Homeಸುದ್ದಿಗಳುಕವನಕವನ : ಎಸ್ ಜಾನಕಿ

ಕವನ : ಎಸ್ ಜಾನಕಿ

Published on

ಸ್ವರ ಸಾಮ್ರಾಜ್ಞಿ ಎಸ್. ಜಾನಕಿ

ಮಧುರ ಕಂಠದ
ಮೌನ ಮಂತ್ರ
ಮನದಾಳ ಮುಟ್ಟಿದ
ಸುಮಧುರ ತಂತ್ರ
ಸ್ವರದ ಅಲೆಗಳಲ್ಲಿ
ಭಾವದ ಸಾಗರ
ಎಸ್ ಜಾನಕಿ ಎಂಬ
ಸಂಗೀತದ ಆಗರ

ನಗುವಿನಲ್ಲೂ ನೋವಿತ್ತು
ನೋವಿನಲ್ಲೂ
ಮಧುರತೆ ಇತ್ತು
ಪ್ರತಿಯೊಂದು ಹಾಡು
ಜೀವ ತುಂಬಿ
ಕೇಳುಗರ
ಹೃದಯದಲ್ಲಿ ನೆಲೆಗೊಂಡಿತ್ತು

ಭಾಷೆಗಳ ಗಡಿಯನ್ನು ದಾಟಿ
ಸೇತುವೆ ಕಟ್ಟಿದಳು
ಕನ್ನಡದ ಕೋಗಿಲೆಯಾಗಿ
ಕೋಟಿ ಮನಗಳಲಿ
ಗೂಡು ಕಟ್ಟಿದಳು

ಅವಳ ಸ್ವರ ಅಮೃತಧಾರೆ
ಕಾಲವನ್ನೂ ಮೀರುವ ಸಾಗರ
ಎಂದೆಂದಿಗೂ ಹಸಿರು
ಅವಳ ಹಾಡುಗಳು
ಚಿರಸ್ಮರಣೀಯ
ಎಸ್. ಜಾನಕಿ ಎಂಬ ಹೆಸರು

ಸ್ವರಕ್ಕೆ ವಯಸ್ಸಿಲ್ಲ
ಸಂಗೀತಕ್ಕೆ ಅಂತ್ಯವಿಲ್ಲ
ಎಸ್ ಜಾನಕಿ ಅವರ
ಗಾನ ಗಂಗೆ
ಸದಾ ಹರಿಯುತಿರಲಿ
ಎಲ್ಲರ ಹೃದಯಗಳಲ್ಲಿ

ಸುಧಾ ಪಾಟೀಲ
ಬೆಳಗಾವಿ

Latest articles

More like this