ಮುಖವಾಡ ಮತ್ತು ಮರೀಚಿಕೆ
ಬೆನ್ನ ಹಿಂದೆ
ಯಾರೋ ಮಾತಾಡಿದ್ದನ್ನು
ಮನ್ನಿಸಿಬಿಡು
ಹೊಸ ದಾರಿಯಾದರೂ ಸಿಕ್ಕೀತು.
ಕಣ್ಣ ಮುಂದೆ
ದ್ವೇಷವಾಸಿಗಳ
ತಪ್ಪುಗಳು ಬೆವರಿಸಿದರೂ
ನಿನಗೆ ನೀನು
ಸಂತೈಸಿಕೊಂಡುಬಿಡು
ಗಾಯವಾದರೂ ಮಾದೀತು.
ನಗುವ ಮೊಗದೊಳಗೆ
ಮುಖವಾಡದ
ನಶೆ ಗಮನಿಸು
ಒಳ ವಿಕಾರವ
ಸಹಿಸಿಬಿಡು
ಸ್ವಂತಿಕೆಯ ಬದುಕಾದರೂ
ಸಿಕ್ಕೀತು
ಒಳ್ಳೆಯವರ
ಒಲವ ಮಾತೇ ಹೊರತು,
ಸತ್ಯದ ಮರೀಚಿಕೆ
ಗಮನಿಸು
ಮತೀಯ ದ್ವೇಷವ
ಅರಿವಾದೀತು
ಕುದಿಯುವ ಜಗದಲಿ
ನಿನ್ನತನದ ಮೌನವೇ ಶಸ್ತ್ರ!
ಅರಿವಿನ ಬೆಂಕಿಗೆ ಬಿದ್ದ ಮೇಲಷ್ಟೇ
ಬೂದಿಯಾಗುವುದು ಹುಸಿ ಶತ್ರು.
ತೋರಿಕೆಯ ಬದುಕಿಗೆ ಕೊನೆ ಇದೆ,
ಯಾರೋ ಮಾತಾಡಿದ ಮಾತುಗಳಿಗೇಕೆ ಚಿಂತೆ
ಇದು ಸಂತೆಯ ಗದ್ದಲ
ನಿರುಮ್ಮಳವಾಗಿಬಿಡು
ಸಂತಸ ಸಾರ
ಅಮೃತವಾದೀತು.
••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ