Homeಲೇಖನಬಸವ ಪ್ರಜ್ಞೆಯ ಮೇರು ಶಿಖರ ಮಹಾದೇವ ಹೊರಟ್ಟಿ

ಬಸವ ಪ್ರಜ್ಞೆಯ ಮೇರು ಶಿಖರ ಮಹಾದೇವ ಹೊರಟ್ಟಿ

Published on

ನಾವು -ನಮ್ಮವರು

ಬಸವಣ್ಣನವರನ್ನು ಶರಣರನ್ನು ಅಪ್ಪಿಕೊಂಡು ಬದುಕಿನುದ್ದಕ್ಕೂ ಅರವತ್ತು ವರ್ಷಗಳ ನಿರಂತರ ಹೋರಾಟ ಸಂಘರ್ಷಗಳಿಂದ ಭಾರತದ ಮಹಾ ಬುದ್ಧಿ ಜೀವಿಗಳಿಂದ ಕೇಂದ್ರೀಯ ಮಂತ್ರಿ ಬೂಟಾ ಸಿಂಗ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಬಿಹಾರ ಹಿಂದಿನ ಮುಖ್ಯ ಮಂತ್ರಿ ಜೇ ಬೀ ಪಟ್ನಾಯಕ ಇವರೊಂದಿಗೆ ಬಸವ ಶಾಂತಿ ಯಾತ್ರೆ ಆರಂಭಿಸಿ ಭಾರತ ಜೋಡಿ ಏಕತಾ ಆಂದೋಲನವನ್ನು ಕಲ್ಪಿಸಿ ಬುದ್ಧ ಬಸವ ಗಾಂಧಿ ಮುಂತಾದವರ ಆದರ್ಶಗಳಿಂದ ಪ್ರೇರಿತರಾದ ಮಹಾದೇವ ಹೊರಟ್ಟಿ ಅವರು ನಮಗೆ ಅದರಣಿಯರು ಅನುಕರಣೀಯರು.

ಮಹಾದೇವ ಹೊರಟ್ಟಿ ಅವರು 11- 03- 1948ರಲ್ಲಿ ಜನಿಸಿದರು .ಅವರ ತಂದೆ ಲಿಂ. ಈರಪ್ಪ ಹೊರಟ್ಟಿಯವರು ಮತ್ತು ತಾಯಿ ಶ್ರೀಮತಿ ಲಿಂ. ಸಾತಲಿಂಗಮ್ಮ ಹೊರಟ್ಟಿಯವರು. ಇವರ ಪತ್ನಿ ಶ್ರೀಮತಿ ಪ್ರೇಮಾ ಹೊರಟ್ಟಿಯವರು ಪತಿಗೆ ತಕ್ಕ ಸತಿಯಾಗಿ ಅವರ ಹೆಜ್ಜೆಯಲ್ಲಿ ತಮ್ಮ ಹೆಜ್ಜೆಯನಿಟ್ಟು ಅನವರತ ಸಹಕಾರ ಕೊಡುವ, ಅನುಸರಿಸಿಕೊಂಡು ಹೋಗುವ, ಸಹನಾಭೂತಿಯ ಧರ್ಮಪತ್ನಿಯಾಗಿ ಎಲ್ಲರಿಗೂ ಮಾದರಿಯಂತಿದ್ದಾರೆ ಎಂದು ಹೇಳಬಹುದು. ಪ್ರೇಮಾ ಅವರು ಮೊದಲಿನಿಂದಲೂ ನಮ್ಮ ವೇದಿಕೆಯಲ್ಲಿ ತಮ್ಮ ಸಂಗೀತ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಇಬ್ಬರೂ ದಂಪತಿಗಳು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು. ಪ್ರತಿ ವಾರ ಅತ್ಯಂತ ಆಸಕ್ತಿಯಿಂದ ತಪ್ಪದೇ ನಮ್ಮ ವೇದಿಕೆಯಿಂದ ನಡೆಯುವ ಗೂಗಲ್ ಮೀಟ ಗಳಲ್ಲಿ ಭಾಗವಹಿಸಿ, ಸಂವಾದ ದಲ್ಲಿ ಪಾಲ್ಗೊoಡು, ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಅವರ ಮಗಳು ಡಾ. ಪ್ರಿಯಾ ಹೊರಟ್ಟಿಯವರು. ಮಹಾದೇವ ಹೊರಟ್ಟಿ ಅವರ ವೃತ್ತಿ ಕೃಷಿ ಮತ್ತು ಸಮಾಜ ಸೇವೆ. ಈಗ ಸದ್ಯ ಧಾರವಾಡದಲ್ಲಿ ನೆಲೆಸಿ, ಬಸವಶಾಂತಿ ಮಿಷನ್ ಅಧ್ಯಕ್ಷರಾಗಿ ಬಸವತತ್ವದ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಮಹಾದೇವ ಹೊರಟ್ಟಿಯವರು ಎಂ. ಎ ರಾಜನೀತಿಶಾಸ್ತ್ರ, ಸ್ನಾತಕೋತ್ತರ ಭಾಷಾಂತರ ಡಿಪ್ಲೋಮಾ ಮುಗಿಸಿದ್ದಾರೆ. ಅವರು ವಿದ್ಯಾರ್ಥಿಯಾಗಿದ್ದಾಗಲೇ ಗೌರವ ಕಾರ್ಯದರ್ಶಿ -ಗಾಂಧಿ ಭವನ, ಕರ್ನಾಟಕ ವಿಶ್ವವಿದ್ಯಾಲಯ- ಧಾರವಾಡ, ವಿದ್ಯಾರ್ಥಿ ಪ್ರಧಾನಮಂತ್ರಿ – ವಿ. ಬಿ ದರ್ಬಾರ್ ಹೈಸ್ಕೂಲ್ – ವಿಜಯಪುರ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ – ಕರ್ನಾಟಕ ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜು ಧಾರವಾಡದಲ್ಲಿ ನಿಭಾಯಿಸಿದ್ದರು.

ಮಹಾದೇವ ಹೊರಟ್ಟಿಯವರು 1969ರಲ್ಲಿ ಭಾರತ ಸರಕಾರದ ಶಿಕ್ಷಣ ಸಚಿವಾಲಯ ಮತ್ತು ಯು.ಜಿ.ಸಿ ಸಂಘಟಿತ ಅಖಿಲ ಭಾರತ ವಿದ್ಯಾರ್ಥಿ ಧುರೀಣರ ಸಮ್ಮೇಳನದಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ, ಅಮೆರಿಕ ಸಂಯುಕ್ತ ಸಂಸ್ಥಾನದ ಶಿಕ್ಷಣ ಪ್ರತಿಷ್ಠಾನ,ಗುಜರಾತ್ ರಾಜ್ಯದ ಬರೋಡ ವಿಶ್ವವಿದ್ಯಾಲಯದಲ್ಲಿ ಸಂಘಟಿಸಿದ ವಿದ್ಯಾರ್ಥಿ ಧುರೀಣತ್ವ ವಿಚಾರಗೋಷ್ಠಿಯಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿದ್ದರು.

ಮಹಾದೇವ ಹೊರಟ್ಟಿ ಅವರ ಸಹಕಾರಿ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು

1..ಹುಬ್ಬಳ್ಳಿ ಧಾರವಾಡ ಸಹಕಾರ ಸಗಟು ಕೇಂದ್ರ – ನಿರ್ದೇಶಕರು
2.. ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಫೆಡರೇಷನ್ – ಬೆಂಗಳೂರು – ಉಪಾಧ್ಯಕ್ಷರು
3.. ಮಹಾತ್ಮ ಬಸವೇಶ್ವರ ಅವರ ಪವಿತ್ರ ಕೂಡಲಸಂಗಮ ಕ್ಷೇತ್ರ ಸಂರಕ್ಷಣೆಯ ಪಾದಯಾತ್ರೆ
4.. ಶ್ರೀ ಕ್ಷೇತ್ರ ಉಳವಿಯಿಂದ ಪವಿತ್ರ ಕ್ಷೇತ್ರ ಕೂಡಲಸಂಗಮದವರೆಗೆ ಶ್ರೀ ಕ್ಷೇತ್ರ ಸಂರಕ್ಷಣೆಯಲ್ಲಿ ಯಶಸ್ವಿಯಾದದ್ದು
5.. ಬರಗಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾನುವಾರು ಸಂರಕ್ಷಣೆ ಚಳವಳಿ
6.. ಹುಬ್ಬಳ್ಳಿ ಧಾರವಾಡದಲ್ಲಿ 80 ಕೊಳಚೆ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮ ಜರಗಿಸಿದ್ದು
7.. ಹಿರಿಯ ನಾಯಕ  ದೇವರಾಜ ಅರಸರ ನೇತೃತ್ವದಲ್ಲಿ ನರಗುಂದದಿಂದ ಬೆಂಗಳೂರು ನಗರದವರೆಗೆ ರೈತರ ಪಾದಯಾತ್ರೆ ಸಂಘಟಿಸಿದ್ದು
8.. ಬಲ್ಗೇರಿಯಾ ದೇಶದ ರಾಜಧಾನಿ ಸೋಫಿಯಾ ನಗರದಲ್ಲಿ ಜಗತ್ತಿನ ವಿಶ್ವದ ಎಲ್ಲ ರಾಷ್ಟ್ರಗಳ ಪ್ರತಿನಿಧಿ ಗಳಿಂದ ಕೂಡಿದ ಅಭೂತಪೂರ್ವ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಸೆಪ್ಟೆಂಬರ್ 24 ರಿಂದ 26,1981 ರಲ್ಲಿ ಭಾಗವಹಿಸಿದ್ದು.
9.. ಈ ಶಾಂತಿ ಸಮ್ಮೇಳನದಲ್ಲಿ “ಅಣುದುರಂತ, ನಿಶಸ್ತ್ರೀಕರಣ ಮತ್ತು ವಿಶ್ವಶಾಂತಿ” ಬಗೆಗೆ ಪ್ರಬಂಧ ಮಂಡಿಸಿದ್ದು.
10. 1981 ರಲ್ಲಿ ಭಾರತ ಸೋವಿಯತ್ ರಷ್ಯಾ ಮೈತ್ರಿಯ ಅಂಗವಾಗಿ ರಷ್ಯಾ ದೇಶವನ್ನು ಸಂದರ್ಶಿಸಿದುದು

ಸವರ್ಣೀಯರು ಮತ್ತು ದಲಿತ ಬಾಂಧವರ ನಡುವೆ ಜರುಗಿದ ಸಂಘರ್ಷ ತಿಳಿಗೊಳಿಸಲು ಬಸವಶಾಂತಿ ಯಾತ್ರೆ ಸಂಘಟನೆ ಮತ್ತು ಅದು ಯಶಸ್ವಿಯಾದುದು

1.. ರಾಯಚೂರು ಜಿಲ್ಲೆಯ ಗಿಣಿಗೇರ ಮತ್ತು ಬಡಕಿನಾಳ ಗ್ರಾಮಗಳಲ್ಲಿ
2.. ಬೆಳಗಾವಿ ಜಿಲ್ಲೆಯ ಬೆಂಡಿಗೇರಿ ಮತ್ತು ಬಿದರಹಳ್ಳಿ ಗ್ರಾಮಗಳಲ್ಲಿ
3.. ಮೈಸೂರು ಜಿಲ್ಲೆಯ ಬದನವಾಳು ಮತ್ತು ಉಮ್ಮತ್ತೂರು ಗ್ರಾಮಗಳಲ್ಲಿ
4. ವಿಜಯಪುರ ನಗರದಲ್ಲಿ ಕೋಮು ಸಾಮರಸ್ಯ ಮೂಡಿಸಲು ಶಾಂತಿ ಯಾತ್ರೆ
5. ಆರು ಜನ ಸಿಖ್ ಸಮುದಾಯದ ವಿದ್ಯಾರ್ಥಿಗಳ ಕೊಲೆ ಬೀದರ್ ನಗರದಲ್ಲಿ ಜರುಗಿದಾಗ ಹಿಂದೂ ಸಿಖ್ ಮತ್ತು ಇನ್ನಿತರ ಸಮಾಜಗಳ ಮಧ್ಯೆ ಶಾಂತಿ ಭಾಂದವ್ಯ ಏರ್ಪಡಿಸಲು ಜರುಗಿಸಿದ ಶಾಂತಿ ಯಾತ್ರೆ

ರಾಷ್ಟ್ರೀಯ ಏಕತೆ, ಸರ್ವ ಸಮಾಜಗಳ ಏಕತೆ ಮತ್ತು ಶಾಂತಿಗಾಗಿ ಭಾರತ ದೇಶದ ವಿವಿಧ ರಾಜ್ಯಗಳಲ್ಲಿ ಸಂಘಟಿಸಿದ ಶಾಂತಿ ಯಾತ್ರೆಗಳು ಒಟ್ಟು 25,000 ಕಿಲೋಮೀಟರ್

1.. ಕರ್ನಾಟಕ ರಾಜ್ಯದಲ್ಲಿ ಪವಿತ್ರ ಬಸವ ಶಾಂತಿ ಜ್ಯೋತಿ ನೇತೃತ್ವದಲ್ಲಿ 5000 ಕಿಲೋಮೀಟರ್ ಶಾಂತಿಯಾತ್ರೆ
2 ಪವಿತ್ರ ಜಗನ್ನಾಥ ಜ್ಯೋತಿ ಶಾoತಿ ಯಾತ್ರೆ ಎರಡು ಸಲ 4000 km ಮತ್ತು 4000 km ಓಡಿಸ್ಸಾ ರಾಜ್ಯದಲ್ಲಿ, ನೇತೃತ್ವ- ಭಾರತ ದೇಶದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ರಂಗನಾಥ ಮಿಶ್ರಾ ಮತ್ತು ಅಂದಿನ ಮುಖ್ಯಮಂತ್ರಿ  ಜೆ. ಬಿ. ಪಾಟ್ನಾಯಿಕ್, ಪ್ರಧಾನ ಕಾರ್ಯದರ್ಶಿ ಮಹದೇವ ಹೊರಟ್ಟಿ
3.. ಮಹಾರಾಷ್ಟ್ರ ರಾಜ್ಯ ಮತ್ತು ಆಂಧ್ರಪ್ರದೇಶ ರಾಜ್ಯದಲ್ಲಿ ಜರುಗಿದ 3000 ಕಿಲೋಮೀಟರ್ ಬಸವಶಾಂತಿ ಯಾತ್ರೆ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ, ದೆಹಲಿ ರಾಜಸ್ತಾನ,ಭಾರತದ ಸಮಗ್ರತೆ ಮತ್ತು ಶಾಂತಿಗಾಗಿ ಶಾಂತಿ ಯಾತ್ರೆ

1.. ಸಂತ ಗುರುನಾನಕ ಶಾಂತಿ ಜ್ಯೋತಿ ಯಾತ್ರೆ ಸ್ವರ್ಣ ಮಂದಿರ ಅಮೃತಸರದಿಂದ ನವದೆಹಲಿ
2..ಸೂಫಿ ಸಂತ ಖ್ವಾಜಾ ಗರೀಬ ನವಾಜ ಶಾಂತಿ ಜ್ಯೋತಿ ಯಾತ್ರೆ ಅಜ್ಮೀರ್ ದರ್ಗಾ ರಾಜಸ್ಥಾನದಿಂದ ನವ ದೆಹಲಿ
3..ಭಗವಾನ್ ಶ್ರೀ ಕೃಷ್ಣ ಶಾಂತಿ ಜ್ಯೋತಿ ಯಾತ್ರೆ ಉತ್ತರ ಪ್ರದೇಶ ಮಥುರಾದಿಂದ ನವದೆಹಲಿ
4..ಮಹಾತ್ಮ ಗಾಂಧಿ ಶಾಂತಿ ಜ್ಯೋತಿ ಯಾತ್ರೆ ಮಹಾತ್ಮಾ ಗಾಂಧೀಜಿ ಸಮಾಧಿಯಿಂದ ತಲಕಟೋರಾ ಮೈದಾನ ನವದೆಹಲಿ
5..ಸಂತ ಜ್ಞಾನೇಶ್ವರ ಶಾಂತಿಯಾತ್ರೆ ಹುಬ್ಬಳ್ಳಿಯಿಂದ ಧಾರವಾಡದವರೆಗೆ
6.. ಸಂತ ಶಿರಡಿ ಸಾಯಿಬಾಬಾ ಶಾಂತಿ ಯಾತ್ರೆ ಹುಬ್ಬಳ್ಳಿಯಿಂದ ಸೊಲ್ಲಾಪುರವರೆಗೆ
7.. ಭಗವಾನ್ ವಿಠೋಬಾ ಶಾಂತಿ ಯಾತ್ರೆ ಪಂಡರಪುರದಿಂದ ಸೊಲ್ಲಾಪುರ ನಗರದವರೆಗೆ
8.. ಮಹಾತ್ಮಾ ಬಸವೇಶ್ವರ ಶಾಂತಿ ಜ್ಯೋತಿ ಯಾತ್ರೆ ಬೀದರ್ ನಗರದಿಂದ ಸೊಲ್ಲಾಪುರದವರೆಗೆ
9.. ಭಗವಾನ್ ಬುದ್ಧ ಶಾಂತಿ ಜ್ಯೋತಿ ಯಾತ್ರೆ ಸೊಲ್ಲಾಪುರ
10.. ಹಜರತ್ ಹಾಶಿoಪೀರ ಶಾಂತಿ ಜ್ಯೋತಿ ಯಾತ್ರೆ, ವಿಜಯಪುರ ಕರ್ನಾಟಕದಿಂದ ಸೊಲ್ಲಾಪುರದವರೆಗೆ
11.. ಶ್ರೀ ಸಿದ್ಧಾರೂಢ ಶಾಂತಿ ಯಾತ್ರೆ ಕರ್ನಾಟಕ
12.. ಭಾರತ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಶಾಂತಿ ಯಾತ್ರೆಗಳು ಮತ್ತು ಶಾಂತಿ ಸಮ್ಮೇಳನ ಸಂಘಟಿಸಿದುದು

ಇವರು ಮೂರು ವಿಶ್ವಶಾಂತಿ ಸಮ್ಮೇಳಗಳಲ್ಲಿ –
ಎರಡು ನವದೆಹಲಿಯಲ್ಲಿ ನಡೆದದ್ದು ಮತ್ತು
ಒಂದು ಸೊಲ್ಲಾಪುರದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಮಹಾದೇವ ಹೊರಟ್ಟಿಯವರು ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ಕಾರ್ಯಧ್ಯಕ್ಷರಾಗಿ,ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

1.. ಕೇಂದ್ರ ಸಮಿತಿ ಸದಸ್ಯರು ಬಸವ ಸಮಿತಿ ಬೆಂಗಳೂರು 2..ಕಾರ್ಯಾಧ್ಯಕ್ಷರು ಭಾರತ ಏಕತಾ ಆಂದೋಲನ ನವ ದೆಹಲಿ
3.. ಅಧ್ಯಕ್ಷರು ಬಸವಶಾಂತಿ ಮಿಷನ್ ಟ್ರಸ್ಟ್ ಧಾರವಾಡ 4..ಕಾರ್ಯಾಧ್ಯಕ್ಷರು ಲಿಂ. ಸದ್ಗುರು ಧ್ಯಾನಯೋಗಿ ಶ್ರೀ ಧರಾನಂದರ ಆತ್ಮವಿದ್ಯಾ ಪರಿಶೀಲನ ಆಶ್ರಮ ಟ್ರಸ್ಟ್, ಶೇಡ್ಬಾಳ, ಖಾನಾಪುರ ಧಾರವಾಡ ತಾಲೂಕು
5..ಮಾಜಿ ಸದಸ್ಯರು, ಪಾಂಡಿಚೆರಿ ಕೇಂದ್ರೀಯ ವಿಶ್ವವಿದ್ಯಾಲಯ ಕಮಿನಿಟಿ ಕಾಲೇಜ
6.. ಅಧ್ಯಕ್ಷರು ಮಹಾಕವಿ ಸರ್ವಜ್ಞ ಫೌಂಡೇಶನ್ ಬೆಂಗಳೂರು

ಶ್ರೀ ಮಹಾದೇವ ಹೊರಟ್ಟಿ ಅವರು ಪೀಸ್ ಮಾರ್ಚ್ ಇಂಗ್ಲಿಷ್ ಮಾಸಪತ್ರಿಕೆ ಸಂಪಾದಕರು ಮತ್ತು
Consulting Editor
Who’s who Magzine American Biographical Society ಆಗಿ ಸಹ ಕೆಲಸ ಮಾಡಿದ್ದಾರೆ.

ಬಸವಶಾಂತಿ ಮಿಷನ್ ನಿಂದ ಪ್ರಕಟಿಸಿದ ಗ್ರಂಥಗಳು

1..ಮಹಾತ್ಮ ಬಸವೇಶ್ವರರ ವಚನಗಳು ( ಹಿಂದಿ )
2..ಶಿವಯೋಗಿನಿ ಅಕ್ಕಮಹಾದೇವಿ ( ಹಿಂದಿ )
3.. ಶಾಂತಿಪಥ (ಕನ್ನಡ )
4..ಬೋಧ ಒಂದೇ ( ಕನ್ನಡ )
5.. ಅನುಭಾವ ( ಕನ್ನಡ )
6..ವಚನಗಳಲ್ಲಿ ಆತ್ಮಜ್ಞಾನ( ಕನ್ನಡ )
7..ಶರಣ ಮಾದರ ಚೆನ್ನಯ್ಯನವರ ವಚನಗಳು( ಕನ್ನಡ )
8..ಸದ್ಗುರು ಶ್ರೀ ಶ್ರೀ ಧರಾನಂದರ ಅಮೃತವಾಣಿ ( ಕನ್ನಡ )
9 ಪೀಸ್ ಮಾರ್ಚ್ ( ಇಂಗ್ಲಿಷ್ )
10.. ಕೆ.ಪಿ.ಎಸ್ ಮೆನನ್ ಅವರ ಪುನರುತ್ಥಾನ ಮತ್ತು ಸುಧಾರಣೆ (ಅನುವಾದ )
11..ಸರ್ವಜ್ಞನ ವಚನಗಳು ( ಕನ್ನಡ )

ಒಟ್ಟಿನಲ್ಲಿ ಮಹಾದೇವ ಹೊರಟ್ಟಿ ಅವರು ಒಬ್ಬ ಮಾನವೀಯತೆಯ ಹರಿಕಾರರು, ಬಸವತತ್ವದ ಬಗೆಗೆ ನಿಜವಾದ ಕಳಕಳಿ ಇರುವ ಚಿಂತಕರು, ಸಮಾಜದಲ್ಲಿ ಪ್ರತಿಯೊoದಕ್ಕೂ ಸ್ಪಂದಿಸುತ್ತಾ
ಸಮಾಜದ ಏಳ್ಗೆಗಾಗಿ ದುಡಿಯುವ ನಮ್ಮ ನಿಮ್ಮೆಲ್ಲರ ಮಧ್ಯದಲ್ಲಿ ಇರುವ ಮಹಾನ್ ಚೇತನಾಮೂರ್ತಿ.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ

Latest articles

More like this