ಇಂದು ಕೆಲ ಪ್ರಾಧ್ಯಾಪಕರು ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆಯ ಹೆಸರಿನಲ್ಲಿ ಜನರಲ್ಲಿ ಸಂಶಯದ ಬೀಜಗಳನ್ನು ಬಿತ್ತಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುವ ಕಾರ್ಯಕ್ಕೆ ಇಳಿದಿದ್ದಾರೆ.
ಕಳೆದ ಆರು ವರ್ಷಗಳಿಂದ ನಿರಂತರವಾಗಿ ಶರಣರ ಬಗ್ಗೆ ವಿವಾದಾತ್ಮಕ ವಿಚಾರಗಳನ್ನು ಸಂಶೋಧನೆ ಎಂದು ಹೇಳುತ್ತಾ ಬಸವ ಧರ್ಮೀಯರಲ್ಲಿ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಪ್ರೊ ವಾಸುದೇವ ಬಡಿಗೇರ ಅವರ ಅಪ್ರಬುದ್ಧ ಅಸತ್ಯವಾದ ಸಂಶೋಧನೆ ಈ ಕೆಳಗಿನಂತಿವೆ.
1 ಬಸವಣ್ಣ ಒಬ್ಬ ವಿಶ್ವಕರ್ಮದವನು.
2 ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಬ್ಬರೇ
3 ಕಕ್ಕಯ್ಯ ಕೆಂಭಾವಿ ಬೋಗಣ್ಣ ಮಾದಾರ ಚೆನ್ನಯ್ಯ
ಕುಂಬಾರ ಗುಂಡಯ್ಯ ಮುಂತಾದ 12 ನೆಯ ಶತಮಾನದ ಶರಣರನ್ನು ಬಸವ ಪೂರ್ವಯುಗದ ಕಾಲದ ಶರಣರು ಎಂದು ಹೇಳಿದ್ದು
4 ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಒಂದೇ ಎನ್ನುವ ಪ್ರೊ ವಾಸುದೇವ ಬಡಿಗೇರ ಅವರ ಅಪ್ರಬುದ್ಧ ಅಸತ್ಯವಾದ ಸಂಶೋಧನೆಗೆ ಡಾ ಎಂ ಎಂ ಕಲಬುರ್ಗಿ ಅವರ ಪ್ರೇರಣೆ ಎಂದು ಹೇಳುತ್ತಾ ಡಾ ಎಂ ಎಂ ಕಲಬುರ್ಗಿ ಸರ್ ಅವರು ತಮಗೆ ಆಕಾರಗಳ ಕೊರತೆ ಇದ್ದು ಪ್ರೊ ವಾಸುದೇವ ಬಡಿಗೇರ ಅವರಿಗೆ ದೇವರ ದಾಸಿಮಯ್ಯ ಒಂದು ಮರು ಚಿಂತನೆ ಎಂಬ ಸಂಶೋಧನೆ ಮಾಡಲು ಪ್ರೇರಣೆ ನೀಡಿದರು ಎಂದು ಹಸಿ ಸುಳ್ಳು ಹೇಳುವ ಪ್ರೊ. ವಾಸುದೇವ ಬಡಿಗೇರ ಅವರ ಮಾತಿಗೆ ಏನನ್ನ ಬೇಕು ಅರ್ಥ ಆಗುತ್ತಿಲ್ಲ.
ಡಾ ಎಂ ಎಂ ಕಲಬುರ್ಗಿ ಅವರ ಸಮಗ್ರ ಸಾಹಿತ್ಯ
ಲೇಖನ ಸಾಹಿತ್ಯ ೩ ಸಂಪುಟ ೩೫ ರಲ್ಲಿ
ಡಾ ಎಂ ಎಂ ಕಲಬುರ್ಗಿ ಅವರು
೧ ದೇವೂರ ದಾಸಿಮಯ್ಯ
೨ ಜೇಡರ ದಾಸಿಮಯ್ಯನ ಗ್ರಾಮ ಮುದನೂರು? ಗೊಬ್ಬೂರು?
೩ ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ
೪ ದೇವರ ದಾಸಿಮಯ್ಯನಿಂದ ಜೇಡರ ದಾಸಿಮಯ್ಯ ಭಿನ್ನ
೫ ಬಸವಣ್ಣನವರು ಗಮನಿಸಿದ ಜೇಡರ ದಾಸಿಮಯ್ಯನ ಎರಡು ವಿಶೇಷ ಅಂಶಗಳು.
ಎಂಬ ಐದು ಅತ್ಯಂತ ತಾರ್ಕಿಕ ವಿಸ್ತೃತವಾದ ಲೇಖನಗಳನ್ನು ಬರೆದು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರಿಬ್ಬರ ನಡುವಿನ ಕಾಲದ ಅಂತರವನ್ನು ಸಾದರ ಪಡಿಸಿದ್ದಾರೆ.
ಡಾ ಫ ಗು ಹಳಕಟ್ಟಿ ಡಾ ವೆಂಕಟಾಚಲಶಾಸ್ತ್ರಿ
ಡಾ ಎಚ್ ದೇವೀರಪ್ಪ ಡಾ ಚಿದಾನಂದ ಮೂರ್ತಿ ಡಾ ಎಂ ಎಂ ಕಲಬುರ್ಗಿ ಡಾ ವಿದ್ಯಾಶಂಕರ ಡಾ ಪೀ ವಿ ನಾರಾಯಣ ಡಾ ವೀರಣ್ಣ ದಂಡೆ ಡಾ ಜಯಶ್ರೀ ದಂಡೆ ಮುಂತಾದ ನೂರಾರು ಜನ ಸಂಶೋಧಕರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂದು ಸಿದ್ಧ ಪಡಿಸಿದ್ದಾರೆ.
ಡಾ ಕಲಬುರ್ಗಿ ಅವರ ಸಂಶೋಧನೆಗಿಂತ ತನ್ನ ಸಂಶೋಧನೆ ಅತ್ಯಂತ ವಾಸ್ತವಿಕ ಉತ್ಕೃಷ್ಟ ಎಂಬ ಪ್ತೊ.ಬಡಿಗೇರರ ಆತ್ಮರತಿ ಮತ್ತು ಅತಿಯಾದ ಹುಂಬತನಕ್ಕೆ ಡಾ ಕಲಬುರ್ಗಿ ಅವರ ಶಿಷ್ಯ ಬಳಗ ಏಕೆ ಮೌನವಾಗಿದೆ.
ಡಾ ಎಂ ಎಂ ಕಲಬುರ್ಗಿ ಅವರ ಹೆಸರಿನಲ್ಲಿರುವ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ವೀರಣ್ಣ ರಾಜೂರ ಮತ್ತು ಎಲ್ಲಾ ಸದಸ್ಯರು ಏನು ಮಾಡುತ್ತಿದ್ದಾರೆ. ಪ್ರೊ ವಾಸುದೇವ ಬಡಿಗೇರ ಅವರು ನಿರಂತರ ಡಾ ಎಂ ಎಂ ಕಲಬುರ್ಗಿ ಅವರ ಹೆಸರನ್ನು ದುರ್ಬಳಕೆ ಮಾಡುತ್ತಿರುವ ಸಂದರ್ಭದಲ್ಲಿ ಇಷ್ಟೊಂದು ನಿರ್ಲಕ್ಷ ಮತ್ತು ಜಾಣ ಮೌನ ಏಕೆ ಉತ್ತರಿಸಲಿ.
ಡಾ ಎಂ ಎಂ ಕಲಬುರ್ಗಿ ಅವರ ವಾರಸುದಾರರಿಗೆ ಶಕ್ತಿ ಕುಂದಿದೆ ಅಥವಾ ಸತ್ಯ ಹೇಳುವ ಶಕ್ತಿ ಇಲ್ಲವೇ. ?
ಪ್ರೊ ವೀರಣ್ಣ ರಾಜೂರ ಮತ್ತು ಡಾ ಎಂ ಎಂ ಕಲಬುರ್ಗಿ
ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯರು ಈ ಕೂಡಲೇ ತಮ್ಮ ಸ್ಪಷ್ಟೀಕರಣ ಮತ್ತು ಪ್ರತಿಕ್ರಿಯೆ ನೀಡಲಿ.
ಸಂಶೋಧನಾ ಕ್ಷೇತ್ರದಲ್ಲಿ ಇಂತಹ ವಿವಾದಗಳು ಇದ್ದಾಗ ಅದಕ್ಕೆ ಸ್ಪಂದಿಸಿ ಪ್ರತಿಕ್ರಿಯಿಸುವುದು ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಆದ್ಯ ಕರ್ತವ್ಯ
ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದ ಅಣ್ಣ ಜತ್ತಿ ಅವರಿಗೆ ನಾನೇ ಫೋನ್ ಮಾಡಿ ಪತ್ರಿಕೆಗಳಲ್ಲಿ ಪ್ರಕಟ ಮಾಡಿದ ವಿವರಗಳನ್ನು ಪ್ರೊ ವಾಸುದೇವ ಬಡಿಗೇರ ಅವರ ಅಪ್ರಬುದ್ಧ ಅಸತ್ಯವಾದ ಸಂಶೋಧನೆಯ ಬಗ್ಗೆ ಮಾತನಾಡಿದ್ದೇನೆ. ಅವರೂ ಸಂಪೂರ್ಣ ಮೌನವಾಗಿದ್ದು ಪ್ರೊ ವಾಸುದೇವ ಬಡಿಗೇರ ಅವರ ಅಪ್ರಬುದ್ಧ ಸಂಶೋಧನೆಗೆ ಒಂದು ಪ್ರತಿಕ್ರಿಯೆ ಕೊಡುವ ಗೋಜಿಗೆ ಹೋಗಿಲ್ಲ.
ಈ ಕೂಡಲೇ ಅವರು ತಮ್ಮ ಪ್ರತಿಕ್ರಿಯೆ ನೀಡ ಬೇಕು.
ಜಾಗತಿಕ ಲಿಂಗಾಯತ ಮಹಾಸಭೆಯ ಡಾ ಎಸ್ ಎಂ ಜಾಮದಾರ ಅವರ ಗಮನಕ್ಕೆ ಪ್ರಚಲಿತ ವಿದ್ಯಮಾನಗಳು ಗಮನಕ್ಕೆ ಬಂದಿಲ್ಲವೇ?
ಕರ್ನಾಟಕ ಲಿಂಗಾಯತ ಮಠಾಧೀಶರ ಒಕ್ಕೂಟ ಮಲಗಿದೆಯೇ?
ರೋಮನಗರ ಬೆಂಕಿ ಹತ್ತಿ ಉರಿಯುವಾಗ ನೀರೋ ದೊರೆ ಪಿಟೀಲು ಬಾರಿಸುತ್ತಿದ್ದನು ಎನ್ನುವಂತಾಗಿದೆ ನಮ್ಮ ಇಂದಿನ ವ್ಯವಸ್ಥೆ .
ಕೇವಲ ಅಧಿಕಾರ ಪ್ರತಿಷ್ಠೆ ಪ್ರಚಾರಕೆ ಬಸವ ಮತ್ತು ಶರಣರನ್ನು ಹೆಸರಿಸುವ ಗಣ್ಯರು ಪ್ರೊ ವಾಸುದೇವ ಬಡಿಗೇರ ಅವರ ಅಪ್ರಬುದ್ಧ ಅಸತ್ಯವಾದ ಸಂಶೋಧನೆಯ ವಿರುದ್ಧ ಹೋರಾಡಿದರೆ ಅದು ನಿಜವಾದ ಬಸವ ಪ್ರಜ್ಞೆ
_________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ