ಹುನಗುಂದ: ಜನನಾಯಕ ಎಸ್. ಆರ್.ಕಾಶಪ್ಪನವರ ಜನ್ಮ ಅಮೃತ ಮಹೋತ್ಸವ ನಿಮಿತ್ತ ನಡೆದ ತಾಲೂಕು ಮಟ್ಟದ ಸ್ವರಚಿತ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಹಿರೇಸಿಂಗನಗುತ್ತಿಯ ಬಸವರಾಜ ಹೂಗಾರ (ಪ್ರಥಮ), ಇಳಕಲ್ಲದ ಮಹಾಂತೇಶ ವ್ಹಿ.ಅಂಗಡಿ ಮತ್ತು ಹುನಗುಂದದ ಶ್ರೀಶೈಲ ಹೊಸೂರ (ದ್ವಿತೀಯ), ಶರಣಪ್ಪ ಕೆ.ಹೂಲಗೇರಿ (ತೃತೀಯ), ಧನ್ನೂರಿನ ನಿಂಗಪ್ಪ ಕೆ. ಧನ್ನೂರ, ಇಳಕಲ್ಲದ ಕೆ.ಎಚ್. ಸೋಲಾಪುರ ಮತ್ತು ಹಡಗಲಿಯ ಮುತ್ತಣ್ಣ ಕಠಾಣಿ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ ಎಂದು ಸ್ಪರ್ಧೆಯ ಸಂಯೋಜಕ ಎಸ್ಕೆ ಕೊನೆಸಾಗರ ತಿಳಿಸಿದ್ದಾರೆ.
ಈ ಸ್ಪರ್ಧೆಗೆ ಬಂದ ಕವನಗಳ ಕವಿಗಳ ಕವಿಗೋಷ್ಠಿಯನ್ನು ಹುನಗುಂದದಲ್ಲಿ ಶೀಘ್ರದಲ್ಲಿ ನಡೆಸಲಾಗುವುದು. ಬಹುಮಾನಿತ ಕವನಗಳನ್ನು ಎಸ್ ಆರ್ ಕೆ ಸಂಸ್ಮರಣ ಗ್ರಂಥದಲ್ಲಿಯೂ ಪ್ರಕಟಿಸಲಾಗುವುದು. ಅಲ್ಲದೆ ಎಸ್ ಆರ್ ಕೆ ಅವರ ಮೊಮ್ಮಗಳು ಪ್ರಿಯಾಂಕಾ ಬಿರಜದಾರ ಎಲ್ಲ ಕವಿತೆಗಳನ್ನು ಸಂಕಲಿಸಿ ‘ಜನಾನುರಾಗಿ ಕಾಶಪ್ಪನವರ’ ಎಂಬ ಕವನ ಸಂಕಲನವನ್ನು ಹೊರತರಲಿದ್ದಾರೆ.