ಬಸವ ಮರಳಿ ಬಂದಿಹನು
ಮತ್ತೆ ಕ್ರಾಂತಿಯ ಕಿಡಿಯ
ಹಚ್ಚಲು
ಎಲ್ಲರಲಿ ಸಮಾನತೆಯ ಮೆರೆಯಲು
ಜಗದ ತುಂಬ
ವಚನ ಸಾರವ ಅರುಹಲು
ಮೌಢ್ಯವ ಹೋಗಲಾಡಿಸಿ
ಅರಿವು ಮೂಡಿಸಲು
ಮರಳಿ ಬಂದಿಹನು ಬಸವನು
ಜಾತಿಯ ವೈಷಮ್ಯವನು ಮೀರಿ
ಎಲ್ಲರೊಳಗೊಂದಾಗಿ
ಮಿನುಗಲು
ವಚನ ತಿದ್ದುವ ಭ್ರಾoತಿ
ಮನಸುಗಳಿಗೆ ತಕ್ಕ
ಪಾಠ ಕಲಿಸಲು
ಯಜ್ಞ ಹೋಮ ತ್ಯಜಿಸಿ
ಹೆಜ್ಜೆ ಹಾಕಿ ನಮ್ಮ ಜೊತೆಗೆ
ಎಂದು ಕರೆಯುತ
ಮರಳಿ ಬಂದಿಹನು ಬಸವನು
ವಚನ ಅರಿವಿನ ಮೂಲಕ
ಮಲಗಿದ್ದವರ ಬಡಿದೆಬ್ಬಿಸುತ
ಪ್ರತಿ ದಿನವೂ ತಿಳಿಹೇಳುತ್ತ
ತಿದ್ದಿ ತೀಡುತ್ತ
ಎಲ್ಲರೂ ಒಂದೇ ಎಂಬ
ಭಾವ ಬಿತ್ತುತ್ತ
ಮಠಾಧೀಶರನು ಅಡಿಗಡಿಗೆ
ಎಚ್ಚರಿಸುತ್ತ
ಮರಳಿ ಬಂದಿಹನು ಬಸವನು
ವಿಶ್ವವ್ಯಾಪಿ ಜನರನು
ಒಂದೇ ವೇದಿಕೆಯಲಿ
ಕೂಡಿಸಿ
ಕ್ಷಣ ಕ್ಷಣಕೂ ಉಚ್ಚರಿಸುತಿಹನು ಶರಣರ
ಮೂಲಬೇರನು
ವಚನಕಾರರ ವಚನಕಾರ್ತಿಯರ ಸರ್ವಾoಗೀಣ ಅಭಿವೃದ್ಧಿಗೆ
ತನ್ನ ಜೀವನವನೇ ಅರ್ಪಿಸಿಹನು
ಮರಳಿ ಬಂದಿಹನು ಬಸವನು
ಸುಧಾ ಪಾಟೀಲ
ಬೆಳಗಾವಿ