ನಾವು – ನಮ್ಮವರು
ಕಲ್ಲಪ್ಪ ಹಂಗರಗಿ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ – ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಹoಗರಗಿ ಅವರೂ ಸಹ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು
ಕಲ್ಲಪ್ಪ ಹಂಗರಗಿ ಅವರು ಗ್ರಾಮೀಣ ಭಾಗದ ದೇಸೀಯ ಸೊಗಡನ್ನು ಹೊತ್ತ ಹಲವು ಕನಸುಗಳ ಯಾತ್ರಿಕರು.
ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ಪಥಿಕರು.
ತಾವು ಬೆಳೆದು ಕುಟುಂಬವನ್ನು ಗಟ್ಟಿ ಗೊಳಿಸಿದ ಧೀಮಂತ ವ್ಯಕ್ತಿ.
ಕಲ್ಲಪ್ಪ. ಆರ್. ಹಂಗರಗಿ ಅವರು 1958 ಜುಲೈ 22ರಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕಲಗುರ್ಕಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ರುದ್ರಪ್ಪ ಹಂಗರಗಿಯವರು.ತಾಯಿ ಗುರುಬಾಯಿ ಹಂಗರಗಿಯವರು.
ಇವರ ತಂದೆಯವರು ಪ್ರಾಥಮಿಕ ಶಾಲೆಯ ಶಿಕ್ಷಕರು ಆಗಿದ್ದರು.
ಗಂಡು ಮಕ್ಕಳಲ್ಲಿ ಚಿಕ್ಕವರೇ ಕಲ್ಲಪ್ಪ ಹಂಗರಗಿಯವರು. ಇವರಿಗೆ ಮೂರು ಮಂದಿ ಅಣ್ಣಂದಿರು ಹಾಗೂ ಒಬ್ಬ ತಂಗಿ ಇರುವರು.
ಇವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಹುಟ್ಟೂರಾದ ಕೊಲ್ಹಾರ ದಲ್ಲಿ ಮುಗಿಸಿರುತ್ತಾರೆ. ಟಿ. ಸಿ.ಎಚ್ ಮತ್ತು ಬಿ.ಎ ಪದವಿಯನ್ನು ಬಸವೇಶ್ವರ ಕಾಲೇಜು ಬಾಗಲಕೋಟೆ ಯಲ್ಲಿ ಮುಗಿಸಿರುತ್ತಾರೆ. ಎಂ. ಎ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಗಿಸಿದ್ದು,
ಬಿ.ಎಡ್ ಮಾನಸಗಂಗೋತ್ರಿ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಮುಗಿಸಿರುತ್ತಾರೆ.
ಇವರ ಮೂರು ಜನ ಅಣ್ಣಂದಿರು ಬಿ.ಎಸ್ಸಿ, ಬಿ.ಎ, ಬಿ.ಎಡ್ ಮಾಡಿದ್ದು ಸುಶಿಕ್ಷಿತ ಕುಟುಂಬದವರಾಗಿದ್ದಾರೆ.
ಕಲ್ಲಪ್ಪ ಹಂಗರಗಿಯವರು 1979ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ 21 ವರ್ಷ ಸೇವೆ ಸಲ್ಲಿಸಿರುತ್ತಾರೆ. 2002 ಮಾರ್ಚ್ 5 ರಂದು ಬಡ್ತಿ ಹೊಂದಿ ಸರ್ಕಾರಿ ಕನ್ಯಾ ಪ್ರೌಢಶಾಲೆ ಶಹಾಪುರದಲ್ಲಿ 19 ವರ್ಷ ಸೇವೆ ಸಲ್ಲಿಸಿರುತ್ತಾರೆ. ಒಟ್ಟು 40 ವರ್ಷ ಸರಕಾರಿ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರು 1982 ರಲ್ಲಿ ವಿಜಯಲಕ್ಷ್ಮಿ ಅವರನ್ನು ಮದುವೆಯಾದರು. ಎಸ್. ಎಸ್.ಎಲ್. ಸಿ ಆದ ವಿಜಯಲಕ್ಷ್ಮಿ ಅವರ ಮುಂದಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಮುಗಿಸಲು ಪ್ರೋತ್ಸಾಹ ನೀಡಿದರು ಹಾಗೂ ಶಿಕ್ಷಕಿಯಾಗಿ ಮತ್ತು ಮುಖ್ಯ ಶಿಕ್ಷಕಿಯಾಗಿ ವೃತ್ತಿ ಮಾಡಲು ಕೂಡ ಅವರ ಸಹಕಾರ ಅವರಿಗೆ ಅತ್ಯಮೂಲ್ಯವಾದದ್ದು.
ಇವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬಳು ಮಗಳು ಇದ್ದಾಳೆ. ಶಶಿಧರ್ ಹಿರಿಯ ಮಗ,ಕಿರಿಯ ಮಗ ಶ್ರೀಧರ್ ಇವರು ಕೂಡ ಎಂ.ಬಿ.ಎ ಮುಗಿಸಿ ಉನ್ನತ ಹುದ್ದೆಯಲ್ಲಿ ಮಹೇಂದ್ರ ಅಂಡ್ ಮಹೇಂದ್ರ ಮತ್ತು ಸೋನಾಲಿಕ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಗಳು ಶಿಲ್ಪ ಶ್ರೀ ಕೆ.ಎಚ್ ಅವರು ಬಿ.ಎ.ಎಂ.ಎಸ್, ಎಂ. ಡಿ ಆಯುರ್ವೇದ ಮುಗಿಸಿ ಸ್ವಂತ ಕ್ಲಿನಿಕ್ “ಸೂರ್ಯ ವೇದಂ ವೆಲ್ ನೆಸ್” ಅನ್ನು ಮೈಸೂರಿನ ಕುವೆಂಪು ನಗರದಲ್ಲಿ ದೇಶ, ವಿದೇಶಿಯರಿಗೆ ಆರೋಗ್ಯದ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದಾರೆ.
ಇತ್ತೀಚೆಗೆ ಶಿಲ್ಪಶ್ರೀ ಕೆ ಎಚ್ ಅವರು “Ayurveda for Newbies “ ಇಂಗ್ಲಿಷ್ ನಲ್ಲಿ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ಪುಸ್ತಕದಲ್ಲಿ ತಿಳಿಸಿರುತ್ತಾರೆ. ಹಾಗೂ ಡಾ. ಶಶಿಕಾಂತ ಪಟ್ಟಣ ಅವರ ಸಹಕಾರದಿಂದ ಮತ್ತು ಹಾರೈಕೆಯಿಂದ ಪುಸ್ತಕ ಬಿಡುಗಡೆ ಮಾಡಲಾಗಿದೆ.
ದಂಪತಿಗಳಿಬ್ಬರೂ ಬಸವ ತಿಳಿವಳಿಕೆ ಹಾಗೂ ಸಂಶೋಧನಾ ಕೇಂದ್ರ ಪುಣೆ ಅಡಿಯಲ್ಲಿ ಯಾದಗಿರಿ ಜಿಲ್ಲಾ ಘಟಕ ಮತ್ತು ಶಹಾಪುರ ತಾಲೂಕು ಘಟಕಗಳನ್ನು ಡಾ. ಶಶಿಕಾಂತ ಪಟ್ಟಣ ಅವರ ನೇತೃತ್ವದಲ್ಲಿ ಉದ್ಘಾಟಿಸಿ ಪ್ರಾರಂಭಿಸಿರುತ್ತಾರೆ.
ಡಾ. ಶಶಿಕಾಂತ ಪಟ್ಟಣ ಅವರ ಪ್ರೋತ್ಸಾಹದಿಂದ ಶ್ರೀಮತಿ ವಿಜಯಲಕ್ಷ್ಮಿ ಅವರು 66 ಕವನಗಳನ್ನು ಬರೆದು ‘ನೆರಳು ಮತ್ತು ಪ್ರೀತಿ’ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಹಾಗೂ ಪ್ರತಿ ರವಿವಾರ ಒಳ್ಳೆಯ ಶೀರ್ಷಿಕೆ ಕೊಟ್ಟು” ಕನ್ನಡ ಕಾವ್ಯಂಜಲಿ ಕವನ ಕೂಟ” ದಲ್ಲಿ ಕವನಗಳನ್ನು ರಚಿಸಲು ಯಾದಗಿರಿ ಮತ್ತು ಶಹಾಪುರದ ಕವಯಿತ್ರಿ ಯರಿಗೆ ಪ್ರೋತ್ಸಾಹಿಸುತ್ತಾ ಬಂದಿರುತ್ತಾರೆ.
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಆಜೀವ ಸದಸ್ಯತ್ವವನ್ನು ಕಲ್ಲಪ್ಪ ಹಂಗರಗಿ ಹಾಗೂ ವಿಜಯಲಕ್ಮಿ,ಹಂಗರಗಿಯವರು ಆಗಿದ್ದು, ಕಲ್ಲಪ್ಪ ಅವರು ತಮ್ಮ ತಂದೆ- ತಾಯಿಯ ಹೆಸರಿನಲ್ಲಿ ದತ್ತಿ ಉಪನ್ಯಾಸವನ್ನು ಹಾಗೂ ಇವರ ಸತಿ ಶ್ರೀಮತಿ ವಿಜಯಲಕ್ಷ್ಮಿ ಹಂಗರಗಿ ಅವರು ಅವರ ತಂದೆ ತಾಯಿ ಹೆಸರಿನಲ್ಲಿ ದತ್ತಿ ಉಪನ್ಯಾಸವನ್ನು ಮಾಡಿಸಿರುತ್ತಾರೆ.
ದಂಪತಿಗಳಿಬ್ಬರೂ ಸಕ್ರಿಯವಾಗಿ ಬಸವ ತಿಳಿವಳಿಕೆ ಹಾಗೂ ಸಂಶೋಧನಾ ಕೇಂದ್ರ ಪುಣೆ ಮತ್ತು ಯಾದಗಿರಿ ಜಿಲ್ಲೆಯ,ತಾಲೂಕು ಶಹಾಪುರದಲ್ಲಿ ಅಕ್ಕನ ಅರಿವು ಎಲ್ಲ ಕಾರ್ಯಕ್ರಮಗಳಲ್ಲಿ,ಗೂಗಲ್ ಮೀಟ್ ನಲ್ಲಿ ಆಸಕ್ತಿಯಿಂದ ಭಾಗಿಗಳಾಗುತ್ತಾರೆ.
ಕಲ್ಲಪ್ಪ ಹಂಗರಗಿ ಅವರು “ಬಸವ ಮನೆ “ಎಂಬ ಕಾರ್ಯ ಕ್ರಮವನ್ನು ಬಸವಣ್ಣ ನವರ ವಚನ,ಅಕ್ಕಮಹಾದೇವಿ ಅವರ ಜೀವನ ಕುರಿತು ಸಂಕ್ಷಿಪ್ತ ವಿವರಣೆ ನೀಡಿ, ತಮ್ಮ ಮನೆಯಲ್ಲಿ ಮೊದಲು “ಬಸವ ಮನೆ” ಪ್ರಾರಂಭಿಸಿ, ಮುನ್ನಡೆ ಸುತ್ತಿದ್ದಾರೆ..
ಕಲ್ಲಪ್ಪ ಹಂಗರಗಿಯವರು ಬಡ ವಿದ್ಯಾರ್ಥಿಗಳಿಗೆ ಪುಸ್ತಕ , ನೋಟ್ ಬುಕ್ ಗಳು ,ಪೆನ್ನು ಕೊಟ್ಟು ಸಹಾಯ ಮಾಡುವುದರೊಂದಿಗೆ ಪ್ರಾಣಿ-ಪಕ್ಷಿಗಳಲ್ಲಿ ಕನಿಕರವಿರುವವರು. ಶಹಾಪುರ ಸಮೀಪದಲ್ಲಿರುವ ಡಿಗ್ಗಿ ದೇವಸ್ಥಾನದ ದಲ್ಲಿರುವ 200 ಮಂಗಗಳಿಗೆ ಪ್ರತಿ ರವಿವಾರ ಬಾಳೆಹಣ್ಣು ಮತ್ತು ಬಿಸ್ಕೆಟ್ ಗಳನ್ನು ವಿತರಿಸಿ ಬರುತ್ತಾರೆ.
ಕಲ್ಲಪ್ಪ ಹಂಗರಗಿ ಅವರು ಸದಾ ಹಸನ್ಮುಖಿಯಾಗಿ ಎಲ್ಲರಿಗೂ ಪ್ರೋತ್ಸಾಹಿಸುತ್ತಾ, ಮಾತಿನ ಸರದಾರರಾಗಿ ಸ್ನೇಹಪರಜೀವಿಯಾಗಿದ್ದಾರೆ
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ