ಬೆಳಗಾವಿ – ಶಿವಂ ಅಸೋಸಿಯೇಟ್ಸ್ ಕಂಪನಿ ಮಾಲೀಕ ಶಿವಾನಂದ ನೀಲಣ್ಣವರ ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವುದು ಸಾಬೀತಾಗಿದೆ. ಸದ್ಯದಲ್ಲಿಯೇ ಆತನಿಗೆ ಶಿಕ್ಷೆಯಾಗಲಿದೆ ಎಂದು ಬೆಳಗಾವಿಯಲ್ಲಿ ಸಿಐಡಿ ಡಿಐಜಿಪಿ ಭೀಮಾಶಂಕರ್ ಗುಳೇದ್ ವಿಶ್ವಾಸ ವ್ಯಕ್ತಪಡಿಸಿದರು.
ಸುಮಾರು 4500ಕೋಟಿ ಹಗರಣದ ಕುರಿತಂತೆ ಮಹತ್ವದ ಸುದ್ಧಿಗೋಷ್ಠಿ ನಡೆಸಿದ ಅವರು, ಶಿವಾನಂದ ಹೊಸದಾಗಿ ಬಂದ ಹಣವನ್ನು ಹಳಬರಿಗೆ ಬಡ್ಡಿ ಕೊಡುತ್ತಿದ್ದ
ಆತ ಸಂಗ್ರಹಿಸುತ್ತಿದ್ದ ಹಣಕ್ಕಿಂತ ಬಡ್ಡಿ ಕೊಡುವ ಹಣ ಹೆಚ್ಚಾದರೆ ಆಗ ನಿಂತು ಹೋಗ್ತಿತ್ತು. ಇಲ್ಲಿವರೆಗೂ ಸಾರ್ವಜನಿಕರಿಂದ 2,400ಕೋಟಿ ಹಣವನ್ನ ಸಂಗ್ರಹಿಸಿದ್ದಾನೆ. ಇದರಲ್ಲಿ ಸುಮಾರು ದುಡ್ಡನ್ನು ಸಾರ್ವಜನಿಕರಿಗೆ ಹಿಂದಿರುಗಿಸಿದ್ದಾನೆ ಎಂದರು.
540ಕೋಟಿ ಹಣ ಸ್ಟಾಕ್ ಮಾರ್ಕೆಟ್ ನಲ್ಲಿ ಹಾಕಿದ್ದಾನೆ. ಇದರಲ್ಲಿ 170ಕೋಟಿ ಹಣವನ್ನ ಕಳೆದುಕೊಂಡಿದ್ದಾನೆ. ಇಲ್ಲಿ ವರೆಗೂ ತನಿಖೆಯಲ್ಲಿ 660ಕೋಟಿ ಹಣ ಕೊರತೆ ಕಂಡು ಬಂದಿದೆ. 330ಕೋಟಿ ರಿಕವರಿ ಆಗುತ್ತದೆ ಎಂದ ಭೀಮಾಶಂಕರ್ ಗುಳೇದ, 40,700ಜನರಿಂದ ಹೂಡಿಕೆ ಮಾಡಿಕೊಂಡಿದ್ದು ಕಂಡು ಬಂದಿದೆ. ಈತನೊಟ್ಟಿಗೆ ಇನ್ನೊಬ್ಬ ಪಾರ್ಟ್ನರ್ ಇದಾನೆ. ಕಂಪನಿಯಿಂದ ಅಕ್ರಮವಾಗಿ ನೀಲಣ್ಣವರ್ ಸ್ವಂತಕ್ಕೆ 55ಕೋಟಿ ಹಣ ಹಾಕಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಆತನಿಂದ ಐದು ಐಷಾರಾಮಿ ಕಾರು ಜಪ್ತಿ ಮಾಡಿಕೊಂಡಿದ್ದೇವೆ. ಇನ್ನೂ 11 ವೋಲ್ವೋ ಎಕ್ ಸಿ 90 ಕಾರು ಖರೀದಿ ಮಾಡಿದ್ದು ಅವುಗಳನ್ನ ಕೂಡ ಶೀಘ್ರದಲ್ಲಿ ಜಪ್ತಿ ಮಾಡುತ್ತೇವೆ. ಇಲ್ಲಿಯವರೆಗೂ 400ಕೋಟಿ ಹೆಚ್ಚುವರಿಯಾಗಿ ಹೂಡಿಕೆದಾರರಿಗೆ ಹೋಗಿದೆ.ಆ ಹಣವನ್ನ ವಾಪಾಸ್ ಪಡೆದು ಇನ್ನುಳಿದ ಹೂಡಿಕೆದಾರರಿಗೆ ನೀಡುತ್ತೇವೆ ಎಂದರು.
ಶಿವಾನಂದನ ವಿರುದ್ಧ ಎಫ್ಐಆರ್ ಆದ ಮೇಲೂ ನಾಲ್ಕೈದು ಕೋಟಿ ಹಣ ಡೆಪಾಸಿಟ್ ಆಗಿದೆ ಎಂದ ಅವರು, 30 ಅಕೌಂಟ್ ಸಿಕ್ಕಿದ್ದು ಇದರಲ್ಲಿ 7 ಅಕೌಂಟ್ ಗಳಲ್ಲಿ ಹೆಚ್ಚಿನ ಹಣ ವರ್ಗಾವಣೆ ಆಗಿದೆ.36,200ಪೇಜ್ ಒಂದೇ ಅಕೌಂಟ್ ದಲ್ಲಿ ಆಗಿದ್ದು ತನಿಖೆ ನಡೆಯುತ್ತಿದೆ. ಸಿನೆಮಾ ಸ್ಟಾರ್ ಗಳಿಗೆ ಅಸೋಸಿಯೇಟ್ ದಿಂದ ಹಣ ಹೋಗಿದ್ದರೆ ಅವರಿಗೂ ನೋಟೀಸ್ ಕೊಟ್ಟು ವಿಚಾರಣೆಗೆ ಕರೆಸುತ್ತೇವೆ. ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಹೂಡಿಕೆ ಇದೆ. ಮಹಾರಾಷ್ಟ್ರ ಪೊಲೀಸರ ಸಹಕಾರ ಪಡೆದು ತನಿಖೆ ಮಾಡುತ್ತಿದ್ದೇವೆ.
ರಿಕವರಿ ಬಳಿಕ ಬಡ್ಸ್ ಕಾಯ್ದೆ ಮುಖ್ಯಸ್ಥ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ನೀಡುತ್ತೇವೆ ಅವರು ಸಾರ್ವಜನಿಕರಿಗೆ ಹಣ ವಾಪಾಸ್ ಕೊಡ್ತಾರೆ. ಕಂಪನಿ ಮುಳುಗುವ ಮುನ್ನ ಜಿಲ್ಲಾಡಳಿತ ದಾಳಿ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ ಎಂದು ಭೀಮಾಶಂಕರ ಗುಳೇದ ವಿವರ ಬಿಚ್ಚಿಟ್ಟರು