ಪ್ರೊ. ಕೆ. ತಾರನಾಥ ದಂಪತಿಗಳ ಪುಣ್ಯಸ್ಮರಣೆ
ಹುನಗುಂದ-.ಕಾಯಕದ ನಿಜವಾದ ಸಾರ ಅರಿತು ಕಾಯಕದಲ್ಲಿ ನಿರತರಾಗಬೇಕು. ಶರಣರ ಮಾರ್ಗದಲ್ಲಿ ನಡೆಯುವುದರಿಂದ ಮುಕ್ತಿ ಪಡೆಯಲು ಸಾಧ್ಯ. ೧೨ ನೇ ಶತಮಾನದ ಬಸವಾದಿ ಶರಣರು ನಡೆಸಿದ ಕಾಯಕ ಜೀವನದ ನಡೆ ನುಡಿಗಳು ಇಂದಿಗೂ ಪ್ರಸ್ತುತ. ಆದರ್ಶ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದ ಲಿಂ.ಪ್ರೊ. ಕೆ ತಾರಾನಾಥ ದಂಪತಿಗಳು ಸದಾ ಸ್ಮರಣೆಗೆ ಪಾತ್ರರು. ಎಂದು ಇಳಕಲ್ಲ ಗುರು ಮಹಾಂತ ಶ್ರೀ ಹೇಳಿದರು.
ಪಟ್ಟಣದ ಪುರಸಭೆಮಂಗಲ ಮಂಟಪದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು , ಕದಳಿ ವೇದಿಕೆ, ವಚನ ಸಾಹಿತ್ಯ ಪರಿಷತ್ತು, ಜಿಲ್ಲಾ ರ‍್ನಾಟಕ ಲೇಖಕಿಯ ಸಂಘ, ಸಹಯೋಗದಲ್ಲಿ ಲಿ. ಪ್ರೊ. ಕೆ, ತಾರಾನಾಥ, ಲಿಂ, ಉಮಾದೇವಿ ತಾರಾನಾಥ ಶರಣ ದಂಪತಿಗಳ ೧೧ ನೇ ಪುಣ್ಯ ಸ್ಮರಣೆ, ದತ್ತಿ ಉಪನ್ಯಾಸ, ೩೯ ನೇ ಮನೆ ಮನೆಗೆ ವಚನ ಸೌರಭ, ವಿಶ್ವ ಮಹಿಳಾ ದಿನಾಚರಣೆಯ ಮಹಿಳಾ ಕವಿಗೋಷ್ಠಿಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಜನ್ಮ ಕೊಟ್ಟ ತಂದೆ ತಾಯಿಗಳ ಪುಣ್ಯ ಸ್ಮರಣೆ ಮಾಡುವುದು ಸಹಜ. ಸೊಸೆಯಂದಿರು ತಮ್ಮ ಅತ್ತೆ ಮಾವಂದಿರ ಸ್ಮರಣೆ ಮಾಡಿಕೊಳ್ಳುವುದೆಂದರೆ,ಅತ್ತೆ ಮಾವಂದಿರು ಅತ್ತೆ ಮಾವಂದಿರಂತಿರದೇ ತಂದೆತಾಯಿಗಳಂತೆ ಅಂತಃಕರುಣೆಯನ್ನು ತೋರಿಸಿದ್ದರ ದ್ಯೋತಕ ಎಂದು ಹೇಳಿದರು.
ಲಿಂ. ಪ್ರೊ. ಕೆ ತಾರಾನಾಥರು ಪಂಚ ಭಾಷೆಯ ಪಾಂಡಿತ್ಯ ಹೊಂದಿದವರಾಗಿದ್ದರು. ಮತ್ತು ಶಿಷ್ಯರನ್ನು ಎತ್ತರಕ್ಕೆ ಬೆಳೆಸುವಲ್ಲಿ ಸದಾ ಮರ‍್ಗರ‍್ಶನ ನೀಡುತ್ತಾ ಬಂದರು. ಪರೋಪಕಾರ ಗುಣ, ಸನ್ನಡತೆ, ಸಮಯ ಪಾಲನೆ , ಶಿಸ್ತು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದರು. ಸಾಹಿತ್ಯ ಕಲೆ ಸಂಗೀತಲ್ಲಿಯೂ ಅವರಿಗೆ ಅಪಾರ ಒಲವಿತ್ತು.ಅವರ ಚುಟುಕಗಳನ್ನು ಮೆಚ್ಚಿ ದಿನಕರ ದೇಸಾಯಿ ಅವರು ಪ್ರಶಂಸಿದ್ದರು. ವಿದ್ವತ್ತಿನಿಂದಾಗಿ ಹೆಸರಾದರು. ಸಹಾಯ ಕೇಳಿ ಬಂದವರಿಗೆ ನಿರಂತರ ಸ್ಪಂದಿಸಿ ಎಲ್ಲರೊಂದಿಗೆ ಒಂದಾಗಿ ಇರುತ್ತಿದ್ದರು. ಎಂದು ದತ್ತಿ ಉಪನ್ಯಾಸದಲ್ಲಿ ಡಾ.ಎಂ ಬಿ. ಒಂಟಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಪಾಚರ‍್ಯ ಎಸ್ ಕೆ ಕುಲಕರ‍್ಣಿ ಅವರು ತಾರಾನಾಥ ಅವರ ಸ್ನೇಹ, ಒಡನಾಟ ಮತ್ತು ಅವರ ಕಾರ‍್ಯ ಕ್ಷಮತೆಯ ಕುರಿತು ಮಾತನಾಡಿದರು.