ಕಲ್ಪವೃಕ್ಷ
ಬೆಳೆದು ಮರವಾದಾಗ
ಕಲ್ಪವೃಕ್ಷ ಎನ್ನುವರು ನನ್ನ
ಗರಿಯಾದಾಗ ಮದುವೆಯ
ಮಂಟಪದ ಸಿರಿಯಾಗುವೆ
ಕಾಯಿ ಆದಮೇಲೆ
ದೇವರಿಗೆ ಕಳಶವಾಗುವೆ
ಇನ್ನೂ ಏನು ಹೇಳಲಿ
ನಿನ್ನ ಬಗ್ಗೆ ಪದಗಳು
ಸಾಲದು
ಎಳೆಯದಲ್ಲಿ ಎಳನೀರು
ಕಾಯಾಗಿ ದೇವರಿಗೆ ಅಭಿಷೇಕವಾಗಿ
ಮನುಷ್ಯರಿಗೆ
ಅನಾರೋಗ್ಯದಲ್ಲಿ
ಬೇಕಾಗುವೆ ಎಳನೀರು
ರೋಗಿಗಳಿಗೆ
ಸಂಜೀವಿನಿಯಾಗಿ
ಮರು ಚೈತನ್ಯ ನೀಡುವ
ನಿನ್ನ ಗುಣ ಅದ್ಭುತ
ಮುಪ್ಪಿನಲ್ಲಿ
ಚಿಪ್ಪೊಳಗೆ ಆಕೃತಿಯಾಗಿ
ಜುಬ್ರದಲ್ಲಿ ಗೊಬ್ಬರವಾಗಿ
ಕೊಬ್ಬರಿಯಲ್ಲಿ
ಸಿಹಿಯಾದ ಹೋಳಿಗೆಯಾಗಿರುವೆ
ವಿಧವಿಧದಲಿ ನನ್ನನ್ನು
ಬಳಸುವರು
ಗೃಹೋಪಯೋಗಿ ವಸ್ತುಗಳು
ಪೂಜ್ಯನೀಯ ವಸ್ತುಗಳು
ಬಳಸುತ್ತ ಹೇಳುವರು ಕಲ್ಪವೃಕ್ಷವೆಂದು
ಮನೆ ಮಕ್ಕಳನ್ನು ಮರೆತು
ಎತ್ತರವಾಗಿ ಬೆಳೆದು
ಎಳನೀರು ನೀಡಿ
ಮನವ ತಣಿಸುವೆ ನೀನು
ಎಲ್ಲಾ ರೀತಿ ಉಪಯೋಗವಾಗಿ
ಕಲ್ಪವೃಕ್ಷ ಆಗಿರುವೆ
ಶ್ರೀಮತಿ ಲಲಿತಾ ಪ್ರಶಾಂತ ಸಿಂಗ್ ಟೋಪಣ್ಣವರ
ಶರೇವಾಡ