ಮೂಡಲಗಿ – ‘ಸಮುದ್ರ ಪಾಲಾದ ನಾವೆ ; ಭೀಕರ ವೀಡಿಯೋ’ ಎಂಬ ತಲೆಬರಹದ ಅಡಿಯಲ್ಲಿ ಇಂದು ಪ್ರಕಟವಾದ ಸುದ್ದಿಗೆ ನಮ್ಮ ಓದುಗ ಮಿತ್ರ, ಪೊಲೀಸರೂ ಆದ ಎಮ್ ಬಿ ಕರಣಿಯವರು ಪ್ರತಿಕ್ರಿಯೆ ನೀಡಿದ್ದು ಆ ಘಟನೆ ಹಳೆಯದು ಹಾಗೂ ಬಹಾಮಾಸ್ ದ್ವೀಪ ಸಮುದ್ರದಲ್ಲಿ ನಡೆದ ಘಟನೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಘಟನೆಯು ೨೦೨೩ ರಲ್ಲಿ ಬಹಮಾಸ್ ದ್ವೀಪ ಸಮುದ್ರದಲ್ಲಿ ನಡೆದಿದೆ. ಸುಮಾರು ನೂರಕ್ಕೂ ಹೆಚ್ಚು ಜನರನ್ನು ಕೊಂಡೊಯ್ಯುತ್ತಿದ್ದ ಡಬಲ್ ಡೆಕ್ಕರ್ ಪ್ರವಾಸಿ ಬೋಟ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮಗುಚಿದ ವಿಡಿಯೋ ಇದಾಗಿದೆ.
ಈ ವಿಡಿಯೋ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಜೆಮಿನಿ AI ಕೇಳಿದರೆ ಅದು ಬಹಾಮಾಸ್ ದ್ವೀಪ ಸಮುದ್ರದ ವಿಡಿಯೋ ಎಂದು ಹೇಳಿದರೆ, ವಾಟ್ಸಪ್ ನ Meta AI ಕೇಳಿದಾಗ ಬೇರೆಯೇ ಉತ್ತರ ಬಂದಿತು.
ಈ ಬೋಟ್ ಅಪಘಾತದ ಘಟನೆ ಸಂಭವಿಸಿದ್ದು ಆಫ್ರಿಕಾದ ಕಾಂಗೋ ರಿಪಬ್ಲಿಕ್ ನ ಗೋಮಾ ಹತ್ತಿರದ ಕಿವು ಲೇಕ್ ನಲ್ಲಿ !
ಘಟನೆ ನಡೆದಿದ್ದು ; ಅಕ್ಟೋಬರ್ ೨೦೨೪ ರಲ್ಲಿ ಸುಮಾರು ೭೮ ಜನ ಮರಣ ಹೊಂದಿದ್ದರು ಎಂದು Meta AI ಹೇಳುತ್ತದೆ!
ಹಳೆಯ ವಿಡಿಯೋವನ್ನೇ ನಮ್ಮ ಪತ್ರಿಕೆಗೆ ಕಳಿಸಿದ ನಮ್ಮ ಹಿತೈಷಿಯೊಬ್ಬರು ಈ ಘಟನೆ ಗೋವಾದಲ್ಲಿ ನಡೆದಿದ್ದಾಗಿ ತಿಳಿಸಿ ನಮ್ಮ ದಾರಿ ತಪ್ಪಿಸಿದರೆನ್ನಬೇಕಾಗುತ್ತದೆ !
ತಪ್ಪದೇ ನಮ್ಮ ಪತ್ರಿಕೆಯನ್ನು ಓದಿ ನಿಜ ಸಂಗತಿ ತಿಳಿಸಿದ ಸ್ನೇಹಿತ ಕರಣಿಯವರ ಕಾಳಜಿಗೆ ಪತ್ರಿಕೆಯ ವತಿಯಿಂದ ಕೃತಜ್ಞತೆಗಳು. – ಸಂ.