Homeಸುದ್ದಿಗಳುಕಲ್ಲೋಳಿ ಕಾಲೇಜಿನಲ್ಲಿ ಸಡಗರದ 'ಬಸವ ಜಯಂತಿ' ಆಚರಣೆ

ಕಲ್ಲೋಳಿ ಕಾಲೇಜಿನಲ್ಲಿ ಸಡಗರದ ‘ಬಸವ ಜಯಂತಿ’ ಆಚರಣೆ

Published on

​ಮೂಡಲಗಿ: “ಬಸವಣ್ಣನವರ ತತ್ವಗಳು ಕೇವಲ ಒಂದು ಕಾಲಕ್ಕೆ ಸೀಮಿತವಲ್ಲ, ಅವು ಸಾರ್ವಕಾಲಿಕ ಸತ್ಯಗಳು. ಅವರ ‘ಕಾಯಕವೇ ಕೈಲಾಸ’ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಶಿ. ಪಾಟೀಲರು ಕರೆ ನೀಡಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ (IQAC) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಸೋಮವಾರ ಆಚರಿಸಲಾಯಿತು.

ಬಸವಣ್ಣವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ನಮ್ಮ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗಿಲ್ಲ. ಸಂಸ್ಕಾರಯುತ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದೇ ನಮ್ಮ ಮೂಲ ಉದ್ದೇಶ. ಶರಣರ ವಿಚಾರಗಳು ನಮ್ಮ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಲಿ ಎಂದರು.

​ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಅವರು ಮಾತನಾಡುತ್ತಾ, ಶರಣರ ವಿಚಾರಧಾರೆಗಳು ಸಮಾಜದ ಪ್ರಗತಿಗೆ ಪೂರಕವಾಗಿವೆ ಎಂದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಾದ ಶಂಕರ ನಿಂಗನೂರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ಬಸವ ತತ್ವದ ಪ್ರಸಾರದಲ್ಲಿ ಯುವಜನತೆಯ ಪಾತ್ರವನ್ನು ವಿವರಿಸಿದರು.

​ಕಾರ್ಯಕ್ರಮದ ನಿರೂಪಣೆಯನ್ನು ಡಿ.ಎಸ್. ಹುಗ್ಗಿ ಅವರು ನಡೆಸಿಕೊಟ್ಟರು. ಸಮಾರಂಭದಲ್ಲಿ  ಬಿ.ಬಿ. ವಾಲಿ, ಡಾ. ಎಂ.ಬಿ. ಕುಲಮೂರ, ಡಾ. ಕೆ.ಎಸ್. ಪರವ್ವಗೋಳ, ಆರ್.ಎಸ್. ಪಂಡಿತ, ಡಾ. ಆರ್.ಎನ್. ತೋಟಗಿ,  ಬಿ.ಸಿ. ಮಾಳಿ, ಎಸ್.ಎಚ್. ಅಂಕಲಗಿ, ಎಂ.ಬಿ. ಜಾಲಗಾರ, ಎಂ.ಆರ್. ಕರಗಣ್ಣಿ, ಅಕ್ಷತಾ ಮೇದಾರ, ಬಸವರಾಜ ಶೀಗಿಹಳ್ಳಿ, ನಿರಂಜನ ಪಾಟೀಲ, ಮಂಜುನಾಥ ಗೊರಗುದ್ದಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Latest articles

More like this