ಮೂಡಲಗಿ – ಸಮಾಜದಲ್ಲಿ ಬಸವಣ್ಣವರ ತತ್ವಗಳನ್ನು ಅಳವಡಿಸಿಕೊಂಡು ಈಗಿನ ಯುವಜನತೆಗೆ ಮಾದರಿಯಂತೆ ನಡೆದರೆ ಯಾವುದೇ ಅಪರಾಧಕ್ಕೆ ಅವಕಾಶ ಇರುವುದಿಲ್ಲ ಎಂದು ಪೂಜ್ಯ ಶಶಿಕಾಂತ್ ಗುರೂಜಿ ಅಭಿಪ್ರಾಯಪಟ್ಟರು
ಅವರು ಕಲ್ಲೋಳಿಯ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಬಸವ ಕಮಿಟಿ ವತಿಯಿಂದ ಸಾಮೂಹಿಕ ಉಚಿತ ಉದ್ಘಾಟಕರಾಗಿ ಆಗಮಿಸಿ ಮಾತನಾಡುತ್ತಾ ಈಗಿನ ಪ್ರಸ್ತುತ ಜೀವನದಲ್ಲಿ ಬಸವಣ್ಣವರ ತತ್ವಗಳು ಅನುಕರಣೆಯ ಆದರೆ ಇವುಗಳನ್ನು ಸಮಾಜದಲ್ಲಿ ಪಾಲಿಸುತ್ತಿಲ್ಲ ಎಂಬುದು ಕಳವಳಿಕಾರ ವಿಷಯವಾಗಿದೆ ಕಲ್ಲೋಳಿ ಪಟ್ಟಣವು ಜಾತಿ ಮತ ಪಂಥ ಭೇದಭಾವವಿಲ್ಲದ ಈ ರೀತಿ ಬಸವಣ್ಣನವರ ಜಯಂತಿಯ ಹಾಗೂ ಉತ್ಸವಗಳು ನಡೆಯುತ್ತಿರುವುದು ನಾಡಿನ ಜನತೆಗೆ ಮಾದರಿಯಾಗಿದೆ ಇದು ಕಲ್ಲೋಳಿಯ ಹಿರಿಮೆಯಾಗಿದೆ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಬಸವ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾದ ಈರಣ್ಣ ಬೆಳಕೂಡ ವಹಿಸಿದ್ದರು
ಅಧ್ಯಕ್ಷತೆಯನ್ನು ಬಸವ ಕಮಿಟಿಯಅಧ್ಯಕ್ಷರಾದ ರಮೇಶ ಬೆಳಕೂಡ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕಲ್ಲಪ್ಪ ಗುರುಸಿದ್ದಪ್ಪ ಕಡಾಡಿ ಪರಪ್ಪ ಗುರುಸಿದ್ದಪ್ಪ ಕಡಾಡಿ ಪ್ರಗತಿಪರ ರೈತರು ಸಮಾಜ ಸೇವಕರು ಆಗಮಿಸಿದ್ದರು ಈ ಸಂದರ್ಭದಲ್ಲಿ ಈ ವರ್ಷ ಸಾಮೂಹಿಕ ಉಚಿತ ಗುಗ್ಗಳೋತ್ಸವದಲ್ಲಿ ಸುಮಾರು 20 ಗುಗ್ಗುಳ ತಂಡಗಳು ಭಾಗವಹಿಸಿದ್ದು, ಈ ಸಂದರ್ಭದಲ್ಲಿ ಸಾಧಕರನ್ನು ಶಾಲುಹೊದಿಸಿ ತಲಪುಷ್ಪ ನೀಡಿ ಸನ್ಮಾನಿಸಲಾಯಿತು ವೇದಿಕೆ ಮೇಲೆ ಬಸವ ಕಮಿಟಿಯ ಕಾರ್ಯದರ್ಶಿ ಮಲ್ಲಪ್ಪ ಕೆಂಚಪ್ಪ ಕಡಾಡಿ, ಖಜಾಂಜಿ ಕೃಷ್ಣಪ್ಪ ಮುಂಡಿ ಗನಾಳ, ಸದಸ್ಯರಾದ ಪರಪ್ಪಮಟ್ಟಿಗಾರ್, ಮಹದೇವ್ ಖಾನಾಪುರ್ ಉಪಸ್ಥಿತರಿದ್ದರು.
ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಪ್ರಿಯದರ್ಶಿನಿ ಬ್ಯಾಂಕ್ ಶಾಖಾಧಿಕಾರಿ ಮಂಜು ಹಾಗೂ ಸಿಬ್ಬಂದಿ ವರ್ಗದವರು ವಹಿಸಿಕೊಂಡಿದ್ದರು ಆರಂಭದಲ್ಲಿ ಡಾ. ಭೋಜರಾಜ್ ಬೆಳಕುಡ ಸ್ವಾಗತಿಸಿ, ಬಸವ ಕಮಿಟಿಯ ಸದಸ್ಯರಾದ ಗಿರಿಮಲ್ಲಪ್ಪ ಸವಸುದ್ದಿ ವರದಿ ವಾಚನ ಓದಿದರು ನಂತರ ವಿದ್ಯಾರ್ಥಿನಿ, ಪ್ರಣತಿ ರಾಮಪ್ಪ ಬೆಳಕೂಡ ಬಸವಣ್ಣವರ ವಚನಗಳನ್ನು ಸವಿಸ್ತಾರವಾಗಿ ಹಾಡಿದಳು, ಈ ಸಂದರ್ಭದಲ್ಲಿ ಪುರವಂತಿಗರು ಒಡಪುಗಳ ಮುಖಾಂತರ ಜನರನ್ನು ರಂಗಿಸಿದರು ರಮೇಶ್ ಹೆಬ್ಬಾಳ್ ಶಿಕ್ಷಕರು ಕಾರ್ಯನಿರ್ವಹಿಸಿ ಕೊನೆಯಲ್ಲಿ ಪ್ರಕಾಶ್ ಗರಗಟ್ಟಿ ವಂದಿಸಿದರು, ಕೊನೆಯಲ್ಲಿ ಎಲ್ಲಾ ಸದ್ಭಕ್ತರಿಗೆ ಮಹಾಪ್ರಸಾದವನ್ನು ಇಟ್ಟುಕೊಂಡಿದ್ದರು