ಪರದೇಶಿ ಮಿತ್ರನಿಗೊಂದು ಪತ್ರ
ತಡವಾಗಿ ಪತ್ರ ಬರೆಯುತ್ತಿರುವೆ ಮಿತ್ರ ಬೇಸರ ಬೇಡ
ಈಗಷ್ಟೇ ಇಲ್ಲಿ ಮೋಡ ಕಟ್ಟಿದೆ
ಮಳೆಯೇ ಬಿದ್ದಿಲ್ಲ ಆಗಲೇ ಹೊಳೆಯ ನೀರಿಗಾಗಿ ಕೂಗಾಡಿವರ ಧ್ವನಿಯೂ ಕೆಟ್ಟಿದೆ
ಹಸಿವು ಮುಕ್ತ ಭಾರತ
ಹಸಿರು ಕಾರ್ಡಿಗಾಗಿ ಬಂದ ಅಕ್ಕಿ ಇಲ್ಲಿ ಮಾಯವಾಗಿದೆ ಅಲ್ಲಿಗೆ ಬಂದಿದೆಯೆಂದು ಸುದ್ದಿ ಬಂದಿದೆ ನೀನು ಖರೀದಿಸಿದೆಯ ಹೇಗೆ ?
ಟ್ರಂಪ್ ದಾಳಿಯಿಂದ ಅಲ್ಲಿ
ಕೊಲ್ಲಿ ಯುದ್ಧದ ಬಿಸಿ ವಿಶ್ವದ ಬಿಪಿ ಏರಿಸಿದ್ದರೆ ಇಲ್ಲಿ ಚಿನ್ನದ ಬೆಲೆ ಏರಿದೆ
ರೈತರ ಪ್ರಗತಿ ಯೋಜನೆಗೆ ವಿಶೇಷ ಅಧ್ಯಯನಕ್ಕೆಂದು ಅಲ್ಲಿಗೆ ನಮ್ಮ ಮಂತ್ರಿ ಮಾನ್ಯರು ಬಂದಿದ್ದಾರೆ
ಅಲ್ಲಿ ಏನು ಅಧ್ಯಯನ ಮಾಡುತ್ತಿದ್ದಾರೆ ಪರಿಶೀಲಿಸು
ಅಲ್ಲಿ ಲಂಚ ಹೇಗೆ ಸಾಗಿದೆ ಕೊಂಚ ತಿಳಿಸು ಇಲ್ಲಿ ಮೇಲಿನವರು ಮನೆ ಕದ್ದರೆ ಕೆಳಗಿನವರು ಹೆಂಚು ಗಳ
ಹಂಚಿಕೊಳ್ಳುತ್ತಿದ್ದಾರೆ
ಸ್ವಲ್ಪ ಚಿನ್ನ ಕಳಿಸು ಮಾರಾಯ
ನನ್ನಾಕೆ ಚಿನ್ನದ ಬಳೆಗಾಗಿ ಪೀಡಿಸುತ್ತಿದ್ದಾಳೆ
ಚಿನ್ನಕ್ಕೆ ಯಾವತ್ತಿದ್ದರೂ ಬೆಲೆಯಂತೆ
ಮನುಷ್ಯನಿಗೆ ಇಲ್ಲವಂತೆ…!
—
ಗೊರೂರು ಅನಂತರಾಜು,
ಹಾಸನ.
ಮೊಬೈಲ್: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್,
3ನೇ ಕ್ರಾಸ್,
ಹಾಸನ-574201