Homeಕವನವಿಶ್ವ ಪರಿಸರ ದಿನ ನಿಮಿತ್ತ ಒಂದು ಕವನ

ವಿಶ್ವ ಪರಿಸರ ದಿನ ನಿಮಿತ್ತ ಒಂದು ಕವನ

Published on

ಮರದ ಮೊರೆ

 

ಎನ್ನ ಆರ್ತ ಮೊರೆಯನು ಆಲಿಸಿರಣ್ಣ
ಎನ್ನ ಕರುಳ ಕರೆಯನು ಕೇಳಿರಣ್ಣ
ನಾನೂ ಒಂದು ಜೀವಿಯು ಅಣ್ಣ
ನನಗೂ ಬದುಕುವ ಹಕ್ಕುಇದೆಯಣ್ಣ

ಭೂದೇವಿಯೆ ನನ್ನ ತಾಯಿಯಣ್ಣ
ಮಳೆರಾಜನೆ ನನ್ನ ತಂದೆಯಣ್ಣ
ಪವನ ಸೂರ್ಯರೆನ್ನ ಸ್ನೇಹಿಗಳಣ್ಣ
ಇವರ ಕೃಪೆಯಿಂದ ಬದುಕಿಹೆನಣ್ಣ

ನಿಮ್ಮಿಂದ ಏನನು ಬಯಸೆನು ಅಣ್ಣ
ನಾನೆಂಥ ಉಪಕಾರಿ ತಿಳಿದು ನೋಡಿರಣ್ಣ
ಕಡಿಯಬೇಡಿರಿ ದಯಮಾಡಿ ಎನ್ನ
ಸೆರಗೊಡ್ಡಿ ನಾ ನಿಮ್ಮ ಬೇಡುವೆನಣ್ಣ

ಬಿಸಿಲಲಿ ನಿಮಗೆ ನೆರಳನು ಮಾಡುವೆ
ದೇವರ ಪೂಜೆಗೆ ಹೂಗಳ ನೀಡುವೆ
ತಿನ್ನಲು ರುಚಿಕರ ಹಣ್ಢನು ಕೊಡುವೆ
ಅಡಿಗೆ ಮಾಡಲು ಉರುವಲುವಾಗುವೆ

ಬೆಳೆಗಳಿಗೆ ನಾ ಮಳೆಯನು ತರುವೆ
ಉಸಿರಾಟಕೆ ಪ್ರಾಣವಾಯುವ ಕೊಡುವೆ
ಮರಮುಟ್ಟು ಔಷಧ ಗೊಬ್ಬರ
ಬಹು ಉಪಯೋಗಿ ಕಾಣಿರಣ್ಣ

ಭೂಮಿತಾಯಿಗೆ ಭೂಷಣ ನಾನು
ಪಕ್ಷಿ ಸಂಕುಲಕೆ ಆಶ್ರಯ ನಾನು
ದನಕರುಗಳಿಗೆ ಗ್ರಾಸವು ನಾನು
ಮಾನವ ಬದುಕಿಗೆ ಆಸರೆ ನಾನು

ಕಡಿಯಬೇಡಿರಿ ದಯಮಾಡಿ ಎನ್ನ
ಸೆರಗೊಡ್ಡಿ ನಾ ನಿಮ್ಮ ಬೇಡುವೆನಣ್ಣ

ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

Latest articles

More like this