ಲಿಂಗಾಯತ ಧರ್ಮವು 12 ನೆ ಶತಮಾನದ ಬಸವಣ್ಣನವರು ಮತ್ತು ಶರಣರ ನೇತೃತ್ವದಲ್ಲಿ ಸ್ಥಾಪಿಸಿದ ವೈಚಾರಿಕ ವೈಜ್ಞಾನಿಕ ಹಿಂದುಯೇತರ ವೈದಿಕೇತರ
ಸ್ವತಂತ್ರ ಧರ್ಮವಾಗಿದೆ.
ಅಂದಿನ ಕಂದಾಚಾರ ಮೌಢ್ಯ ಜಾತಿ ವ್ಯವಸ್ಥೆ ಶೋಷಣೆ ಸುಲಿಗೆ, ಮೂರ್ತಿ ಪೂಜೆ, ಯಜ್ಞ ಹವನ ಹೋಮ ಇನ್ನಿತರ ಅನೇಕ ಸಮಸ್ಯೆಗಳಿಗೆ ಕೊನೆ ಹೇಳಲೆಂದೆ ಬಂಡಾಯ ರೂಪದಿಂದ ಉದಯಿಸಿದ ಧರ್ಮವೇ ಲಿಂಗಾಯತ ಧರ್ಮವು.
1) ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಭಕ್ತನಲ್ಲಿಯೇ ದೈವತ್ವ ಕಾಣುವ ಲಿಂಗ ಜಂಗಮ ಸಮಾಜದ ಕ್ಷೇಮ ಬಯಸುವ ಯಾವುದೇ ವ್ಯಕ್ತಿ ಲಿಂಗಾಯತ ನಾಗಬಹುದು.
2) ಲಿಂಗಾಯತ ಧರ್ಮವು ” ಹವನ ಹೋಮ ಯಜ್ಞ ಮೂರ್ತಿ ಪೂಜೆ ವೃತ,ಸತಿ ಪದ್ಧತಿ ಆಚರಣೆ ಪ್ರಾಣಿ ಬಲಿ ನದಿ ಮರ ಪೂಜೆ “ಮತ್ತಿತರ ಕಂದಾಚಾರ ಮೌಢ್ಯ ವಿರೋಧಿಸುತ್ತದೆ. ಶರಣರಿಗೆ ಭಕ್ತನಿದ್ದ ಸ್ಥಳವೆ ಪುಣ್ಯ ಕ್ಷೇತ್ರ. ಪುಣ್ಯ ಪಾಪ ಸ್ವರ್ಗ ನರಕ ಅವರವರ ನಡವಳಿಕೆಯ ಭಾವನೆಗಳು. ಸತ್ಯವ ನುಡಿಯುವುದೇ ದೇವಲೋಕ ಮಿಥ್ಯವ ನುಡಿಯುವುದೇ ಮರ್ತ್ಯ ಲೋಕ ,ಆಚಾರವೇ ಸ್ವರ್ಗ ಅನಾಚಾರವೇ ನರಕ.
3) ಲಿಂಗ ಭೇದ ಆಶ್ರಮ ಭೇದ ವರ್ಗ ಭೇದ ವರ್ಣ ಭೇದವನ್ನಳಿದ ಸರ್ವಕಾಲಿಕ ಸಮಕಾಲೀನ ಸಮನಾತೆಯ ಧರ್ಮವಾಗಿದೆ.
4) ಪಂಚಾಗ ಭವಿಷ್ಯ ,ತಿಥಿ ಮುಹೂರ್ತ ಶಕುನ ,ಸೂತಕ ಜಾತಿ ವ್ಯವಸ್ಥೆ ಮಡಿ ಮೈಲಿಗೆ ವಾಸ್ತು ಪ್ರಾಣಿಗಳ ಬಂಧನ (ನಾಯಿ ಬೆಕ್ಕು ಪಕ್ಷಿ ಗಿಳಿ ಸಾಕಾಣಿಕೆ ) ನಿಷೇಧ.
5) ವೈದಿಕ ಪರಂಪರೆಯ ಯಾವುದೇ ಆಚರಣೆ ಮದುವೆ ಲಿಂಗೈಕ್ಯ ಕ್ರಿಯೆ ಸಮಾಧಿ ಸಂಸ್ಕಾರಗಳು ವೇದ ಆಗಮ ಶಾಸ್ತ್ರ ಪುರಾಣ ಪಠನವಿಲ್ಲದಿರುವುದು .
6) ಮಧ್ಯ ಮಾಂಸ ಸೇವನೆ ನಿಷೇಧ . ತಂಬಾಕು ಗಾಂಜಾ ಆಫೀಮು ಮುಂತಾದ ಪದಾರ್ಥಗಳ ಸೇವೆನೆಗೆ ಅವಕಾಶವಿಲ್ಲ
7) ಧರ್ಮ ಆಚರಣೆ ವ್ಯಕ್ತಿಯಿಂದ ಸಮಾಜಕ್ಕೆ ನೇರವಾದ ಸ೦ಬ೦ಧವಿರುವುದು. ದೈವ ಮತ್ತು ಭಕ್ತರ ಮಧ್ಯೆ ದಲ್ಲಾಳಿಗಳಿಲ್ಲ,
8) ಧರ್ಮಕ್ಕೆ ಸ್ಥಾಯಿ ಸಂಸ್ಥೆ ಗಳಿಲ್ಲ ಮಠ ಆಶ್ರಮ ಪ್ರತಿಷ್ಠಾನ ಶರಣ ತತ್ವಕ್ಕೆ ಸಂಪೂರ್ಣ ವಿರೋಧ.
9) ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ -ದಯವೇ ಧರ್ಮದ ಮೂಲ -ಇವು ಶರಣರ ಬಲವಾದ ನಂಬಿಕೆ ಆಶಯಗಳು..
10) ಯಾವುದೇ ಹಂತದಲ್ಲೂ ಶ್ರೇಣಿಕೃತವಲ್ಲದ ಸರಳ ಸುಂದರ ಸಮತಾವಾದದ ಮೇಲೆ ನಿಂತ ವಿಶ್ವ ಪ್ರೇಮ ಶಾಂತಿ ಸಹ ಬಾಳ್ವೆ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು ಸಾರುವ – ಶರಣರ ದಿಟ್ಟ ಸಂಕಲ್ಪ .
11) ಕಾಯಕ ದಾಸೋಹ ಲಿಂಗಾಯತ ಧರ್ಮದ ಅತ್ಯಂತ ಕಡ್ಡಾಯದ ಸೂತ್ರಗಳು.
12 ) ಅಷ್ಟಾವರಣ ಅಂಗ ಪಂಚಾಚಾರವೇ ಪ್ರಾಣ ಷಟಸ್ಥಲವೆ ಆತ್ಮ ,ಸಮಾನತೆ ಧರ್ಮ ಧ್ಯೇಯ. ಬಸವಣ್ಣ ಲಿಂಗಾಯತ ಧರ್ಮ ಗುರು. ವಚನಗಳೆ ನಮ್ಮ ಸಂವಿಧಾನ
—————————————————————————–
ಡಾ .ಶಶಿಕಾಂತ.ಪಟ್ಟಣ.ಪೂನಾ ರಾಮದುರ್ಗ