ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ದ್ಯಾಮವ್ವದೇವಿ ದೇವರ ನೂತನ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಭೂಮಿ (ಪಾಯಾ) ಪೂಜಾ ಕಾರ್ಯಕ್ರಮ ನ.೧೯ರಂದು ನಡೆಯಿತು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ ನೂತನ ದೇವಾಲಯ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಭೂಮಿ(ಪಾಯ) ಪೂಜೆ ನೆರವೇರಿಸಿ ಮಾತನಾಡಿ, ದ್ಯಾಮವ್ವದೇವಿ ಮಹಾನ್ ಶಕ್ತಿದೇವತೆಯಾಗಿದ್ದಾಳೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಅಧಿದೇವತೆಯಾಗಿದ್ದಾಳೆ. ಸ್ಥಳೀಯರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಾಯ, ಸಹಕಾರ ಮೆಚ್ಚುವಂತದ್ದಾಗಿದೆ ಎಂದರು.
ಸ್ಥಳೀಯ ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹನುಮಂತ ವಡೇರ, ಮುತ್ತೆಪ್ಪ ವಡೇರ ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು.
ಸುಮಂಗಲೆಯರಿAದ ಆರತಿ ಕಾರ್ಯಕ್ರಮ ನಡೆದ ಬಳಿಕ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.
ಬಸವಂತ ಕೋಣಿ,ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಚಂದರಗಿ, ಶಿವಾಜಿ ನೀಲಣ್ಣವರ, ಲಕ್ಷö್ಮಣ ಸೋಮಗೌಡ್ರ, ಬಸವರಾಜ ಪಣದಿ, ಶ್ರೀಶೈಲ ಗಾಣಗಿ, ಶಿವರಾಜ ಪತ್ತಾರ, ಶ್ರೀಧರ ದೇಯಣ್ಣವರ, ಅಡಿವೆಪ್ಪ ಮುರಗೋಡ, ಲಕ್ಕಪ್ಪ ಚಂದರಗಿ, ಗುಳಪ್ಪ ಪಣದಿ, ರಾಮಣ್ಣ ಬಳಿಗಾರ, ಮಾಂತು ಮಾಳೇದ, ಅರ್ಜುನ ದೇಯಣ್ಣವರ, ಅಶೋಕ ಕೋಣಿ, ಮಲ್ಲಿಕಾರ್ಜುನ ಮೆಳೆಣ್ಣವರ, ರಾಮಣ್ಣ ಮುಧೋಳ, ವಿಠ್ಠಲ ಕೋಣಿ, ರಾಮಣ್ಣ ನೀಲಣ್ಣವರ, ಈರಣ್ಣ ಬಳಿಗಾರ, ಸುಭಾಷ ಕರೆಣ್ಣವರ, ಗುರಪ್ಪ ಮಾಕಾಳಿ, ಸ್ಥಳೀಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಗಣ್ಯರು, ಶ್ರೀದೇವಿ ಅರ್ಚಕರು, ಭಕ್ತರು, ಮಹಿಳೆಯರು, ಮತ್ತೀತರರು ಇದ್ದರು.