ಬೆಳಗಾವಿ : ಹಿರಿಯ ಸಾಹಿತಿಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರಿಗೆ ಅವರ ದೀರ್ಘ ಸಾಹಿತ್ಯ ಸೇವೆಗಾಗಿ ಸವದತ್ತಿಯ ಸಹೃದಯ ಸಾಹಿತ್ಯ ಪ್ರತಿಷ್ಠಾನ ರಾಜ್ಯ ಮಟ್ಟದ ಸಹೃದಯ ಗೌರವ ಪ್ರಶಸ್ತಿ ನೀಡಿ ಗೌರವಿಸಿತು.
ಡಾ. ಬಸವರಾಜ ಜಗಜಂಪಿಯವರು ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತ ಹೊಸಬರನ್ನು ಪ್ರೋತ್ಸಾಹಿಸಿ ಬೆಳಸುತ್ತ ಬಂದಿರುವ ಶಾಸ್ತ್ರಿಯವರು ಎಲ್ಲ ಬಗೆಯಲ್ಲಿ ಪ್ರಶಸ್ತಿಗೆ ಅರ್ಹರಿದ್ದಾರೆಂದರು.
ಇದೇ ಸಂದರ್ಭದಲ್ಲಿ ಸಹೃದಯ ಪ್ರತಿಷ್ಠಾನದ ನಾಲ್ಕನೆಯ ವರ್ಷದ ಕಾವ್ಯ / ಗಝಲ್ ಪುಸ್ತಕ ಪ್ರಶಸ್ತಿಗಳನ್ನು ನಾಗರೇಖಾ ಗಾಂವಕರ ಮತ್ತು ಲಕ್ಷ್ಮೀಕಾಂತ ಮಿರಜಕರ ಅವರ ಕವನಸಂಕಲನಗಳಿಗೆ ಅವರಿಗೆ ನೀಡಲಾಯಿತು. ಶಿರೀಷ ಜೋಶಿ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ಡಾ. ಪಿ. ಜಿ. ಕೆಂಪಣ್ಣವರ , ಕಾರ್ಯಪಾಲಕ ಇಂಜಿನಿಯರ್ ವಿಠ್ಠಲ ತಡಸಲೂರ, ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ನಾಗೇಶ ನಾಯಕ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಂತರ ಕವಿಗೋಷ್ಠಿ ನಡೆಯಿತು.