Homeಕವನಕವನ : ಆಚಾರವೇ ಲಿಂಗ

ಕವನ : ಆಚಾರವೇ ಲಿಂಗ

Published on

ಆಚಾರವೇ ಲಿಂಗ

ತನ್ನರಿವೆ ತನಗೆ
ಗುರುವಾದ ಕಾರಣ
ಮತ್ತೆ ಬೇರೊಬ್ಬ
ಗುರು ಇಲ್ಲವಯ್ಯಾ
ತನ್ನ ಚಿತ್ಕಳೆ ತನಗೆ
ಲಿಂಗವಾದ ಕಾರಣ
ಮತ್ತೆ ಬೇರೊಂದು
ಲಿಂಗ ಇಲ್ಲವಯ್ಯಾ
ತನ್ನ ಚೈತನ್ಯವೇ ತನಗೆ
ಜಂಗಮವಾದ ಕಾರಣ
ಮತ್ತೆ ಬೇರೆ
ಜಂಗಮ ಇಲ್ಲವಯ್ಯಾ
ತನಗೆ ಅರಿವೆ ಗುರು
ಆಚಾರವೇ ಲಿಂಗ
ಅನುಭಾವವೇ ಜಂಗಮ
ಎಂದರಿತ ಮಹಾಶರಣನ
ಪಾದವ ಎನಗೊಮ್ಮೆ ತೋರಿ
ಎನ್ನನು ಬದುಕಿಸಯ್ಯ
ಬಸವ ಪ್ರಿಯ ಶಶಿಕಾಂತ
______________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this