ಸಮಾಜದಲ್ಲಿ ಅಶಾಂತಿ ದ್ವೇಷ ಮತ್ಸರ ಬಿತ್ತುವ ಕನ್ನೇರಿ ಮಠದ ಅದೃಶ್ಯ ಶ್ರೀ ಕಾಡ ಸಿದ್ದೇಶ್ವರ ಶ್ರೀಗಳು 28 ಜೂನ್ 2026 ರಂದು ಮಹಾಮಾನವತಾವಾದಿ ವಿಶ್ವ ಗುರು ಬಸವಣ್ಣನವರ ಕರ್ಮ ಭೂಮಿ ಬಸವ ಕಲ್ಯಾಣದಲ್ಲಿ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಕರ್ನಾಟಕ ರಾಜ್ಯ ಸರ್ಕಾರ ನಿಷೇಧಿಸ ಬೇಕು.
ಬಸವ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕನ್ನೇರಿ ಮಠದ ಅದೃಶ್ಯ ಶ್ರೀ ಕಾಡ ಸಿದ್ದೇಶ್ವರ ಶ್ರೀಗಳು ಸಮಾಜದಲ್ಲಿ ಗೊಂದಲ ನಿರ್ಮಿಸುತ್ತಿದ್ದಾರೆ. ಅವರು ಬಳಸುವ ಅಸಂವಿಧಾನ ಪದಗಳನ್ನು ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದೆ.
ಕನ್ನೇರಿ ಮಠದ ಅದೃಶ್ಯ ಶ್ರೀ ಕಾಡ ಸಿದ್ದೇಶ್ವರ ಶ್ರೀಗಳು ಬಸವಣ್ಣನವರ ಅವೈದಿಕ ಹಿಂದುಯೇತರ ಚಿಂತನೆಗಳನ್ನು ಮರೆ ಮಾಚಿ ವೈದಿಕ ಸನಾತನ ಧರ್ಮದ ಒಂದು ಭಾಗವೇ ಲಿಂಗಾಯತ ಧರ್ಮ ಎಂದು ಪ್ರತಿಪಾದಿಸಿ ಬಸವ ಭಕ್ತರ ಭಾವನೆಗಳಿಗೆ ಧಕ್ಕೆ ನೋವು ಉಂಟು ಮಾಡುತ್ತಿದ್ದಾರೆ. ಅತ್ಯಂತ ಅಶ್ಲೀಲ ಪದಗಳನ್ನು ಉಪಯೋಗಿಸುವ ಕನ್ನೇರಿ ಮಠದ ಅದೃಶ್ಯ ಶ್ರೀ ಕಾಡ ಸಿದ್ದೇಶ್ವರ ಶ್ರೀಗಳು ಅದನ್ನೇ ಬಂಡವಾಳ ಮಾಡಿಕೊಂಡು ಹಿಂಸೆ ಪ್ರಚೋದನೆ ಮಾಡುವ
ಭಾಷಣ ಮಾಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರ ಕನ್ನೇರಿ ಮಠದ ಅದೃಶ್ಯ ಶ್ರೀ ಕಾಡ ಸಿದ್ದೇಶ್ವರ ಶ್ರೀಗಳ ಬಸವ ಕಲ್ಯಾಣ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ಇವರು ಸರಕಾರವನ್ನು ಆಗ್ರಹಿಸಿದ್ದಾರೆ. ಇದರ ಜೊತೆಗೆ ಬಸವಾದಿ ಶರಣರ ಹಿಂದೂ ಸಮಾವೇಶ ಬಹಿಷ್ಕರಿಸುವ ಹಿನ್ನೆಲೆಯಲ್ಲಿ ದಿನಾಂಕ 27 ಮತ್ತು 28 ಜೂನ್ ರಂದು ಬಸವ ಕಲ್ಯಾಣ ಮತ್ತು ಬೀದರ ನಗರವನ್ನು ಬಸವ ಪರ ಸಂಘಟನೆಗಳು ಸಂಪೂರ್ಣ ಬಂದ ಮಾಡಿ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ವಿಫಲಗೊಳಿಸ ಬೇಕು. ಕನ್ನೇರಿ ಮಠದ ಅದೃಶ್ಯ ಶ್ರೀ ಕಾಡ ಸಿದ್ದೇಶ್ವರ ಶ್ರೀಗಳು ತಮಗೆ ಬೇಕಿದ್ದರೆ ಹಿಂದೂ ಸಮಾವೇಶ ನಡೆಸಿ ತಮ್ಮ ಧರ್ಮ ಸಿದ್ಧಾಂತದ ಬಗ್ಗೆ ಚರ್ಚೆ ಸಭೆ ನಡೆಸಲಿ. ಅದನ್ನು ಬಿಟ್ಟು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವುದಕ್ಕೆ ನಮ್ಮೆಲ್ಲರ ವಿರೋಧವಿದೆಯೆಂದು ಸ್ಪಷ್ಟ ಪಡಿಸಿದರು.
ಪ್ರೊ ಶಾರದಮ್ಮ ಪಾಟೀಲ ಬಾದಾಮಿ ಡಾ ಜಯಶ್ರೀ ಪಟ್ಟಣ ಡಾ ಸರಸ್ವತಿ ಪಾಟೀಲ ಸುಧಾ ಪಾಟೀಲ ಅಕ್ಕ ಮಹಾದೇವಿ ತೆಗ್ಗಿ ರತ್ನಕ್ಕ ಬಿರಾದಾರ ಸಿದ್ದಪ್ಪ ಪಡನಾಡ ಡಾ ಶಾರದಾಮಣಿ ಹುನಶಾಳ ವಿಜಯಲಕ್ಷ್ಮಿ ಹಂಗರಗಿ ಗೌರಮ್ಮ ನಾಶಿ ಪ್ರೊ ಪ್ರೇಮಕ್ಕ ಅಣ್ಣಿಗೇರಿ ಮತ್ತು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಅಕ್ಕನ ಅರಿವು ಬಸವಾದಿ ಶರಣರ ಚಿಂತನ ಕೂಟಗಳುಬಸವಾದಿ ಶರಣರ ಹಿಂದೂ ಸಮಾವೇಶವನ್ನು ಬಸವ ಕಲ್ಯಾಣದಲ್ಲಿ ನಿರ್ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.