ಕನ್ನೇರಿ ಸ್ವಾಮಿಜಿಗೆ ಕೆಲ ಕಿವಿಮಾತುಗಳನ್ನು ಹೇಳಲು ಯೋಚಿಸಿರುವೆ
ಕನ್ನೇರಿ ಸ್ವಾಮಿಗಳೇ,
ನೀವು ನಿರಂತರವಾಗಿ ಬಳಸುತ್ತಿರುವ ಕೆಲ ಪದದಳ ಅರ್ಥ ನಿಮಗೆ ಗೊತ್ತಿಲ್ಲ ನೀವು ಅವು ಉತ್ತರ ಕರ್ನಾಟಕದ ಸಾಮಾನ್ಯ ಜನರ ಪದಗಳು ಎಂದು ಹೇಳುತ್ತೀರಿ.
ನಿಮ್ಮ ಗುರುಗಳಾದ ಪರಮ ಪೂಜ್ಯ ಶ್ರೀ ಸಿದೇಶ್ವರ ಸ್ವಾಮಿಗಳು ಎಂದಿಗೂ ನೀವು ಬಳಸಿದ ಪದಗಳನ್ನು ಬಳಸಿಲ್ಲ. ನೀವು ಅವರ ಘನತೆಗೆ ಕಪ್ಪು ಮಸಿ ಹಚ್ಚುತ್ತಿದ್ದೀರಿ.
1 ಸೂಳೆಮಗ- ಸೂಳೆಗೆ ಹುಟ್ಟಿದ ಮಗು ಸಂಸ್ಕಾರದಿಂದ ಭಕ್ತ ಗುರು ಲಿಂಗ ಜಂಗಮ ಆಗಬಹುದು.
ಆದರೆ ನೀವು ಹೆಣ್ಣು ಕುಲಕ್ಕೆ ಅಪಮಾನ ಮಾಡಿದ ಚಮ್ಮಾವಿಗೆ ಮಾಡು ಎಂದು ಬಸವಣ್ಣ ಹೇಳಿದ್ದಾರೆ ನೀವು ಅವರ ಹೆಸರಿನಲ್ಲಿ ನೀವು ಇಂತಹ ಅತ್ಯಂತ ಅಸಂವಿಧಾನಿಕ ಪದಗಳನ್ನು ಬಳಸಿ ನಾಗರಿಕ ಸಮಾಜ ಮತ್ತು ಮಠಾಧೀಶರ ಗೌರವವನ್ನು ಹಾಳು ಮಾಡುತ್ತಿದ್ದೀರಿ.
3 ಬಡ್ಡಿ ಮಗ
ನೀವು ಬಳಸುವ ಈ ಪದ ಅತ್ಯಂತ ಕೆಟ್ಟ ಸಂಗತಿ ಹೊಂದಿದೆ. ಶ್ರೀಮಂತನ ಹತ್ತಿರ ಸಾಲ ಪಡೆದ ಬಡ ಮಹಿಳೆ ಸಾಲದ ಬಡ್ಡಿಯನ್ನು ಕಟ್ಟಲಾಗದೆ ಅಂತಹ ಶ್ರೀಮಂತನಿಗೆ ಒತ್ತಾಯಪೂರ್ವಕವಾಗಿ ಮನಸಿಲ್ಲದೆ ಸೆರಗು ಹಾಸಿ ಅಂತಹ ಅನೈತಿಕ ದೈಹಿಕ ಶೋಷಣೆಯಿಂದ ಹುಟ್ಟಿದ ಮಗ ಎಂಬ ಅರ್ಥ ಕನ್ನೇರಿ ಸ್ವಾಮಿಗಳೇ ನಿಮಗಿದು ಗೊತ್ತಿದೆಯೇ?
4 ಮುಠ್ಠಾಳ
ಮಹಿಳೆಯರ ಮುಟ್ಟನ್ನು ಹಾಳು ಮಾಡುವವ ಎಂದರ್ಥ
ಎಷ್ಟು ಅಸಹ್ಯ ಅಸಂವಿಧಾನ ಪದಗಳನ್ನು ನೀವು ಬಳಸುತ್ತೀರಿ.
ನೀವು ಹಿಂದೂ ಸಮಾವೇಶ ಮಾಡಿ ಕೊಳ್ಳಿ. ಆದರೆ ಅದಕ್ಕೆ ವೈದಿಕ ವ್ಯವಸ್ಥೆಯ ವಿರೋಧಿ
ಬಸವಣ್ಣ ಮತ್ತು ಶರಣರ ಹಿಂದೂ ಸಮಾವೇಶ ಎಂದು ಕರೆಯ ಬೇಡಿರಿ.
ಐನೂರು ವಚನಗಳಲ್ಲಿ ವೇದ ಆಗಮ ಶಾಸ್ತ್ರ ಹಾಗೂ ಪುರಾಣಗಳನ್ನು ಧಿಕ್ಕರಿಸಿದ ಶರಣರು ಸರ್ವಕಾಲಿಕ ಸಮಾನತೆ ಮತ್ತು ವಿಶ್ವ ಮಾನವ ಪ್ರೀತಿಯನ್ನು ಹೊಂದಿದ್ದಾರೆ.
ಬಸವಾದಿ ಶರಣರ ಹೆಸರಿಗೆ ಸನಾತನದ ವ್ಯವಸ್ಥೆ ತಳಕು ಹಾಕ ಬೇಡಿ
ಇದು ನಿಮಗೆ ಸಲಹೆ ಸೂಚನೆ ಎಂದು ಪರಿಗಣಿಸಿ ಇಲ್ಲಾ ಅಂದರೆ ಮುಂಬರುವ ದಿನಗಳಲ್ಲಿ ಎಚ್ಚರಿಕೆ ಎಂದು ಪರಿಗಣಿಸಿ.
________________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ