ಕನ್ನಡ ಚಿತ್ರರಂಗದ ಹಾಸ್ಯ ನಟ ವೈಜನಾಥ್ ಬಿರಾದಾರ ಅವರ ಬಿರಾದಾರ ಮಿತ್ರ ಮಂಡಳಿ ವತಿಯಿಂದ ಸೇವಾ ಸದನ ರಂಗಮಂದಿರ, ಮಲ್ಲೇಶ್ವರಂ ಇಲ್ಲಿ ಡಾ. ರಾಜಕುಮಾರ ಹುಟ್ಟು ಹಬ್ಬದ ಪ್ರಯುಕ್ತ ಮೂರು ನಾಟಕಗಳು ಪ್ರದರ್ಶನಗೊಂಡವು. ಮೈಸೂರು ರಮಾನಂದರು ಬರೆದಾಡಿಸಿದ ಆಶಾವಾದಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ನಾಟಕ ಮತ್ತು ವಿಡಂಬನಾತ್ಮಕ ನಗೆ ನಾಟಕ ಎಂಡ್ ಇಲ್ಲದ ಬಂಡಾವತಾರ ಮತ್ತು ವೃತ್ತಿ ಕಂಪನಿಯ ಎಚ್.ಎಂ. ಹೂಗಾರ್ ರಚಿಸಿರುವ ವರದಕ್ಷಿಣೆ ನಾಟಕವನ್ನು ಪ್ರದರ್ಶಿಸಲಾಯಿತು.
ಅಂಬೇಡ್ಕರ್ ನಾಟಕದಲ್ಲಿ ಸಂಕ್ಷಿಪ್ತವಾಗಿ ಅವರ ಬದುಕು ಬವಣೆ, ನೋವು, ನಲಿವು ಆದರ್ಶಗಳನ್ನು ಅವರು ಎದುರಿಸಿದ ಸವಾಲುಗಳು ಬಾಬಾ ಸಾಹೇಬರ ಜೀವನ ಗಾಥೆಯನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ಕಲಾವಿದರು ಅಭಿನಯಿಸಿದರು. ಶಾಲಾ ಕಾಲೇಜುಗಳಲ್ಲಿ ಅಭಿನಯಿಸಬಹುದಾದ ನಾಟಕವಿದು. ಬಾಬಾ ಸಾಹೇಬರ ಪುಸ್ತಕ ಪ್ರೀತಿ ಹಾಗೂ ಆದರ್ಶಗಳು ಬಿಂಬಿತವಾದವು. ಬೆಳಕು ರವಿಶಂಕರ ಪ್ರಸಾದನ ಶಿವು ಮತ್ತು ವರ್ಷಿಣಿ. ಸಂಗೀತ ಹರೀಶ್ ಟಿ.ಜಿ. ನಿರೂಪಕ ಮತ್ತು ನಿರ್ದೇಶನ ಮೈಸೂರು ರಮಾನಂದ್ ಅವರದು. ನಂತರ ರಾಜಕೀಯ ವಿಳಂಬನಾತ್ಮಕ ನಗೆ ನಾಟಕ ಎಂಡ್ ಇಲ್ಲದ ಬಂಡವತಾರ ಹಾಸ್ಯದ ರಸದೌತಣ ಬರಪೂರ ನೀಡಿತು.
ಮನರಂಜನೆಯೊಂದಿಗೆ ರಾಜಕೀಯ ಸ್ಥಿತಿಗತಿಗಳನ್ನು ತಿಳಿಸಲಾಯಿತು. ಇದು ಗೆಜ್ಜೆ ಹೆಜ್ಜೆ ರಂಗ ತಂಡದವರ ನಾಟಕಗಳು. ನಂತರ ಎಚ್.ಎನ್. ಹೂಗಾರ ವಿರಚಿತ ವರದಕ್ಷಿಣೆ ಕಂಪನಿ ನಾಟಕವು ವರದಕ್ಷಿಣೆಯಿಂದ ಆಗುವ ಕಿರುಕುಳ ದುಃಖ ದುಮ್ಮಾನ ನೋವು ನಲಿವು ಎಳೆ ಎಳೆಯಾಗಿ ಪ್ರೇಕ್ಷಕರಿಗೆ ತೆರೆದಿಟ್ಟಿತು. ಕಂಪನಿ ಕಲಾವಿದರು ಅಭಿನಯಿಸಿದ್ದರು. ಗಾಯಕ ಗುರುರಾಜ ಹೊಸಕೋಟೆ, ಮಂಜುನಾಥ ಭೂಸ್ವಾಧಿನಾಧಿಕಾರಿ, ಶಿವಕುಮಾರ ಆರಾಧ್ಯ, ಗಂಡಸಿ ಸದಾನಂದ ಸ್ವಾಮಿ, ಶ್ರೀ ನಾಗರಾಜ್ ಅರೆಹೊಳೆ ಆಗಮಿಸಿ ಶುಭ ಹಾರೈಸಿ ಕಲಾವಿದರು, ತಾಂತ್ರಿಕ ವರ್ಗದವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಲಾಯಿತು.
ಈ ಕಾರ್ಯಕ್ರಮದ ಆಯೋಜನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯದು. ಕರ್ನಾಟಕ ಸರ್ಕಾರದ್ದು. 15 ವರ್ಷಗಳಿಂದ ನಿರಂತರ ರಂಗ ಕಾಯಕ ಮಾಡುತ್ತಿರುವ ಬಿರಾದಾರ ಮಿತ್ರ ಮಂಡಳಿ ಮತ್ತು 50ನೇ ವರ್ಷಕ್ಕೆ ಸಮೀಪ ಇರುವ ಹೆಜ್ಜೆಗೆಜ್ಜೆಯ ನಾಟಕಗಳು ಯಶಸ್ವಿಯಾಗಿ ಮೂಡಿ ಬಂದವು.
—
ಗೊರೂರು ಅನಂತರಾಜು,
ಹಾಸನ.
9449462879