Homeಲೇಖನಸಾಹಿತಿ ಸುಧಾ ಪಾಟೀಲ ಅವರಿಗೆ ಬಸವ ಸೇವಾ ಪ್ರಶಸ್ತಿ

ಸಾಹಿತಿ ಸುಧಾ ಪಾಟೀಲ ಅವರಿಗೆ ಬಸವ ಸೇವಾ ಪ್ರಶಸ್ತಿ

Published on

ಉತ್ತರ ಕರ್ನಾಟಕದ ದೇಸಿ ಪ್ರಜ್ಞೆಯನ್ನು ಮೇಳೈಸಿಕೊಂಡು ಗದಗ ಜಿಲ್ಲೆಯ ಮಲ್ಲಸಮುದ್ರದ ಗೌಡರ ಮಗಳು ಸುಧಾ ಪಾಟೀಲ ಮೆಲ್ಲ ಮೆಲ್ಲನೆ ಬೆಳೆದು ನಿಂತ ಅಪ್ಪಟ ಸೃಜನಶೀಲ ಪ್ರತಿಭೆ. ತಂದೆ ಲಿಂಗೈಕ್ಯ ಭೀಮನಗೌಡರು ತಾಯಿ ಅಕ್ಕ ಮಹಾದೇವಿ ಅತ್ಯಂತ ಸುಸಂಸ್ಕೃತ ಮನೆತನದ ಹುಡುಗಿ. ಇವರು ಗದಗ ಜಿಲ್ಲೆಯ ಮಲ್ಲಸಮುದ್ರದ ಸಹಕಾರಿ ಧುರೀಣರೆಂದೇ ಹೆಸರಾದ ಗೌಡರ ಮನೆತನದಲ್ಲಿ 17 -5-1966 ರಂದು ಜನಿಸಿದರು.

ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ಗದಗ, ಬಿಜಾಪುರ, ಧಾರವಾಡ, ಬೆಳಗಾವಿ, ಕಲ್ಬುರ್ಗಿ ಮತ್ತು ಬೆಂಗಳೂರಿನಲ್ಲಿ ಪೂರೈಸಿ, ಅಲ್ಲಿಯೇ ಗೃಹ ವಿಜ್ಞಾನ ಕಾಲೇಜಿನಲ್ಲಿ ಸೈಕಾಲಜಿ, ಸೋಶಿಯಲ್ ವೆಲ್ಫೇರ್ ಮತ್ತು ಹ್ಯೂಮನ್ ಡೆವಲಪ್ಮೆಂಟ್ ಗಳ ವಿಷಯಗಳನ್ನು ಆಯ್ದುಕೊಂಡು ಡಿಗ್ರಿ ಮುಗಿಸಿದರು.

ಕನ್ನಡ ಸಾರಸ್ವತ ಲೋಕದಲ್ಲಿ ಕಥೆ ಕವನ ವ್ಯಕ್ತಿ ಪರಿಚಯ ಅಂಕಣ ಶರಣ ಚರಿತ್ರೆ ವಿಮರ್ಶೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡು ಈಗ ಬೆಳಗಾವಿಯ ಅನೇಕ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಸಕ್ರಿಯವಾಗಿ ಕನ್ನಡ ನಾಡು ನುಡಿ ಸಂಸ್ಕೃತಿ ವಚನ ಚಳವಳಿಗಾಗಿ ಶ್ರಮಿಸುತ್ತಿದ್ದಾರೆ. ಇವರು ಬಸವ ತಿಳಿವಳಿಕೆ ಸಂಶೋಧನಾ ಕೇಂದ್ರದ ವಿಶ್ವಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಚನ ಸಾಹಿತ್ಯದ ಗೀಳು ಮತ್ತು ಅಧ್ಯಯನ
—————————————————
ಸುಧಾ ಪಾಟೀಲ ಅವರಿಗೆ ಬಾಲ್ಯದಲ್ಲಿಯೇ ಜಚನಿ ಅವರಿಂದ ಲಿಂಗ ದೀಕ್ಷೆಯಾಗಿತ್ತು. ತಾಯಿ ಅಕ್ಕಮಹಾದೇವಿ ಆಧುನಿಕ ಕಾಲದ ಶರಣೆ. ನಿತ್ಯ ವಚನ ಸಾಹಿತ್ಯ ಚಿಂತನೆ ಮಗಳಾದ ಸುಧಾ ಅವರ ಮೇಲೆ ದಟ್ಟವಾಗಿ ಬೀರಿದೆ. ಶರಣರ ವಚನಗಳ ಅರ್ಥಗಳ ಭೇದಿಸಲು ಕಷ್ಟ. ಇಂತಹ ವಚನ ಸಾಹಿತ್ಯದ ಕೃಷಿಯಲ್ಲಿ ತಮ್ಮ ಸ್ವರಚಿತ ವಚನಗಳು, ಶರಣರ ಜೀವನ ಚರಿತ್ರೆ ವಚನ ವಿಶ್ಲೇಷಣೆಗಳನ್ನು ಮಾಡಿ ಎನಿಸಿಕೊಂಡಿದ್ದಾರೆ. ರೂಪಕ, ಹೋಲಿಕೆ ಅಲಂಕಾರಗಳು. ಇಂತಹ ಅಪೂರ್ವ ಪ್ರಯೋಗವನ್ನು ತಮ್ಮ ಕವನ ಸಂಕಲನಗಳಲ್ಲಿ ಸಮರ್ಥವಾಗಿ ಪ್ರಯೋಗ ಮಾಡಿದ್ದಾರೆ.

ಸುಧಾ ಪಾಟೀಲ ಒಬ್ಬ ಅತ್ಯಂತ ಸೂಕ್ಷ್ಮ ಸಂವೇದನೆಯ ಕವಯಿತ್ರಿ ಲೇಖಕಿ ಇವರು ಸಾಮಾಜಿಕ ಕಳಕಳಿಯುಳ್ಳ ಚಿಂತಕಿ. ಕಾವ್ಯ , ಕೇಂದ್ರೀಕೃತ ಕಲ್ಪನಾತ್ಮಕತೆಯನ್ನು ಹುಟ್ಟುಹಾಕುವ ಸಾಹಿತ್ಯಅರ್ಥ , ಧ್ವನಿ ಮತ್ತು ಲಯಕ್ಕೆ ಅನುಗುಣವಾಗಿ ಆಯ್ಕೆಮಾಡಿದ ಮತ್ತು ಜೋಡಿಸಲಾದ ಭಾಷೆಯ ಮೂಲಕ ಅನುಭವದ ಅರಿವು ಅಥವಾ ನಿರ್ದಿಷ್ಟ ಭಾವನಾತ್ಮಕ ಪ್ರತಿಕ್ರಿಯೆ . ಈಗಾಗಲೇ ಆರು ಕವನ ಸಂಕಲನಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಇವರು ತಮ್ಮ ಕವನ ಕಥೆಗಳಲ್ಲಿ ತಮ್ಮ ಸುತ್ತಲಿನ ಅನೇಕ ಸಿಹಿ ಕಹಿ ಘಟನೆಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕವನ ಕಾವ್ಯ ಕಥೆ ಹೀಗೆ ಎಲ್ಲ ಶಿಷ್ಟ ಪ್ರಕಾರದ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೆರೆದಿದ್ದಾರೆ. ಇವರ ಬರಹಗಳು ಸ್ವಂತಿಕೆಯ ಜೊತೆಗೆ ಪ್ರಭುದ್ಧ ಅಭಿವ್ಯಕ್ತಿ.

ಇವರ ಕವನ ಸಂಕಲದಲ್ಲಿ ಸೃಷ್ಟಿಯ ಕಾಳಜಿ ಪರಿಸರ ಪ್ರಜ್ಞೆ ಮಾನವ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಯತ್ನ, ಸಾಮಾಜಿಕ ಧಾರ್ಮಿಕ ಸಾಮರಸ್ಯತೆಗೆ ಒಟ್ಟು ಕೊಟ್ಟಿದ್ದಾರೆ. ಜೊತೆಗೆ ಸ್ನೇಹ ಪ್ರೀತಿಯ ಇವರ ಕಾವ್ಯದ ಮೂಲ ದೃವ್ಯವೆಂದು ಹೇಳಬಹುದು.
ಇವರ ಇನ್ನೂ ಹತ್ತಾರು ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಗೊಳ್ಳಲಿ

ಸುಧಾ ಪಾಟೀಲ ಅವರ ಪ್ರಕಟಿತ ಕೃತಿಗಳು
—————————————————

1..ಡಾ. ಜ. ಚ. ನಿ (ಸಂಗ್ರಹ )
ಬದುಕು ಬರಹ

ಸಂಪಾದನೆ

1.. ವಚನಗಳಲ್ಲಿ ಗುರು ಲಿಂಗಜಂಗಮ
2..ಅನುಭವ ಸಿರಿ
3.. ಕನ್ನಡದ ಕಬ್ಬಿಗರು
4.. ದಾಸೋಹಮ
5.. ಸಂಯುಕ್ತ
6..ತಾಯಿಯಿದ್ದರೆ ತವರೆಚ್ಚು
7.. ದಿನಕ್ಕೊಂದು ಶರಣ ಮಾಲಿಕೆ – 1
8..ದಿನಕ್ಕೊಂದು ಶರಣ ಮಾಲಿಕೆ – 2
9..ದಿನಕ್ಕೊಂದು ಶರಣ ಮಾಲಿಕೆ – 3
10..ದಿನಕ್ಕೊಂದು ಶರಣ ಮಾಲಿಕೆ – 4
11 ದಿನಕ್ಕೊಂದು ಶರಣ ಮಾಲಿಕೆ – 5

ಕವನ ಸಂಕಲನ

1.. ಹೆಜ್ಜೆ ಗುರುತು
2.. ಹೃದಯದ ಮಾತು
3..ಚುಕ್ಕಿ ಹೇಳಿದ ಕಥೆ
4..ಬೊಗಸೆಯೊಳಗಿನ ಪ್ರೀತಿ
5..ವಚನ ಸುಧೆ
6…ಮುಗಿಲಿಗೆ ಏಣಿ
7 ನಕ್ಕು ಬಿಡಲಿ ಭೂಮಿ

ಗದ್ಯ ಕೃತಿಗಳು

1..ಶರಣರ ನೆನೆದರ ಸರಗಿಯ ಇಟ್ಟಂಗ
2..ವಚನ ದಿವ್ಯ
3..ತೊಟ್ಟಿಲು ತೂಗುವ ಕೈ
4..ತವರೂರ ದಾರಿಯಲಿ

ಸುಧಾ ಪಾಟೀಲ ಅವರು ಕಾರ್ಯಕಾರಿ ಸದಸ್ಯೆಯಾಗಿ ಮತ್ತು ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಸಂಘ – ಸಂಸ್ಥೆಗಳು

1..ಬಸವ ತಿಳಿವಳಿಕೆ ಮತ್ತು ಅಧ್ಯಯನ ಕೇಂದ್ರ.. ಪುಣೆ
2.. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ
3.. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
4.. ಲಿಂಗಾಯತ ಮಹಿಳಾ ಸಮಾಜ
5.. ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನ
6.. ಅಖಿಲ ಭಾರತ ವೀರಶೈವ ಮಹಾಸಭಾ
7.. ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
8..ಕಾಯಕಕಟ್ಟೆ (ಲಿಂಗಾಯತ ಮಹಿಳಾ ಸ್ವಉದ್ಯೋಗ ಸಂಘ )
9.. ವಿಸ್ತಾರ ಫೌಂಡೇಶನ್ (ಸಾಮಾಜಿಕ ಕಾರ್ಯಕ್ರಮ ಬೆಳಗಾವಿ ಶಾಖೆ )
10.. ಮೈತ್ರಿ ಸಂಘ
11.. ಸಂಸ್ಕೃತಿ ಮಹಿಳಾ ಮಂಡಲ
12.. ಬೆಳಗಾವಿ ಲೇಡೀಸ್ ಮೀಟ್
13..ಕರ್ನಾಟಕ ಲೇಖಕಿಯರ ಸಂಘ
14..ರೋಷ್ಟ್ರಂ ಡೈರೀಸ್

ಸುಧಾ ಪಾಟೀಲರಿಗೆ ದೊರೆತ ಪ್ರಶಸ್ತಿಗಳು

1.. ರಾಜ್ಯೋತ್ಸವ ಪ್ರಶಸ್ತಿ..
ಚೇತನಾ ಫೌಂಡೇಶನ್ ಅವರ ವತಿಯಿಂದ…                      2 ಅನುಪಮ ಸೇವಾ ರತ್ನ ಪ್ರಶಸ್ತಿ…ಪೃಥ್ವಿ ಫೌಂಡೇಶನ್ ವತಿಯಿಂದ…                                                                3.. ಮಿನರ್ವ ಅವಾರ್ಡ್ ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ (ಯುರೋಪ್ ಖಂಡದ ರೋಮ್ ನಲ್ಲಿ )  ಅಂತರಾಷ್ಟೀಯ ಸಮ್ಮೇಳನದಲ್ಲಿ ಕವನವಾಚನ    4..ದತ್ತಿನಿಧಿ ಪ್ರಶಸ್ತಿ ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ ( ಬೆಳಗಾವಿ )                                               5… ಬಸವ ಪ್ರಶಸ್ತಿ –  ಅಖಿಲ ಕರ್ನಾಟಕ ಬಸವ ಬಳಗ ಹುಬ್ಬಳ್ಳಿ       6.. ಹೆಜ್ಜೆ ಗುರುತು – ಕವನ ಸಂಕಲನ ಪುಸ್ತಕಕ್ಕೆ ದತ್ತಿ ಪ್ರಶಸ್ತಿ – ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ ( ಶಿವಮೊಗ್ಗ )      7..ಹೆಜ್ಜೆ ಗುರುತು -ಕವನ ಸಂಕಲನ ಪುಸ್ತಕಕ್ಕೆ ಕವಿ ಡಾ. ಡಿ. ಎಸ್. ಕರ್ಕಿ ಪ್ರಶಸ್ತಿ -ಬೆಳಗಾವಿ     8..ಅಪ್ರತಿಮ ಮಹಿಳೆ – ಕೃತಿಗೆ ಆಸ್ಸಾಂ ನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದಲ್ಲಿ ದತ್ತಿ ಪ್ರಶಸ್ತಿ   9 ಸೌತ್ ಇಂಡಿಯಾ ವಿಮೆನ್ ಅಚೀವರ್ಸ್ ಅವಾರ್ಡ್ ಚೆನ್ನೈ 2026

ಸುಧಾ ಪಾಟೀಲ್ ಅವರ ದತ್ತಿದಾನ

1.. ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ… ಪುಣೆ
ಲಿಂ.. ಶ್ರೀ ಬಿ. ಎಂ. ಪಾಟೀಲ್ ಮತ್ತು ಲಿಂ.. ಶ್ರೀಮತಿ ಅಕ್ಕಮಹಾದೇವಿ ಪಾಟೀಲ್
( ತಂದೆ -ತಾಯಿಯ ಹೆಸರಿನಲ್ಲಿ )ದತ್ತಿಉಪನ್ಯಾಸದ ಸಲುವಾಗಿ ದತ್ತಿನಿಧಿ

2.. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಲ್ಲಿ
ಅತ್ಯುತ್ತಮ ಕವಯಿತ್ರಿ ಪ್ರಶಸ್ತಿ..
ಲಿಂ.. ರಾಚಮ್ಮ ವೀರನಗೌಡ ಪಾಟೀಲ್ ಗಂದಿಗವಾಡ ( ಅತ್ತೆಯವರು ) ಇವರ ಹೆಸರಿನಲ್ಲಿ ದತ್ತಿನಿಧಿ

3… ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ
ಅತ್ಯುತ್ತಮ ಲೇಖಕಿ ಪ್ರಶಸ್ತಿ
ಲಿಂ. ಬಿ. ಎಂ. ಪಾಟೀಲ್ ( ಅವರ ತಂದೆಯವರು )ಅವರ ಹೆಸರಿನಲ್ಲಿ ದತ್ತಿನಿಧಿ

ಸುಧಾ ಪಾಟೀಲ ಒಬ್ಬ ಮೃದು ಭಾಷಿಕಳು ಪ್ರಭುದ್ಧ ಓದುಗಳು ವಿಮರ್ಶಕಿ ಚಿಂತಕಿ ಲೇಖಕಿ ಸಂಘಟಕಿ ತಮ್ಮ ಬರವಣಿಗೆಯಲ್ಲಿ ಹೊಸ ಪ್ರಯೋಗದೊಂದಿಗೆ ಹೊಸತನದ ಹುಡುಕಾಟವನ್ನು ನಡೆಸಿದ್ದಾರೆ. ತಮ್ಮ ಸ್ನೇಹಪರ ಮಾತೃ ಹೃದಯದ ಮಾನವ ಪ್ರೀತಿ ಕಾಳಜಿ ಅಪಾರವಾದವು. ಇವರ ಸಾಹಿತಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ಗುರುತಿಸಿ ಇವರಿಗೆ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ಬಸವ ಸೇವಾ ಪ್ರಶಸ್ತಿಯನ್ನು ವಿಜಯಪುರದಲ್ಲಿ ದಿನಾಂಕ 25 ಏಪ್ರಿಲ್ ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ಸಭಾಭವನದಲ್ಲಿ ಡಾ ಅಶೋಕ ಆಲೂರ ಕುಲಪತಿಗಳು ಕೊಡಗು ವಿಶ್ವ ವಿದ್ಯಾಲಯ ಮತ್ತು ಡಾ ಅಜಿತ್ ರಾಂಪುರೆ ಅಂತರಾಷ್ಟ್ರೀಯ ವೈದ್ಯರು ಕೆನಡಾ ಇವರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು.

ಇವರು ಇನ್ನೂ ನೂರಾರು ಕಾಲ ಬಾಳಿ ಬದುಕಿ ಕನ್ನಡ ನಾಡು ನುಡಿ ಶರಣರ ಆಶಯಗಳನ್ನು ಜನರಿಗೆ ಪ್ರಸಾರ ಮತ್ತು ಪ್ರಚಾರ ಮಾಡಲಿ ಎಂದು ಹಾರೈಸುತ್ತೇನೆ.
_______________________

ಡಾ ಶಶಿಕಾಂತ ಪಟ್ಟಣ
ಸಾಹಿತಿಗಳು ವಿಮರ್ಶಕರು
ಅಧ್ಯಕ್ಷರು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ
ರಾಮದುರ್ಗ ಪುಣೆ

Latest articles

More like this