದನ್ನ ಆಧಾರ್ ಕಾರ್ಡಿಗೆ ಲಿಂಕ್ ಮಾಡಿಸಬೇಕು ಹಾಗೂ ಅದನ್ನ ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಮಾಡಿಸಿದಾಗ ಮಾತ್ರ ಗೃಹಲಕ್ಷ್ಮಿ ಹಣ ಬರುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಇದರ ಬಗ್ಗೆ ಸರ್ಕಾರದ ಸುತ್ತೋಲೆ ಮಾರ್ಗಸೂಚಿ ಆದೇಶಗಳಿದ್ದರೆ ತಿಳಿಸಬೇಕು. ಇದರಿಂದ ಬಹಳಷ್ಟು ತೊಂದರೆ ಆಗುತ್ತಿದೆ.
ಗ್ರಾಮೀಣ ಪ್ರದೇಶದ ಮಹಿಳೆಯರು 50 ರಿಂದ 70-80 ವಯಸ್ಸಿನ ಮಹಿಳೆಯರ ಹೆಸರಿನಲ್ಲಿ ಹೊಸ ಖರೀದಿಸುವುದು ಹೇಗೆ ಅದಕ್ಕೆ ಪ್ರತಿ ತಿಂಗಳು 400 ರೂಪಾಯಿ ರಿಚಾರ್ಜ್ ಮಾಡಿಸುವವರು ಯಾರು. ತಾವು ನೀಡುವ 2000 ಗೆ ಮಹಿಳೆಯರಿಗೆ ಇಷ್ಟೊಂದು ಕಂಡಿಶನ್ ಹಾಕುವುದು ಅಗತ್ಯವೇ. ಗ್ರಾಮೀಣ ಮಹಿಳೆಯರಿಗೆ ಮೊಬೈಲ್ ಬಗ್ಗೆ ಹೆಚ್ಚಿಗೆ ಅರಿವೇ ಇರುವುದಿಲ್ಲ ಅಂತಹದರಲ್ಲಿ ಅವರ ಹೆಸರಿನಲ್ಲಿ ಹೊಸ ಸಿಮ್ ಖರೀದಿಸುವುದು ಹೇಗೆ ಸಾಧ್ಯ. ಇಂತಹ ಅವೈಜ್ಞಾನಿಕ ಆದೇಶವಿದ್ದರೆ ಅದನ್ನ ಹಿಂದಕ್ಕೆ ಪಡೆಯಬೇಕು. ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ. ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ ನೀಡಿ ಈಗ ಹಲವಾರು ರೀತಿಯ ಕಂಡಿಷನ್ ಹಾಕುತ್ತಿರುವುದರಿಂದ ಗ್ರಾಮೀಣ ಮಟ್ಟದಲ್ಲಿ ಸರಕಾರಕ್ಕೆ ಬಹಳ ಕೆಟ್ಟ ಹೆಸರು ಕೇಳಿ ಬರುತ್ತಿದೆ. ಇಂತಹ ಆ ವೈಜ್ಞಾನಿಕ ಆದೇಶಗಳನ್ನು ಹೊರಡಿಸುವ ಬಹಳ ಬುದ್ಧಿವಂತ ಅಧಿಕಾರಿಗಳು ಇದ್ದರೆ ಇದನ್ನು ಸರಿಪಡಿಸಬೇಕು.
ಈ ವಿಷಯವನ್ನ ಮುಖ್ಯಮಂತ್ರಿಗಳ ಗಮನಕ್ಕೆ ತೆಗೆದುಕೊಂಡು ಬನ್ನಿ. ಪರಿಶೀಲನೆ ನೆಪದಲ್ಲಿ ಇಂತಹ ಅವೈಜ್ಞಾನಿಕ ಮಾರ್ಗಸೂಚಿ ಆದೇಶಗಳು ಇದ್ದರೆ ಸರಿಪಡಿಸಿಕೊಳ್ಳಿ. ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಿರುವ ಮಾಹಿತಿ ನಿಜವೋ ಅಥವಾ ಸುಳ್ಳು ಎಂಬುದನ್ನು ಮೊದಲು ಖಾತ್ರಿ ಮಾಡಿಕೊಳ್ಳಿ. ಸಂಬಂಧಿಸಿದ ಅಧಿಕಾರಿಗಳ ಮುಖಾಂತರ ಜಾಗೃತಿ ಮೂಡಿಸಿ. ಇಲ್ಲದಿದ್ದರೆ ಇಂತಹ ಅವೈಜ್ಞಾನಿಕ ಆದೇಶಗಳಿಂದ ಸರ್ಕಾರಕ್ಕೆ ನೂರಕ್ಕೆ ನೂರರಷ್ಟು ಕೆಟ್ಟ ಹೆಸರು ಬರುತ್ತದೆ.
ಗುರುನಾಥ ಗಂಗಣ್ಣವರ, ಸಾಮಾಜಿಕ ಹೋರಾಟಗಾರ